ರೈತರು, ಕಾರ್ಮಿಕರು ಹಾಗೂ ಸಂಘಟನೆಗಳ ಒಗ್ಗಟ್ಟಿನ ಹೋರಾಟದಿಂದ ಮಾತ್ರ ಖಾಸಗೀಕರಣ ತಡೆಯಲು ಸಾಧ್ಯ

ಬೆಂಗಳೂರು: ಕೇಂದ್ರ ಸರಕಾರದ ಖಾಸಗೀಕರಣದ ನೀತಿಯನ್ನು ತಡೆಯಲು ರೈತರು, ಕಾರ್ಮಿಕರು ಹಾಗೂ ಸಂಘಟನೆಗಳ ಒಗ್ಗಟ್ಟಿನ ಹೋರಾಟದ ಅಗತ್ಯವಿದ್ದು, ದೇಶಾದ್ಯಂತ ಸಂಘಟಿತ ಹೋರಾಟಕ್ಕೆ ಸಜ್ಜಾಗಬೇಕಾಗಿದೆ ಎಂದು ಆಲ್‌ ಇಂಡಿಯಾ ಫೆಡರೇಷನ್‌ ಪವರ್‌ ಇಂಜಿನೀಯರ್ಸ್‌ ಫೆಡರೇಷನ್‌ ಅಧ್ಯಕ್ಷ ಶೈಲೇಂದ್ರ ದುಬೆ ಹೇಳಿದ್ದಾರೆ.

ಭಾರತೀಯ ವಿದ್ಯುತ್‌ ಕಾಯ್ದೆ -2003 ಕ್ಕೆ ತಿದ್ದುಪಡಿ ಹಾಗೂ ವಿದ್ಯುತ್‌ ವಿತರಣಾ ಕಂಪನಿಗಳನ್ನು ಖಾಸಗೀಕರಣಗೊಳಿಸುವ ಪ್ರಸ್ತಾವನೆಯನ್ನು ವಿರೋಧಿಸುವ ಬಗ್ಗೆ ಇಂದು ಬೆಂಗಳೂರಿನ ಕೆಇಬಿ ಇಂಜಿನೀಯರ್ಸ್‌ ಅಸೋಷಿಯೇಷನ್‌ ರಜತ ಮಹೋತ್ಸವ ಸಭಾಂಗಣದಲ್ಲಿ ಕರ್ನಾಟಕ ವಿದ್ಯುತ್‌ ಮಂಡಳಿ ನೌಕರರ ಸಂಘಗಳ ಒಕ್ಕೂಟ ಆಯೋಜಿಸಿದ್ದ ರಾಷ್ಟ್ರಮಟ್ಟದ ವಿಚಾರ ಸಂಕಿರಣದಲ್ಲಿ ಅವರು ಭಾಗವಹಿಸಿ ಮಾತನಾಡಿದರು.

ಕೇಂದ್ರ ಸರಕಾರ ಸರಕಾರಿ ಸೌಮ್ಯದ ಬಹುತೇಕ ಕಂಪನಿಗಳನ್ನು ಖಾಸಗೀಕರಣ ಮಾಡಲು ಹೊರಟಿದೆ. ಲಾಭ ಮಾಡುತ್ತಿರುವ ವಿದ್ಯುತ್‌ ಕಂಪನಿಗಳನ್ನೂ ಕೂಡಾ ಖಾಸಗೀಯರವ ಪಾಲು ಮಾಡಲು ಕಾಯ್ದೆಗೆ ತಿದ್ದುಪಡಿ ತರುತ್ತಿದೆ. ದೇಶದ ಜನರ ತೆರಿಗೆ ಹಣದಿಂದ ನಿರ್ಮಿಸಿರುವ ಮೂಲಭೂತ ಸೌಲಭ್ಯಗಳನ್ನು ಖಾಸಗಿಯವರ ಪಾಲು ಮಾಡುವ ಮೂಲಕ ಅವರಿಗೆ ಲಾಭ ಮಾಡಿಕೊಡುವ ಹುನ್ನಾರ ಇದರ ಹಿಂದೆ ಇದೆ ಎಂದು ಆರೋಪಿಸಿದರು. ಈಗಾಗಲೇ ಖಾಸಗೀ ಫ್ರಾಂಚೈಸಿಗಳ ಮೂಲಕ ನೀಡಿದ್ದ ವಿದ್ಯುತ್‌ ಸರಬರಾಜು ಕಂಪನಿಗಳು ವಿಫಲವಾಗಿವೆ. ಅಲ್ಲದೆ, ದೇಶದ ಬಡವರು ಹಾಗೂ ಮುಖ್ಯವಾಗಿ ರೈತರಿಗೆ ಸಬ್ಸಿಡಿ ದರದಲ್ಲಿ ವಿದ್ಯುತ್‌ ನೀಡುವಂತಹ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುತ್ತಿರುವ ವಿದ್ಯುತ್‌ ಮಂಡಳಿಗಳನ್ನು ಖಾಸಗಿ ಅವರ ಪಾಲು ಮಾಢುವುದು ಸರಿಯಲ್ಲ. ಇದರ ವಿರುದ್ದ ದೇಶಾದ್ಯಂತ ರೈತರು, ಕಾರ್ಮಿಕರು ಹಾಗೂ ಸಂಘಟನೆಗಳ ಸಂಘಟಿತ ಪ್ರಯತ್ನದ ಹೋರಾಟಕ್ಕೆ ಸಜ್ಜಾಗಬೇಕಾಗಿದೆ ಎಂದು ಹೇಳಿದರು.

