ಆಂಧ್ರ ಪ್ರದೇಶದಲ್ಲಿ GBS ಸೋಂಕಿನ ತಲ್ಲಣ; ಇಬ್ಬರು ಬಲಿ

ಅಮರಾವತಿ: ದೇಶಾದ್ಯಂತ ಆತಂಕದ ಏಲ್ ಎಬ್ಬಿಸಿರುವ GBS (Guillain Barre Syndrome) ಸೋಂಕಿಗೆ ಆಂಧ್ರ ಪ್ರದೇಶದಲ್ಲಿ ಇಬ್ಬರು ಬಲಿಯಾಗಿದ್ದಾರೆ. ಈ ಘಟನೆಯ ನಂತರ ಮಾರಣಾಂತಿಕ ಸೋಂಕಿನ ಬಗ್ಗೆ ಸರ್ಕಾರ ತೀವ್ರ ಕಟ್ಟೆಚ್ಚರ ವಹಿಸಿದೆ.

‘ಸೋಂಕು ದೃಢಪಟ್ಟ 45 ವರ್ಷದ ಮಹಿಳೆ ಕಮಲಮ್ಮ ಎಂಬವರು ಭಾನುವಾರ ಗುಂಟೂರಿನ ಸರ್ಕಾರಿ ಜನರಲ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದರೆ, 10 ವರ್ಷದ ಬಾಲಕ ಸುಮಾರು 10 ದಿನಗಳ ಹಿಂದೆ ಶ್ರೀಕಾಕುಳಂನ ಖಾಸಗಿ ವೈದ್ಯಕೀಯ ಕಾಲೇಜಿನಲ್ಲಿ ಸಾವನ್ನಪ್ಪಿದ್ದಾರೆ ಎಂದು ಆಂಧ್ರ ಪ್ರದೇಶ ಆರೋಗ್ಯ ಸಚಿವ ಸತ್ಯ ಕುಮಾರ್ ಯಾದವ್ ಮಾಹಿತಿ ನೀಡಿದ್ದಾರೆ.

ಈ ನಡುವೆ ಆಂಧ್ರ ಪ್ರದೇಶದಲ್ಲಿ ಸುಮಾರು 17 GBS ಸೋಂಕಿನ ಪ್ರಕರಣಗಳು ದಾಖಲಾಗಿವೆ ಎಂದು ಸಚಿವರು ತಿಳಿಸಿದ್ದಾರೆ.

Related posts