‘ಎಲ್ಲದಕ್ಕೂ ಬಂದೇ ಅಸ್ತ್ರ ಆಗಬಾರದು’: ಮಾ.22ರ ‘ಕರ್ನಾಟಕ ಬಂದ್’ಗೆ ಕರವೇ ಬೆಂಬಲ ಇಲ್ಲ

ತುಮಕೂರು: ಮರಾಠಿಗರ ದೌರ್ಜನ್ಯ ಖಂಡಿಸಿ ಕನ್ನಡ ಸಂಘಟನೆಗಳ ಒಕ್ಕೂಟ ಮಾರ್ಚ್ 22ರಂದು ಕರೆ ನೀಡಿರುವ ಬಂದ್’ಗೆ ತಮ್ಮ ಬೆಂಬಲ ಇಲ್ಲ ಎಂದು ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ನಾಯಾಯಣಗೌಡ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲದಕ್ಕೂ ಬಂದೇ ಅಸ್ತ್ರ ಆಗಬಾರದು ಎಂದು ಪ್ರತಿಪಾದಿಸಿದರು.

ಕೆಪಿಎಸ್ಸಿ ಅಭ್ಯರ್ಥಿಗಳು ಹಾಗೂ ಇತರ ಪರೀಕ್ಷೆ ಬರೆಯುವವರಿಗೆ ಬಹಳ ತೊಂದರೆ ಆಗಿದೆ. ಹಾಗಾಗಿ ಅವರ ಜೊತೆ ನಾನು ಇರಬೇಕಾಗಿದೆ ಎಂದಿರುವ ನಾರಾಯಣಗೌಡ, ಆ ಬಂದ್ ಗೆ ನನ್ನ ಬೆಂಬಲ ಇಲ್ಲ. ಎಲ್ಲದಕ್ಕೂ ಬಂದೇ ಅಸ್ತ್ರ ಆಗಬಾರದು, ಕೊನೆಯ ಬ್ರಹ್ಮಾಸ್ತ್ರ ಬಂದ್ ಆಗಬೇಕು ಎಂದರು.

ಎಸ್ಸೆಸೆಲ್ಸಿ ಪರೀಕ್ಷೆ ಮುಂದೂಡುವುದು ಸರಿಯಲ್ಲ. ಇದನ್ನು ಹಿರಿಯ ಹೋರಾಟಗಾರ ವಾಟಾಲ್ ನಾಜರಾಜು ಅವರು ಅರಿತುಕೊಳ್ಳಬೇಕು ಎಂದವರು ಹೇಳಿದರು.

Related posts