ಕೊಪ್ಪಳ: ಗಂಗಾವತಿ ಸಮೀಪ ತುಂಗಭದ್ರ ಎಡದಂಡೆ ಕಾಲುವೆ ಬಳಿ ಇಬ್ಬರು ಮಹಿಳೆಯರ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ. ಗುರುವಾರ ತಡರಾತ್ರಿ ಸಂಗೀತ ಕೇಳುತ್ತಾ ಕುಳಿತುಕೊಂಡಿದ್ದ ಮಹಿಳೆಯರ ಮೇಲೆ ಮೂವರು ಹಲ್ಲೆ ನಡೆಸಿ ಇಬ್ಬರ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಲಾಗಿದೆ ಎಂದು ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿದೂರು ದಾಖಲಾಗಿದೆ.
ಇಸ್ರೇಲಿ ಪ್ರವಾಸಿ ಮತ್ತು ಇತರ ಮೂವರು ಪುರುಷ ಪ್ರವಾಸಿಗರು ತಂಗಿದ್ದ ಹೋಂಸ್ಟೇಯ 29 ವರ್ಷದ ಮಹಿಳಾ ನಿರ್ವಾಹಕಿ ಪ್ರವಾಸಿಗರೊಂದಿಗೆ ತುಂಗಭದ್ರಾ ಎಡಗಂಡೆ ಕಾಲುವೆಯ ಪಕ್ಕದಲ್ಲಿ ಕುಳಿತು ಸಂಗೀತ ಆಲಿಸುತ್ತಿದ್ದರು. ಆ ವೇಳೆ ಆಗಮಿಸಿದ್ದ ಕಾಮುಕರು ಇಸ್ರೇಲಿ ಪ್ರವಾಸಿ ಮಹಿಳೆ ಹಾಗೂ ಆಕೆಯ ಜೊತೆಗಿದ್ದ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ, ಮೂವರು ಪುರುಷ ಪ್ರವಾಸಿಗರನ್ನು ಕಾಲುವೆಗೆ ತಳ್ಳಿದ್ದಾರೆ ಎನ್ನಲಾಗಿದೆ.
ಈ ಬಗ್ಗೆ ಗಂಗಾವತಿ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಾಗಿದ್ದು, ಆರೋಪಿಗಳ ಪತ್ತೆಗಾಗಿ ಆರು ತಂಡಗಳನ್ನು ರಚಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.