ವೈಕುಂಠ ಏಕಾದಶಿ.. ಎಲ್ಲೆಲ್ಲೂ ಗೋವಿಂದನ ಸ್ಮರಣೆ

ವೈಕುಂಠ ಏಕಾದಶಿ. ಬದುಕಿನ ಸಕಲ ಕಷ್ಟಗಳನ್ನೂ ತೊಲಗಿಸಿ ಬಾಳು ಬಂಗಾರವಾಗಿಸು ಎಂದು ದೇವರಲ್ಲಿ ಪ್ರಾರ್ಥಿಸುವ ಕ್ಷಣ. ವೈಕುಂಠದ ಬಾಗಿಲು ತೆರೆದಿದೆ ಎಂಬ ನಂಬಿಕೆಯೂ ಆಸ್ಥಿಕರದ್ದು. ಹಾಗಾಗಿಯೇ ನಾಡಿನ ದೇವಾಲಯಗಳಲ್ಲಿ ವೈಕುಂಠ ಏಕಾದಶಿ ಅಂಗವಾಗಿ ವಿಶೇಷ ಮಹೋತ್ಸವಗಳೇ ನೆರವೇರುತ್ತಿದೆ.
ಬೆಂಗಳೂರಿನ ಇಸ್ಕಾನ್ ದೇಗುಲ, ವೈಯ್ಯಾಲಿಕಾಲ್ ಬಳಿಯ ತಿರುಮಲ ದೇವಾಲಯ ಸಹಿತ ಬಹುತೇಕ ಎಲ್ಲಾ ದೇವಾಲಯಗಳಲ್ಲೂ ವಿಶೇಷ ಉತ್ಸವಗಳು ಭಕ್ತರ ಗಮನಸೆಳೆದಿದೆ.

ವೈಕುಂಠ ಕಥಾಸಾರ ಹೀಗಿದೆ.

ಪದ್ಮ ಪುರಾಣದಲ್ಲಿ ಹೇಳಲಾದ ಕಥೆಯಇಲ್ಲಿ ಗಮನಾರ್ಹ. ಮುರನೆಂಬ ರಾಕ್ಷಸನು ದೇವತೆಗಳಿಗೆ ತುಂಬಾ ಉಪಟಳ ಕೋಡುತ್ತಿದ್ದನಂತೆ. ಆಗ ವಿಷ್ಣುನೇ ಆ ರಾಕ್ಷಸನ ಸಂಹಾರಕ್ಕೆ ಮುಂದಾಗುತ್ತಾನಂತೆ.. ವಿಷ್ಣುವಿನ ಅಂಶದಿಂದ ಪ್ರಕಟಗೊಂಡ ‘ಹೈನಮತಿ’ ಎಂಬ ಸ್ತ್ರೀ ದೇವತೆ ಆ ರಾಕ್ಷಸನನ್ನು ಸಂಹರಿಸುತ್ತಾಳೆ. ಆಗ ವಿಷ್ಣುವು ಸಂಪ್ರಿತಗೊಂಡು ಏನಾದರೂ ವರವನ್ನು ಕೇಳು ಎಂದು ಆ ದೇವತೆಗೆ ಹೇಳುತ್ತಾನೆ. ಆಗ ಅವಳು ‘ಯಾರು ಈ ವೈಕುಂಠ ಏಕಾದಶಿ ದಿನದಂದು ವ್ರತವನ್ನು ಆಚರಿಸಿ ನಿನ್ನ ಸ್ಮರಣೆ ಮಾಡುತ್ತಾರೋ ಅವರಿಗೆಲ್ಲ ಮೋಕ್ಷವನ್ನು ಕರುಣಿಸು’ ಎಂದು ಕೇಳುತ್ತಾಳಂತೆ.

ಇನ್ನೊಂದು ಪೌರಾಣಿಕ ಕಥೆಯ ಪ್ರಕಾರ ಹಿಂದೆ ಒಬ್ಬ ರಕ್ಕಸಿಯ ಕಾಟದಿಂದ ಏಕಾದಶಿ ವ್ರತವನ್ನು ತ್ಯಜಿಸಿ, ಉಪವಾಸನಾದಿ ವ್ರತಗಳನ್ನು ಮಾಡದೇ ವ್ರತ ಭೃಷ್ಟನಾದಂತಹ ತನ್ನ ಭಕ್ತ ರುಕ್ಮಾಂಗಧನನ್ನು ವಿಷ್ಣುವು ಉದ್ದರಿಸಿ ಅಂದು ವೈಕುಂಠಕ್ಕೆ ಕರೆದೊಯ್ದ ದಿನ, ಅದು ಕೂಡ ‘ವೈಕುಂಠ ಏಕಾದಶಿ’ಯಾಗಿತ್ತು.

Related posts