ಕರ್ನಾಟಕ  ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್‌ ಮಾತನಾಡಿ, ಕೇಂದ್ರ ಸರಕಾರ ಹಲವಾರು ಕಾಯ್ದೆಗಳನ್ನು ಜನಾಭಿಪ್ರಾಯ ಸಂಗ್ರಹ ಮಾಡದೆ ಜಾರಿಗೊಳಿಸುವ ಮೂಲಕ ಸ್ವಾತಂತ್ರ್ಯಹರಣ ಮಾಡಲು ಹೊರಟಿದೆ. ದೆಹಲಿಯಲ್ಲಿ ಕಳೇದ 25 ದಿನಗಳಿಂದ ನಡೆಯುತ್ತಿರುವ ರೈತರ ಹೋರಾಟದಲ್ಲಿ ಪ್ರಮುಖವಾದ ಅಂಶ ವಿದ್ಯುತ್‌ ರಂಗದ ಖಾಸಗೀಕರಣವೂ ಸೇರಿದೆ. ಖನಿಜ, ಸಾರಿಗೆ, ರೈಲು, ವಿಮಾನ, ಅಂತ್ಯರೀಕ್ಷ, ಬಾಹ್ಯಾಕಾಶ ಹೀಗೆ ಎಲ್ಲಾ ಕ್ಷೇತ್ರಗಳನ್ನೂ ಖಾಸಗೀಯವರ ಪಾಲು ಮಾಡಲು ಕೇಂದ್ರ ಸರಕಾರ ಮುಂದಾಗಿದೆ. ಇದು ಸ್ವಾತಂತ್ರ್ಯಪೂರ್ವ ಬ್ರೀಟೀಷ್‌ ಕಂಪನಿ ಆಡಳಿತದ ಬದಲಿಗೆ ಕಾರ್ಪೋರೇಟ್‌ ಕಂಫನಿಗಳ ಅಧಿಕಾರಕ್ಕೆ ಬಂದಂತಾಗಿದೆ ಎಂದು ಆಕ್ರೋಶವ್ಯಕ್ತಪಡಿಸಿದರು.

ಆಲ್‌ ಇಂಡಿಯಾ ಫೆಡರೇಷನ್‌ ಆಫ್‌ ಎಲೆಕ್ಟ್ರಸಿಟಿ ಎಂಪ್ಲಾಯೀಸ್‌ ಅಶೋಸಿಯೇಷನ್‌ ನ ಪ್ರಧಾನ ಕಾರ್ಯದರ್ಶಿ ಮೋಹನ್‌ ಶರ್ಮಾ ಮಾತನಾಡಿ, ದೇಶದಲ್ಲಿ ಲಾಭ ಮಾಢುತ್ತಿರುವ ವಿದ್ಯುತ್‌ ಕಂಫನಿಗಳನ್ನು ಖಾಸಗೀಯವರ ಪಾಲು ಹಾಗೂ ನಷ್ಟದಲ್ಲಿರುವ ವಿದ್ಯುತ್‌ ಕಂಫನಿಗಳನ್ನು ಸರಕಾರವೇ ಉಳಿಸಿಕೊಳ್ಳುವ ಪ್ರಸ್ಥಾವನೆ ಈ ಕಾಯ್ದೆಯಲ್ಲಿದೆ. ಅಲ್ಲದೆ, ಕಾಯ್ದೆಗೆ ಅಂಕಿತ ಬೀಳುವ ಮುನ್ನವೇ ಹಲವಾರು ರಾಜ್ಯಗಳಲ್ಲಿ ಖಾಸಗೀಕರಣಕ್ಕೆ ಪ್ರಸ್ಥಾವನೆಯನ್ನು ಹೋರಡಿಸಲಾಗಿದೆ. ಇದು ನಮ್ಮೆಲ್ಲರ ಹುಬ್ಬೇರಿಸುವಂತೆ ಮಾಡಿದೆ. ಇಂತಹ ಜನವಿರೋಧಿ ಕಾಯ್ದೆಗಳ ವಿರುದ್ದ ದೇಶಾದ್ಯಂತ ಹೋರಾಟಕ್ಕೆ ಸಜ್ಜಾಗಬೇಕಾಗಿದೆ. ಈ ನಿಟ್ಟಿನಲ್ಲಿ ಎಲ್ಲಾ ರಾಜ್ಯಗಳಲ್ಲೂ ವಿಚಾರ ಸಂಕಿರಣಗಳನ್ನು ಆಯೋಜಿಸುವುದರ ಮೂಲಕ ಜಾಗೃತಿ ಮೂಡಿಸುವ ಕಾರ್ಯವನ್ನು ಮಾಡಲಿದ್ದೇವೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಬಲರಾಮ್‌, ಪ್ರಧಾನ ಕಾರ್ಯದರ್ಶಿ ಕವಿಪ್ರನಿ ನೌಕರರ ಸಂಘ, ಕರ್ನಾಟಕ ವಿದ್ಯುತ್‌ ಮಂಡಳಿ ನೌಕರರ ಸಂಘಗಳ ಒಕ್ಕೂಟ ಅಧ್ಯಕ್ಷ ಟಿ ಆರ್‌ ರಾಮಕೃಷ್ಣಯ್ಯ, ಕಾರ್ಯದರ್ಶಿ ಟಿ ಎಂ ಶಿವಪ್ರಕಾಶ್‌ ಸೇರಿದಂತೆ ದೇಶದ ವಿವಿಧ ಭಾಗಗಳಿಂದ ಆಗಮಿಸಿದ್ದ ಪ್ರತಿನಿಧಿಗಳು ಹಾಗೂ ವಿದ್ಯುತ್‌ ಮಂಡಳಿಯ ಅಧಿಕಾರಿಗಳು ಭಾಗವಹಿಸಿದ್ದರು.

Related posts