ಮುಂಬೈ: ದೇಶಾದ್ಯಂತ ಕೊರೋನಾ ತಾಂಡವವಾಡುತ್ತಿರುವ ಹಿನ್ನೆಲೆಯಲ್ಲಿ ಈ ವರ್ಷ ಸಾವಿರ್ವಜನಿಕ ಗಣೇಶೋತ್ಸವ ಸಮಾರಂಭ ನಡೆಯುವುದು ಸಂಶಯ. ಜಗತ್ತಿನ ಗಮನಸೆಳೆಯುತ್ತಿರುವ ಮುಂಬೈ ನಗರದ ಅದ್ದೂರಿ ಗಣೇಶೋತ್ಸವವಂತೂ ಇತಿಹಾಸದಲ್ಲೇ ಮೊದಲಬಾರಿಗೆ ರದ್ದಾಗಿದೆ.
ಗಣೇಶ ಹಬ್ಬಕ್ಕೆ ಇನ್ನೊಂದು ತಿಂಗಳಷ್ಟೇ ಬಾಕಿ ಇದೆ. ಪ್ರತೀ ವರ್ಷ ತಿಂಗಳ ಮೊದಲೇ ಉತ್ಸವಕ್ಕೆ ತಯಾರಿ ನಡೆಯುತ್ತಿತ್ತು. ಈ ಸಿದ್ಧತೆಯೇ ಒಂದು ರೀತಿ ಸಡಗರದ ಕ್ಷಣಗಳು. ಆದರೆ ಈ ವರ್ಷದ ಗಣೇಶೋತ್ಸವಕ್ಕೆ ಕೋವಿಡ್ ವೈರಾಣು ಹಾವಳಿಯ ವಿಘ್ನ ಕಾಡಿದೆ.
ಮುಂಬೈ ನ ಗಣೇಶೋತ್ಸವದ ಮೇಲೂ ಕೊರೋನಾ ಕರಿನೆರಳು ಆವರಿಸಿದ್ದು ವಿಶ್ವ ಪ್ರಸಿದ್ಧ ಮುಂಬೈ ನ ಲಾಲ್ಬೌಚಾ ರಾಜ ಗಣೇಶೋತ್ಸವ ಮಂಡಲ ಸಾರಥ್ಯದ ಗಣೇಶೋತ್ಸವ ರದ್ದುಪಡಿಸಲಾಗಿದೆ. ಕೊರೋನಾ ಹಿನ್ನೆಲೆಯಲ್ಲಿ ಇಂಥದ್ದೊಂದು ನಿರ್ಧಾರ ಕೈಗೊಂಡಿರುವ ಗಣೇಶೋತ್ಸವ ಮಂಡಲ ಈ ಬಾರಿ ಗಣೇಶ ಹಬ್ಬದ ಸಂದರ್ಭದಲ್ಲಿ ಜನಪರ ಸೇವಾ ಕಾರ್ಯಕ್ರಮಗಳನ್ನು ಆಯೋಜಿಸಲು ನಿರ್ಧರಿಸಿದೆಯಂತೆ.