ತಿರುಪತಿ ಲಡ್ಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬು ಮಿಶ್ರಣ ಪ್ರಕರಣ; ನಾಲ್ವರು ಡೈರಿ ಪ್ರಮುಖರ ಬಂಧನ

ತಿರುಮಲ: ದಕ್ಷಿಣ ಭಾರತದ ಪುಣ್ಯಕ್ಷೇತ್ರ ತಿರುಪತಿ ತಿರುಮಲದ ಲಡ್ಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬು ಮಿಶ್ರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖರ ಬಂಧನವಾಗಿದೆ. ಭಾನುವಾರ ನಾಲ್ವರನ್ನು ತನಿಖಾ ತಂಡ ಬಂಧಿಸಿದೆ.

ಲಡ್ಡು ಪ್ರಸಾದ ಪ್ರಕರಣ ಕುರಿತಂತೆ ತನಿಖೆ ಕೈಗೊಂಡಿರುವ ಸಿಬಿಐ ಹೈದರಾಬಾದ್ ವಿಭಾಗದ ತಂಡ ನಾಲ್ವರು ಆರೋಪಿಗಳನ್ನು ಬಂಧಿಸಿದೆ ಎನ್ನಲಾಗಿದೆ. ಈ ಆರೋಪಿಗಳು ವಿವಿಧ ಡೈರಿಗಳ ಪ್ರಮುಖರೆಂದು ಹೇಳಲಾಗುತ್ತಿದೆ.

Related posts