ಕೋಲಾರ: ಪವಿತ್ರ ಹಬ್ಬ ಈದ್ ಮಿಲಾದ್ ದಿನದಂದು ಕೋಲಾರದಲ್ಲಿ ಕತ್ತಿ ಪ್ರದರ್ಶಿಸಿದ್ದ ಪ್ರಕರಣ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಹಬ್ಬದ ಆಚರಣೆ ವೇಳೆ ಕತ್ತಿಯಿಂದ ಸ್ವಾಗತ ಕಮಾನು ಮಾಡಿದ್ದ ಪ್ರಜರಣದಲ್ಲಿ ಐವರ ವಿರುದ್ದ ದೂರು ದಾಖಲಾಗಿದೆ. ಅಸ್ಲಾಂ ಪಾಷಾ, ಚಾಂದ್ ಪಾಷಾ, ಮನ್ಸೂರ್ ಆಲಿ, ಮೊಹಮದ್ ಬಿಲಾಲ್, ಸಾಧಿಕ್ ಪಾಷಾ ಎಂಬವರ ಮೇಲೆ ಕೋಲಾರ ನಗರ ಠಾಣೆಯಲ್ಲಿ ಕೇಸ್ ದಾಖಲಾಗಿದ್ದರೆ, ಈದ್ ಮಿಲಾದ್ ಮೆರವಣಿಗೆ ವೇಳೆ ಕುದುರೆ ಮೇಲೆ ಕುಳಿತು ಕತ್ತಿ ಪ್ರದರ್ಶಿಸಿದ್ದ ಸಗೀರ್ ಎಂಬ ವ್ಯಕ್ತಿ ವಿರುದ್ದ ಮತ್ತೊಂದು ಪ್ರಜರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.