ಬೆಳ್ಳಂಬೆಳಗ್ಗೆ ಭೀಕರ ಅಪಘಾತ; 13 ಕಾರ್ಮಿಕರ ದುರ್ಮರಣ

ದೆಹಲಿ: ಮೋದಿಯ ನಾಡಲ್ಲಿ ಇಡೀ ದೇಶವೇ ಬೆಚ್ಚಿಬೀಳುವಂತಹ ಭೀಕರ ಅಪಘಾತ. ಮಂಗಳವಾರ ಬೆಳ್ಳಂಬೆಳಿಗ್ಗೆಯೇ ಈ ದುರಂತದಲ್ಲಿ ೧೩ ಮಂದಿ ಬಡಪಾಯಿಗಳ ಬದುಕು ಅಂತ್ಯಗೊಂಡಿದೆ.

ಗುಜರಾತ್’ನ ಸೂರತ್ ಸಮೀಪದ ಕೊಸಂಬಾದಲ್ಲಿ ಟ್ರಕ್ ವೊಂದು ಪಾದಚಾರಿ ಮಾರ್ಗಕ್ಕೆ ನುಗ್ಗಿದ್ದು, ಈ ಅಪಘಾತದಲ್ಲಿ 13 ಮಂದಿ ಕಾರ್ಮಿಕರು ಅಪಮೃತ್ಯುಗೊಳಗಾಗಿದ್ದಾರೆ. ಇಂದು ನಸುಕಿನ ವೇಳೆ ದುರ್ಘಟನೆ ಸಂಭವಿಸಿದೆ.
ನಿರಾಶ್ರೀತ ಕಾರ್ಮಿಕರು ಪಾದಚಾರಿ ಮಾರ್ಗದಲ್ಲಿ ಮಲಗಿದ್ದರು. ದುರಾದೃಷ್ಟವಶಾತ್ ಅದೇ ರಸ್ತೆಯಲ್ಲಿ ಬರುತ್ತಿದ್ದ ಟ್ರಕ್ ಚಾಲಕನ ನಿಯಂತ್ರಣ ತಪ್ಪಿ ಈ ಕಾರ್ಮಿಕರಿದ್ದ ಪ್ರದೇಶದಲ್ಲಿ ಚಲಿಸಿದೆ. ಆ ವರೆಗೂ ಸುಖನಿದ್ರೆಯಲ್ಲಿದ್ದ ಬಡಪಾಯಿ ಕಾರ್ಮಿಕರು, ಈ ಭೀಕರ ದುರಂತದಿಂದಾಗಿ ಚಿರ ನಿದ್ರೆಗೆ ಜಾರಿದ್ದಾರೆ.

ಸುದ್ದಿ ತಿಳಿದು ಸ್ಥಳಕ್ಕಾಗಮಿಸಿರುವ ಪೊಲೀಸರು ರಕ್ಷಣಾ ಪರಿಹಾರ ಕಾರ್ಯಾಚರಣೆ ಕೈಗೊಂಡು ಗಾಯಾಳುಗಳನ್ನು ಆಸ್ಪತ್ರೆಗೆ ಕರೆದೊಯ್ದರು ಎನ್ನಲಾಗಿದೆ. ಸಾವನ್ನಪಿದ ನತದ್ರಷ್ಟ ಕಾರ್ಮಿಕರು ರಾಜಸ್ಥಾನ ಮೂಲದವರಾಗಿದ್ದಾರೆಂದು ಹೇಳಲಾಗಿದೆ.

Related posts