ಜಮೀನು ಅಕ್ರಮ ಮಂಜೂರು ಆರೋಪ; ತಹಸೀಲ್ದಾರ್ ವಿರುದ್ಧ ರೈತರ ಪ್ರತಿಭಟನೆ

ತುಮಕೂರು: ಕೊರಟಗೆರೆ ತಾಲ್ಲೂಕು ದಂಡಾಧಿಕಾರಿಯನ್ನು ಕೂಡಲೇ ವಜಾ ಮಾಡುವಂತೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.

ಕೊರಟಗೆರೆ ತಾಲ್ಲೂಕಿನ ತಹಸೀಲ್ದಾರರು ತಾಲೂಕಿನನಾದ್ಯಂತ ನೀಡಿರುವ ಅಕ್ರಮ ಸಾಗುವಳಿಗಳನ್ನು ಪತ್ತೆ ಮಾಡಿ ಕೂಡಲೆ ವಜಾ ಮಾಡಬೇಕೆಂದು ತಾಲ್ಲೂಕು ರೈತಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ಆಗ್ರಹಿಸಿ ಈ ಪ್ರತಿಭಟನೆ ನಡೆಸಿದರು.

ಕೊರಟಗೆರೆ ತಾಲ್ಲೂಕು ಹೊಳವನಹಳ್ಳಿ ಹೋಬಳಿ, ಅಕ್ಕಾಜಿಹಳ್ಳಿ ಸ. ನಂ 33ರ ಜಮೀನಿನಲ್ಲಿ ಕಾನೂನು ಬಾಹಿರವಾಗಿ ಜಮೀನು ಮಂಜೂರು ಮಾಡಿರುವದನ್ನು ಖಂಡಿಸಿ ತಹಸೀಲ್ದಾರ್ ಹಾಗೂ ಕಂದಾಯ ನಿರೀಕ್ಷಕ ಹಾಗೂ ಗ್ರಾಮಲೆಕ್ಕಿಗರನ್ನು ಕೂಡಲೆ ಅಮಾನತು ಮಾಡಬೇಕು. ಮತ್ತು ಬೆಂಗಳೂರಿನಿಂದ ಬಂದ ಹೊರಗಡೆ ಜನರಿಗೆ ನೀಡಿರುವ ಸಾಗುವಳಿ ಪತ್ರ ವನ್ನು ಕೊಡಲೇ ರೈತರರಿಗೆ ಕೊಡಬೇಕು ಎಂದು ತಾಲ್ಲೂಕು ಅಧ್ಯಕ್ಷ ಸಿದ್ದರಾಜು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

 

Related posts