ನವದೆಹಲಿ: ದೆಹಲಿ ಚುನಾವಣೆಗೆ ಕೇವಲ ಐದು ದಿನ ಇರುವಾಗಲೇ, ಆಮ್ ಆದ್ಮಿ ಪಕ್ಷಕ್ಕೆ ಸ್ವಪಕ್ಷೀಯರೇ ಆಘಾತ ನೀಡಿದ್ದಾರೆ. ಟಿಕೆಟ್ ಸಿಗದೇ ಪಕ್ಷದ ವಿರುದ್ದ ಮುನಿಸಿಕೊಂಡಿದ್ದ 8 ಶಾಸಕರು ಎಎಪಿ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ.
ನರೇಶ್ ಯಾದವ್, ರೋಹಿತ್ ಕುಮಾರ್, ರಾಜೇಶ್ ರಿಷಿ, ಮದನ್ ಲಾಲ್, ಪವನ್ ಶರ್ಮಾ, ಮತ್ತು ಭಾವನಾ ಗೌಡ್, ಬಿಎಸ್ ಜೂನ್, ಮತ್ತು ಗಿರೀಶ್ ಸೋನಿ ಅವರು ಆಮ್ ಆದ್ಮಿ ಪಕ್ಷ ತ್ಯಜಿಸಿದ್ದಾರೆ. ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರ ನಡೆ ಬಗ್ಗೆ ಈ ನಾಯಕರು ನಿರಾಶೆ ವ್ಯಕ್ತಪಡಿಸಿದ್ದಾರೆ. ಈ ಬೆಳವಣಿಗೆಯು ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿಯನ್ನು ಇಕ್ಕಟ್ಟಿಗೆ ಸಿಲುಕಿಸಿದೆ.