ತಿರುವನಂತಪುರಂ: ಆಘಾತಕಾರಿ ಘಟನೆಯೊಂದರಲ್ಲಿ, ರಾಜಧಾನಿ ಉಪನಗರದಲ್ಲಿ ಅಫ್ಸಾನ್ ಎಂಬ ಯುವಕ ಸೋಮವಾರ ಸಂಜೆ ಐವರನ್ನು ಕೊಲೆಮಾಡಿದ್ದಾನೆ. ಈ ಭೀಕರ ಕೃತ್ಯದ ನಂತರ, ಆರೋಪಿ ಆಟೋ ರಿಕ್ಷಾ ತೆಗೆದುಕೊಂಡು ಪೊಲೀಸರ ಮುಂದೆ ಶರಣಾಗಿ, ವಿಷ ಸೇವಿಸಿರುವುದಾಗಿ ಪೊಲೀಸರಿಗೆ ತಿಳಿಸಿದ್ದಾನೆ.
ಪೊಲೀಸರು ತಕ್ಷಣ ಆತನನ್ನುವಶಕ್ಕೆ ಪಡೆದಿದ್ದಾರೆ.
ಕೊಲೆಯಾದವರಲ್ಲಿ ಅಫ್ಸಾನ್‌ನ 13 ವರ್ಷದ ಸಹೋದರ, ಆತನ 19 ವರ್ಷದ ಗೆಳತಿ, ಅಜ್ಜಿ, ಸೋದರತ್ತೆ, ಮತ್ತು ಆಕೆಯ ಪತಿ ಲತೀಫ್ ಅವರನ್ನು ಕೊಲೆ ಮಾಡಲಾಗಿದೆ.