ರಾಮನಗರ ಸೋಲು ಹಿನ್ನೆಲೆ: ನಿಖಿಲ್‌ಗೆ ಧೈರ್ಯ ಹೇಳಿದ ಡಿಕೆಶಿ

ಬೆಂಗಳೂರು: ರಾಮನಗರದಲ್ಲಿ ಸ್ಪರ್ಧಿಸಿ ಸೋತಿರುವ ನಿಖಿಲ್​ ಕುಮಾರಸ್ವಾಮಿಗೆ ಕೆಪಿಸಿಸಿ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಧೈರ್ಯ ಹೇಳಿದ್ದಾರೆ.

ಮಾಜಿ ಸಿಎಂ ಕುಮಾರಸ್ವಾಮಿ ಪುತ್ರ ನಿಖಿಲ್ ಅವರಿಗೆ ಫೋನ್ ಕರೆ ಮಾಡಿ ಮಾತನಾಡಿರುವ ಡಿಕೆಶಿ, ಸೋಲಿನ ನೋವಿನಿಂದ ಹೊರಬರುವಂತೆ ಧೈರ್ಯ ತುಂಬಿದ್ದಾರೆ. ಕಳೆದ ಲೋಕಸಭಾ ಚುನಾವಣೆಯಲ್ಲೂ ಸೋತಿರುವ ನೀವು, ಈ ಬಾರಿಯೂ ಗೆಲ್ಲಲು ಸಾಧ್ಯವಾಗಿಲ್ಲ ಎಂದು ಬೇಸರ ಇರಬಹುದು. ಆದರೆ ಈ ಬೆಳವಣಿಗೆಯನ್ನು ಗಮನಿಸಿದರೆ ನಿಮಗೆ ಉತ್ತಮ ರಾಜಕೀಯ ಭವಿಷ್ಯವಿದೆ ಎಂದು ಹೇಳಿದರು.

Related posts