ಮತ್ತೆ ಪಾಕ್ ಕಿರಿಕ್; ಭಾರತೀಯ ಯೋಧರ ಪ್ರಬಲ ಪ್ರತ್ಯುತ್ತರ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರ ಗಡಿ ನಿಯಂತ್ರಣ ರೇಖೆ ಬಳಿ ಪಾಕಿಸ್ತಾನ ಪಡೆ ಭಾರತದ ತಾಳ್ಮೆ ಪರೀಕ್ಷೆ ಮಾಡಲು ಮುಂದಾಗಿ ಮತ್ತೊಮ್ಮೆ ನಗೆಪಾಟಲಿಗೀಡಾಗಿದೆ. ಗಡಿ ಭಾಗದಲ್ಲಿ ಭಾತದತ್ತ ಗುಂಡಿನ ದಾಳಿಗೆ ಮುಂದಾದ ಪಾಕ್ ಸೇನೆಗೆ ಭಾರತೀಯ ಯೋಧರು ಇಂದು ತಕ್ಕ ಪ್ರತ್ಯುತ್ತರ ನೀಡಿದ್ದಾರೆ.

ಪಾಕಿಸ್ತಾನದ ದಾಳಿಗೆ ಪ್ರತಿಯಾಗಿ ಭಾರತೀಯ ಸೇನೆ ಶಸ್ತ್ರಗಳಿಂದಲೇ ಪ್ರತಿಕ್ರಿಸಿದ್ದು, ಪಾಕ್ ಬಂಕರ್ ಗಳ ಮೇಲೆ ಸಾಲು ಸಾಲು ದಾಳಿ ನಡೆಸಿದೆ. ಭಾರತದ ಯೋಧರ ಪ್ರಬಲ ದಾಳಿಗೆ ನಲುಗಿದ ಪಾಕ್ ಪಡೆ ಲಾಂಚ್ ಪ್ಯಾಂಡ್ ಬಿಟ್ಟು ಓಡಿಹೋಗುವಂತಾಯಿತು.

ಈ ಕಾದಾಟದಲ್ಲಿ ಐವರು ಭಾರತೀಯ ಯೋಧರು ಹುತಾತ್ಮರಾಗಿದ್ದಾರೆ. ಪಾಕಿಸ್ತಾನ ಪಡೆಯ 8 ಮಂದಿ ಯೋಧರು ಸಾವನ್ನಪ್ಪಿದ್ದಾರೆಂದು ಹೇಳಲಾಗುತ್ತಿದೆ.

Related posts