100 ನೇ ಕೋವಿಡ್ ಸೋಂಕಿತ ಗರ್ಭಿಣಿ‌ಗೆ ಯಶಸ್ವಿಯಾಗಿ ಹೆರಿಗೆ

ಬೆಂಗಳೂರು: ಕೊರೋನಾ ವೈರಾಣು ಹಾವಳಿ ಇಡೀ ನಾಡನ್ನು ತತ್ತರಿಸುವಂತೆ ಮಾಡಿದ್ದು, ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಕಾರಣದಿಂದಾಗಿ ಬಹುತೇಕ ಆಸ್ಪತ್ರೆಗಳಲ್ಲಿ ಸಾಮಾನ್ಯ ರೋಗಿಗಳಿಗೆ ಸರಿಯಾದ ಚಿಕಿತ್ಸೆ ಸಿಗುತ್ತಿಲ್ಲ. ಅದರಲ್ಲೂ ಗರ್ಭಿಣಿಯರ ಪರದಾಟ ಹೇಳತೀರದು.

ಈ ಸಂಕಟ ಕಾಲದಲ್ಲೂ ಬೆಂಗಳೂರಿನ ವಿಕ್ಟೋರಿಯ ಹಾಗೂ ವಾಣಿವಿಲಾಸ ಆಸ್ಪತ್ರೆಗಳ ವೈದ್ಯರು 100ನೇ ಕೋವಿಡ್ ಸೋಂಕಿತ ಗರ್ಭಿಣಿಗೆ ಯಶಸ್ವಿಯಾಗಿ ಹೆರಿಗೆ ಮಾಡಿಸಿದ್ದಾರೆ. ಈ ಮೂಲಕ ಈ ಆಸ್ಪತ್ರೆ ವೈದ್ಯರು ದೇಶದ ಗಮನಸೆಳೆದಿದ್ದಾರೆ.

ವೈದ್ಯರ ಈ ಸಾಧನೆ ಬಗ್ಗೆ ಟ್ವೀಟ್ ಮಾಡಿರುವ ಆರೋಗ್ಯ ಸಚಿವ ಶ್ರೀರಾಮುಲು, ಈ ಆಸ್ಪತ್ರೆಯ ವೈದ್ಯರು ವಿಶೇಷ ಮೈಲಿಗಲ್ಲು ಸಾಧಿಸಿದ್ದಾರೆ ಎಂದು ಬಣ್ಣಿಸಿದ್ದಾರೆ. ಈ ಎರಡೂ ಆಸ್ಪತ್ರೆಗಳ ವೈದ್ಯರು ಹಾಗೂ ಸಿಬ್ಬಂದಿಯ ಈ ಸಾಧನೆ‌ ನಿಜಕ್ಕೂ‌ ಶ್ಲಾಘನೀಯ ಎಂದವರು ಬಣ್ಣಿಸಿದ್ದಾರೆ.

 

 

Related posts