ಬೆಂಗಳೂರು: ರಾಜ್ಯದಲ್ಲಿ ಅನ್ನಭಾಗ್ಯ ಯೋಜನೆಯ ಪಡಿತರ ಸಾಗಾಣಿಕೆ ಲಾರಿಗಳ ಮುಷ್ಕರದ ಹಿನ್ನೆಲೆಯಲ್ಲಿ ಗಾಬರಿಗೊಂಡ ರಾಜ್ಯ ಸರ್ಕಾರ ತಕ್ಷಣ ಸ್ಪಂದಿಸಿದೆ. 2025ರ ಫೆಬ್ರವರಿಯಿಂದ ಮೇವರೆಗೆ ಬಾಕಿ ಉಳಿದಿದ್ದ ರೂ. 244 ಕೋಟಿ ಮೊತ್ತವನ್ನು ಬಿಡುಗಡೆ ಮಾಡುವಂತೆ ಆದೇಶ ಹೊರಡಿಸಿದೆ.
ಈ ಮೊದಲು ಸರ್ಕಾರಿ ಖಜಾನೆಯಿಂದ ರೂ. 2,082.99 ಕೋಟಿಯ ಹಣ ಬಿಡುಗಡೆ ಆಗಿದ್ದು, ಈಗ ನಾಲ್ಕು ತಿಂಗಳ ಅವಧಿಗೆ ಫಲಾನುಭವಿಗಳಿಗೆ ಹೆಚ್ಚುವರಿ ಐದು ಕೆಜಿ ಅಕ್ಕಿ ಹಾಗೂ ಇತರ ವೆಚ್ಚಗಳ ಸಂಬಂಧವಾಗಿ ಹೆಚ್ಚುವರಿ ಅನುದಾನವನ್ನು ಬಿಡುಗಡೆ ಮಾಡಲಾಗಿದೆ ಎಂದು ಸರ್ಕಾರ ಮಾಹಿತಿ ನೀಡಿದೆ.