ಕರ್ನಾಟಕದ ಸಿಐಡಿ ಕೇಳಿದ ಮಾಹಿತಿಯನ್ನು ಯಾವಾಗ ಒದಗಿಸುತ್ತೀರಿ? ಚುನಾವಣಾ ಆಯೋಗಕ್ಕೆ ಸುರ್ಜೇವಾಲ ಪ್ರಶ್ನೆ

ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ಗಾಂಧೀ ಅವರು ಮತಗಳ್ಳತನ ಬಗ್ಗೆ ಇದೀಗ ಮತ್ತೆ ಸುದ್ದಿಯ ಮುನ್ನೆಲೆಗೆ ಬಂದಿದೆ. ಇದೇ ಸಂದರ್ಭದಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಎತ್ತಿರುವ ಪ್ರಶ್ನೆ ಗಮನಸೆಳೆದಿದೆ.
. ಕರ್ನಾಟಕದ ಸಿಐಡಿ ಕೇಳಿದ ಮಾಹಿತಿಯನ್ನು ಯಾವಾಗ ಒದಗಿಸುತ್ತೀರಿ ಎಂದು ರಣದೀಪ್ ಸಿಂಗ್ ಸುರ್ಜೇವಾಲ ಅವರು ಚುನಾವಣಾ ಆಯೋಗವನ್ನು ಪ್ರಶ್ನಿಸಿದ್ದಾರೆ.

ಆಳಂದದಲ್ಲಿ ಮತಗಳ್ಳತನವಾಗಿರುವ ಕುರಿತು ರಾಹುಲ್ ಗಾಂಧಿ ಅವರು ಮಾಡಿರುವ ಆರೋಪವನ್ನು ಅಲ್ಲಗಳೆದಿರುವ ಭಾರತೀಯ ಚುನಾವಣಾ ಆಯೋಗಕ್ಕೆ ಎಐಸಿಸಿ ಪ್ರಧಾನ ಕಾರ್ಯದರ್ಶಿಯೂ ಆದ ರಣದೀಪ್ ಸಿಂಗ್ ಸುರ್ಜೇವಾಲ ಅವರು ಎಕ್ಸ್ ನಲ್ಲಿ ಪ್ರಶ್ನೆಗಳನ್ನೂ ಮುಂದಿಟ್ಟಿದ್ದಾರೆ.

ಕರ್ನಾಟಕದ ಸಿಐಡಿ ಕೇಳಿದ ಮಾಹಿತಿಯನ್ನು ಯಾವಾಗ ಒದಗಿಸುತ್ತೀರಿ? ಕರ್ನಾಟಕ ರಾಜ್ಯ ಚುನಾವಣಾ ಆಯೋಗವು ನಿಮಗೆ ನೀಡಿರುವ ಮಾಹಿತಿ ಕುರಿತು ನೀವು ಯಾವಾಗ ಪ್ರತಿಕ್ರಿಯಿಸುತ್ತೀರಿ? ನೀವು ಕಾಲಮಿತಿಯ ವಿಚಾರಣೆ ನಡೆಸಿ ಮುಕ್ತಾಯಗೊಳಿಸುವುದು ಯಾವಾಗ? ಇದಿಷ್ಟೇ ನಾವೆಲ್ಲರೂ ಹುಡುಕುತ್ತಿರುವ ಸತ್ಯ. ಭಾರತೀಯ ಚುನಾವಣಾ ಆಯೋಗವು ಈ ಪ್ರಶ್ನೆಗಳಿಗೆ ಉತ್ತರಿಸಬೇಕು ಎಂದು ಅವರು ಸಾಮಾಜಿಕ ಮಾಧ್ಯಮದಲ್ಲಿ ಬರೆದುಕೊಂಡಿದ್ದಾರೆ.

Related posts