ಉಕ್ರೇನ್ ಮೇಲೆ ರಷ್ಯಾ ಪ್ರಬಲ ಕ್ಷಿಪಣಿ ದಾಳಿ; 10ಕ್ಕೂ ಹೆಚ್ಚು ಮಂದಿ ಸಾವು

ಸಮ್ಮಿ: ಉಕ್ರೇನ್ ಮೇಲೆ ರಷ್ಯಾ ಸೇನೆ ಮತ್ತೆ ದಾಳಿ ನಡೆಸಿದೆ. ರಷ್ಯಾ ಕೈಗೊಂಡ ಕ್ಷಿಪಣಿ ದಾಳಿಯಲ್ಲಿ 10ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದಾರೆ‌. ಪ್ರಬಲ ಖಂಡಾಂತರ ಕ್ಷಿಪಣಿಯನ್ನು ಉಕ್ರೇನ್‌ ರಷ್ಯಾ ಉಡಾವಣೆ ಮಾಡಿದೆ.

ಉಕ್ರೇನ್‌ನ ಉತ್ತರ ಭಾಗದ ಸಮ್ಮಿ ಎಂಬಲ್ಲಿ ಜನವಸತಿ ಪ್ರದೇಶದ ಮೇಲೆ ಈ ದಾಳಿ ನಡೆದಿದ್ದು 15ಕ್ಕೂ ಹೆಚ್ಚು ಕಟ್ಟಡಗಳು ಧ್ವಂಸವಾಗಿವೆ. ಹತ್ತಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದು 80ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

Related posts