ಬದನೆ ಸುಟ್ಟು ಗೊಜ್ಜು ಮಾಡುವ ವಿಧಾನ

ಹಳ್ಳಿ ಸೊಗಡಿನ ಊಟ ಅಂದ್ರೆ ಅದು ಭರ್ಜರಿ ಭೋಜನ. ಬಗೆ ಬಗೆಯ ಖಾದ್ಯಗಳನ್ನು ಊಹಿಸಿದರೆ ಸಾಕು, ಮತ್ತೆ ಹಳ್ಳಿಗೆ ಹೋಗಬೇಕೆನಿಸುತ್ತದೆ. ಈ ಹಳ್ಳಿ ತಿಂಡಿ ತಯಾರಿ ವಿಧಾನವೂ ಸುಲಭ. ಬದನೆ ಸುಟ್ಟು ಗೊಜ್ಜು ಮಾಡುವ ವಿಧಾನ ಇಲ್ಲಿದೆ.

ಬದನೆ ಸುಟ್ಟು ಗೊಜ್ಜು

ಬೇಕಾದ ಸಾಮಗ್ರಿ
ಬದನೆ 2
ಕಾಯಿಮೆಣಸು 1
ಬೆಲ್ಲ 5 ಚಮಚ
ನೀರು 1 ಗ್ಲಾಸ್
ಹುಳಿ 1 ನಿಂಬೆ ಗ್ರಾತ್ರದಷ್ಟು
ಉಪ್ಪು ರುಚಿಗೆ ತಕ್ಕಷ್ಟು
ಎಣ್ಣೆ 4 ಚಮಚ
ಬೆಳ್ಳುಳ್ಳಿ 5-6
ಸಾಸಿವೆ 1 ಚಮಚ
ಕರಿಬೇವು

ಮಾಡುವ ವಿಧಾನ

ಬದನೆಕಾಯಿಯನ್ನು ತೊಳೆದು ಅದನ್ನು ಬೆಂಕಿಯಲ್ಲಿ ಸುಟ್ಟು ಹಾಕಬೇಕು. ಬದನೆ ಬೇಯುವ ವರೆಗೂ ಸುಡಬೇಕು. ಹೊರಗಿನ ಸಿಪ್ಪೆ ತೆಗೆದು ಚೆನ್ನಾಗಿ ಕಿವುಚಬೇಕು. ನಂತರ ಅದಕ್ಕೆ ಹುಳಿ, ಬೆಲ್ಲ, ಕಾಯಿಮೆಣಸು, ಎಷ್ಟು ಬೇಕೋ ಅಷ್ಟು ನೀರು, ಉಪ್ಪು ಸೇರಿಸಬೇಕು. ಒಂದು ಸಣ್ಣ ಬಾಣಲೆಯಲ್ಲಿ ಎಣ್ಣೆ, ಬೆಳ್ಳುಳ್ಳಿ, ಸಾಸಿವೆ, ಕರಿಬೇವು ಹಾಕಿ ಒಗ್ಗರಣೆ ಮಾಡಿಕೊಂಡು ಸೇರಿಸಿದರೆ ಬದನೆ ಸುಟ್ಟು ಗೊಜ್ಜು ಸವಿಯಲು ಸಿದ್ದ. ಇದನ್ನು ಅನ್ನದ ಜೊತೆ ಸವಿಯಬಹುದು.

ಇದನ್ನೂ ಮಾಡಿ ನೋಡಿ.. ಬಾಳೆಕಾಯಿ ಹೂವಿನ ದೋಸೆ ಆರೋಗ್ಯಪೂರ್ಣವೂ ಹೌದು 

 

Related posts