ಟೈಗರ್ ಶ್ರಾಫ್ ಅಭಿನಯದ ‘ಗಣಪತ್’ ಟೀಸರ್ ಅಬ್ಬರ

ಕೊರೋನಾ ಲಾಕ್’ಡೌನ್ ನಂತರ ಸ್ತಬ್ಧವಾಗಿದ್ದ ಚಿತ್ರೋದ್ಯಮದ ಚಟುವಟಿಕೆಗಳು ಇದೀಗ ಬಿರುಸುಗೊಂಡಿವೆ. ಚಿತ್ರ ಪ್ರದರ್ಶನ ಕಷ್ಟಸಾಧ್ಯವಾದರೂ ನಿರ್ಮಾಣ ಕಾರ್ಯ ನಿರಾತಂಕವಾಗಿ ಸಾಗಿವೆ. ಇದೀಗ ಒಂದೊಂದೇ ಟೀಸರ್, ಟ್ರೇಲರ್’ಗಳು ಬಿಡುಗಡೆಯಾಗುತ್ತಿದ್ದು ಸಿನಿ ರಸಿಕರಲ್ಲೂ ನಿರೀಕ್ಷೆ ಹುಟ್ಟಿಸಿದೆ.

ಈ ನಡುವೆ, ಬಾಲಿವುಡ್ ನಟ ಟೈಗರ್ ಶ್ರಾಫ್ ಅಭಿನಯದ ಗಣಪತ್ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ವಿಕಾಸ್ ಬಾಲ್ ನಿರ್ದೇಶಿಸಿರುವ ಈ ಚಿತ್ರದ ಟೀಸರ್ ಸಾಮಾಜಿಕ ಜಾಲತಾಣಗಳಲ್ಲಿ ಸಕತ್ ಲೈಕ್ ಗಿಟ್ಟಿಸಿಕೊಳ್ಳುತ್ತಿದೆ.

Related posts