ರಾಕಿಂಗ್ ಸ್ಟಾರ್ ಯಶ್ ಮತ್ತು ‘ವಿಲನ್’; ಇದು ಸಿನಿ ರಂಗದ ಅಚ್ಚರಿ.

ಬೆಂಗಳೂರು: ಕೆಜಿಎಫ್ ಮೂಲಕ ಸದಾ ಸುದ್ದಿಯಲ್ಲಿರುವ ರಾಕಿಂಗ್ ಸ್ಟಾರ್ ಯಶ್ ಇದೀಗ ‘ವಿಲನ್’ ಆಗಿ ಪ್ರತ್ಯಕ್ಷವಾಗಲಿದ್ದಾರೆಯೇ? ಈ ರೀತಿಯ ಕುತೂಹಲಕಾರಿ ಪ್ರಶ್ನೆಯೊಂದು ಕನ್ನಡ ಸಿನಿಮಾ ರಂಗದಲ್ಲಿ ಹರಿದಾಡುತ್ತಿದೆ. ಇದಕ್ಕೆ ಕಾರಣ ಇನ್’ಸ್ಟಾಗ್ರಾಮ್’ನಲ್ಲಿ ಮಾಡಲಾಗಿರುವ ಪೋಸ್ಟ್.

ಕೆಜಿಎಫ್ ಚಿತ್ರದ ಚಾಪ್ಟರ್-2 ವಿಚಾರದಲ್ಲಿ ಸಿನಿ ರಸಿಕರು ತೀವ್ರ ನಿರೀಕ್ಷೆಯಲ್ಲಿದ್ದಾರೆ. ಈ ಹೊತ್ತಿಗಾಗಲೇ ಯಶ್ ಅವರು ಇನ್’ಸ್ಟಾಗ್ರಾಮ್’ನಲ್ಲಿ ಪೊಷ್ಟೊಂದನ್ನು ಹರಿಬಿಟ್ಟಿದ್ದಾರೆ. ‘ವಿಲನ್’ ಈಸ್ ಕಮ್ಮಿಂಗ್’ ಎಂಬ ಈ ಪೋಸ್ಟ್ ತೀವ್ರ ಕುತೂಹಲ ಕೆರಳಿಸಿದೆ. ಈ ಕುರೂಹಾಳ ಆಗಸ್ಟ್ 17ರಂದು ತಣಿಯಲಿದೆ.

Related posts