ಈಗ ವಿಧಾನಸಭಾ ಚುನಾವಣೆ ನಡೆದರೆ ಬಿಜೆಪಿಗೆ 40 ಸೀಟ್ ಸಹ ಬರಲ್ಲ

ಹುಬ್ಬಳ್ಳಿ: ರಾಜ್ಯದಲ್ಲಿ ಬಿಜೆಪಿ ನೆಲಕಚ್ಚಿದ್ದು ಈಗ ಮತ್ತೊಮ್ಮೆ ವಿಧಾನಸಭಾ ಚುನಾವಣೆ ನಡೆದರೆ ಬಿಜೆಪಿಗೆ 40 ಸೀಟು ಗೆಲ್ಲಲು ಸಾಧ್ಯವಿಲ್ಲ ಎಂದು ಮಾಜಿ ಕಾಂಗ್ರೆಸ್ ನಾಯಕ ಜಗದೀಶ್‌ ಶೆಟ್ಟರ್‌ ಹೇಳಿದ್ದಾರೆ.

ಹುಬ್ಬಳ್ಳಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಜಗದೀಶ್‌ ಶೆಟ್ಟರ್‌, ರಾಜ್ಯದಲ್ಲಿ ಬಿಜೆಪಿ ರಿಪೇರಿ ಮಾಡಲಾಗದಷ್ಟು ಹದಗೆಟ್ಟಿದೆ. ಈಗ ಚುನಾವಣಾ ನಡೆದರೆ ಬಿಜೆಪಿಗೆ 66 ಅಲ್ಲ 40 ಸೀಟ್ ಸಹ ಬರಲ್ಲ. ವಿಜಯೇಂದ್ರ ಅಲ್ಲ, ಯಾರೂ ಅಧ್ಯಕ್ಷರಾದ್ರೂ ಬಿಜೆಪಿಯನ್ನು ಸರಿ ಮಾಡಲು ಸಾಧ್ಯವಿಲ್ಲ ಎಂದರು.

ರಾಜಕೀಯ ಉದ್ದೇಶಕ್ಕೆ ಸಿಬಿಐ ಐಟಿ ಇಡಿ ದಾಳಿಗಳು ನಡೆಯುತ್ತಿವೆ. ಹಾಗಾಗಿ ಸಿಬಿಐ ಐಟಿ ಇಡಿ ಸಂಸ್ಥೆಗಳು ವಿಶ್ವಾಸಾರ್ಹತೆಯನ್ನು ಕಳೆದುಕೊಂಡಿವೆ ಎಂದು ಬಣ್ಣಿಸಿದ ಶೆಟ್ಟರ್, ಈವರೆಗೆ ನಡೆದಿರುವ ಐಟಿ ಮತ್ತು ಇಡಿ ದಾಳಿ ಬಗ್ಗೆ ಕೇಂದ್ರ ಸರ್ಕಾರ ಮಾಹಿತಿ ನೀಡಲಿ ದಾಳಿ ಬಗ್ಗೆ ಶ್ವೇತ ಪತ್ರ ಬಿಡುಗಡೆ ಮಾಡಲಿ ಎಂದು ಆಗ್ರಹಿಸಿದರು.

Related posts