ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಜೊತೆಯಲ್ಲಿರುವ ನಾಲ್ವರಲ್ಲಿ ಕೊರೋನಾ ಸೋಂಕು

ಬೆಂಗಳೂರು: ಕಾಂಗ್ರೆಸ್ ಶಾಸಕ ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರ ಗನ್’ಮ್ಯಾನ್ ಸೇರಿ ಅವರ ಜೊತೆಯಲ್ಲಿರುವ ನಾಲ್ವರಲ್ಲಿ ಕೊರೋನಾ ವೈರಸ್ ಪಾಸಿಟಿವ್ ದೃಢಪಟ್ಟಿದೆ ಎನ್ನಲಾಗಿದೆ.

ಈ ಕುರಿತು ಶಾಸಕ ದಿನೇಶ್ ಗುಂಡೂರಾವ್ ಪತ್ನಿ ಟಬು ರಾವ್ ಟ್ವೀಟ್ ಮಾಡಿ ಮಾಹಿತಿ ಹಂಚಿಕೊಂಡಿದ್ದಾರೆ. ಆಪ್ತಸಹಾಯಕ, ಗನ್ ಮ್ಯಾನ್ ಹಾಗೂ ಮತ್ತಿಬ್ಬರಲ್ಲಿ ಸೋಂಕು ಕಂಡುಬಂದಿದೆ. ನಾವೂ ಪರೀಕ್ಷೆಗೊಳಗಾಗಿದ್ದು ನಮ್ಮಲ್ಲಿ ವೈರಸ್ ದೃಢಪಟ್ಟಿಲ್ಲ. ಆದರೂ 10-14 ದಿನಗಳ ಕಾಲ ಐಸೋಲೇಷನ್ ಮತ್ತು ಕ್ವಾರಂಟೈನ್ ನಲ್ಲಿದ್ದೇವೆ. ಎಂದವರು ಟ್ವೀಟ್ ಮಾಡಿದ್ದಾರೆ.

Related posts