ಕಬ್ಬಿನ ರಸ ಮತ್ತು ಭತ್ತದಿಂದ ಎಥನಾಲ್ ಉತ್ಪಾದನೆಗೆ ಕೇಂದ್ರ ಪ್ರೋತ್ಸಾಹ: ನಿತಿನ್ ಗಡ್ಕರಿ

ಬೆಂಗಳೂರು: ಕೇಂದ್ರ ಸರ್ಕಾರವು ರೈತರಿಗೆ ಅದರಲ್ಲೂ ಕಬ್ಬು ಮತ್ತು ಭತ್ತ ಬೆಳೆಯುವವರ ಹಿತಾಸಕ್ತಿಯನ್ನು ಕಾಪಾಡಲು ಎಥನಾಲ್ ನೀತಿಯನ್ನು ರೂಪಿಸುವುದಾಗಿ ಕೇಂದ್ರ ರಾಷ್ಟ್ರೀಯ ಹೆದ್ದಾರಿ, ರಸ್ತೆ ಸಾರಿಗೆ, ಎಂಎಸ್‍ಎಂಇ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ.

ರಾಜ್ಯದಲ್ಲಿ 10,904 ಕೋಟಿ ರೂ. ವೆಚ್ಚದಲ್ಲಿ 1,197 ಕಿ.ಮೀ. ಉದ್ದದ 33 ರಾಷ್ಟ್ರೀಯ ಹೆದ್ದಾರಿ ಯೋಜನೆಗಳ ಶಂಕುಸ್ಥಾಪನೆ ಮತ್ತು ಲೋಕಾರ್ಪಣೆಯನ್ನು ಇಂದು ನಡೆದ ವರ್ಚುಯಲ್ ಕಾರ್ಯಕ್ರಮದ ಮೂಲಕ ಅವರು ನೆರವೇರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕಬ್ಬು ಮತ್ತು ಭತ್ತ ಬೆಳೆಯುವವರ ಸಂಕಷ್ಟದ ಬಗ್ಗೆ ಸರ್ಕಾರಕ್ಕೆ ಅರಿವಿದೆ. ಸಕ್ಕರೆ ಮತ್ತು ಅಕ್ಕಿಯ ಉತ್ಪಾದನೆ ದೇಶದಲ್ಲಿ ಅಧಿಕವಾಗಿರುವುದರಿಂದ ರೈತರಿಗೆ ನೆರವಾಗಲು ಭಾರತ ಸರ್ಕಾರ ಕಬ್ಬು ಹಾಗೂ ಅಕ್ಕಿಯಿಂದ ಎಥನಾಲ್ ಉತ್ಪಾದನೆಯನ್ನು ಉತ್ತೇಜಿಸುತ್ತದೆ ಎಂದರು.

Related posts