ಕರಂಬಳ್ಳಿ ಶ್ರೀ ವೆಂಕಟರಮಣ ದೇವಸ್ಥಾನ ಬ್ರಹ್ಮಕಲಶೋತ್ಸವ; ಸಚಿವ ಪ್ರಭು ಚವ್ಹಾಣ್ ಭೇಟಿ

ಉಡುಪಿ: ಕುಂಜಿಬೆಟ್ಟುವಿನ ಇತಿಹಾಸ ಪ್ರಸಿದ್ಧ ಶ್ರೀ ವೆಂಕಟರಮಣ ದೇವರಿಗೆ, ಶ್ರೀ ಈಶ್ವರ, ಶ್ರೀ ಗಣಪತಿ ಮತ್ತು ಮುಖ್ಯಪ್ರಾಣ ದೇವರಿಗೆ ಪುನಃ ಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವ ಸಮಾರಂಭ ಅದ್ದೂರಿಯಾಗಿ ನೆರವೇರಿದೆ.

ಬ್ರಹ್ಮಕಲಶೋತ್ಸವ ಕಾರ್ಯಕ್ರಮದ ಕೊನೆಯ ದಿನವಾದ ಮಂಗಳವಾರ ಪಶುಸಂಗೋಪನೆ, ಹಜ್ ಮತ್ತು ವಕ್ಫ್ ಸಚಿವ ಪ್ರಭು ಬಿ. ಚವ್ಹಾಣ್ ಅವರು ಭೇಟಿ ನೀಡಿ ಪೂಜಾ ಕೈಂಕರ್ಯದಲ್ಲಿ ಪಾಲ್ಗೊಂಡರು. ದೇವಸ್ಥಾನದ ಆಡಳಿತ ಮೊಕ್ತೇಸರರಾದ ಶಾಸಕ ಕೆ. ರಘುಪತಿ ಭಟ್ ಸಚಿವರನ್ನು ದೇವಸ್ಥಾನಕ್ಕೆ ಬರಮಾಡಿಕೊಂಡರು.

ಈ ಸಂದರ್ಭದಲ್ಲಿ ಶ್ರೀ ಕರಂಬಳ್ಳಿ ವೆಂಕಟರಮಣ ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರುಗಳಾದ ಕೆ. ಲಕ್ಷ್ಮಣ ಶೇರಿಗಾರ್, ಸುಂದರ ಅಮೀನ್, ಶೈಲಶ್ರೀ ದಿವಾಕರ್ ಶೆಟ್ಟಿ, ಪ್ರಧಾನ ಅರ್ಚಕರಾದ ದಿವಾಕರ ಐತಾಳ್, ಪರ್ಯಾಯ ಅರ್ಚಕರಾದ ಗೋವಿಂದ ಐತಾಳ್ ಹಾಗೂ ರಾಧಾಕೃಷ್ಣ ಭಾರಿತ್ತಾಯ, ರಮೇಶ್ ಭಾರಿತ್ತಾಯ, ವಾಸುದೇವ್ ಭಟ್ ಉಪಸ್ಥಿತರಿದ್ದರು.

Related posts