ಕೆಎಸ್‌ಆರ್‌ಟಿಸಿ ಪ್ರತಿಷ್ಠಿತ ಬಸ್‌ಗಳ ಪ್ರಯಾಣದರಗಳಲ್ಲಿ ರಿಯಾಯಿತಿ

ಬೆಂಗಳೂರು: ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ) ತನ್ನ ಪ್ರತಿಷ್ಠಿತ ಸಾರಿಗೆಗಳ ಪ್ರಯಾಣದರಗಳಲ್ಲಿ ಶೇಕಡಾ 5 ರಿಂದ 15ರವರೆಗೆ ರಿಯಾಯಿತಿ ಘೋಷಿಸಿದೆ. ಈ ರಿಯಾಯಿತಿ ಜನವರಿ 5, 2026ರಿಂದ ಜಾರಿಗೆ ಬರಲಿದೆ.

ಬೆಂಗಳೂರು–ಮಂಗಳೂರು, ಬೆಂಗಳೂರು–ಕುಂದಾಪುರ, ಉಡುಪಿ, ಧರ್ಮಸ್ಥಳ, ಕುಕ್ಕೆಸುಬ್ರಮಣ್ಯ, ಪುತ್ತೂರು, ಮಡಿಕೇರಿ/ವಿರಾಜಪೇಟೆ, ದಾವಣಗೆರೆ, ಶಿವಮೊಗ್ಗ/ಸಾಗರ ಸೇರಿದಂತೆ ಚೆನ್ನೈ, ಹೈದರಾಬಾದ್/ಸಿಕಂದರಾಬಾದ್, ತಿರುಪತಿ, ಮಂತ್ರಾಲಯ, ಪುಣೆ/ಮುಂಬೈ, ವಿಜಯವಾಡ, ಎರ್ನಾಕುಲಂ, ಮದುರೈ, ಕೋಯಿಮತ್ತೂರು, ತಿರುಶೂರು ಸೇರಿದಂತೆ ಆಯ್ದ ಮಾರ್ಗಗಳಲ್ಲಿ ಈ ರಿಯಾಯಿತಿ ಅನ್ವಯವಾಗಲಿದೆ.

ರಾಜಹಂಸ, ನಾನ್‌ಎಸಿ ಸ್ಲೀಪರ್, ಐರಾವತ, ಐರಾವತ ಕ್ಲಬ್ ಕ್ಲಾಸ್, ಎಸಿ ಸ್ಲೀಪರ್ ಹಾಗೂ ಮಲ್ಟಿ ಆಕ್ಸಲ್ ಎಸಿ ಸ್ಲೀಪರ್ ಬಸ್‌ಗಳ ಪ್ರಯಾಣದರಗಳಲ್ಲಿ ರಿಯಾಯಿತಿ ನೀಡಲಾಗುತ್ತಿದೆ ಎಂದು ನಿಗಮ ತಿಳಿಸಿದೆ.

ಹೆಚ್ಚಿನ ಮಾಹಿತಿಗಾಗಿ ksrtc.in ವೆಬ್‌ಸೈಟ್‌ಗೆ ಭೇಟಿ ನೀಡುವಂತೆ ನಿಗಮ ಮನವಿ ಮಾಡಿದ್ದು, ಸಾರ್ವಜನಿಕರು ಈ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳುವಂತೆ ಕೋರಿದೆ.

Related posts