ಧಾರವಾಡ ಬಳಿಧಗಧಗಿಸಿ ಹೊತ್ತಿ ಉರಿದ ಮಂಗಳೂರು ಬಸ್..

ಧಾರವಾಡ: ಹುಬ್ಬಳ್ಳಿ ಹೊರವಲಯದ ಬೈಪಾಸ್​ ಬಳಿ, ಕಾರವಾರ ರಸ್ತೆಯಲ್ಲಿ ಪ್ರಯಾಣಿಕರಿದ್ದ ಖಾಸಗಿ ಬಸ್ ಏಕಾಏಕಿ ಹೊತ್ತಿ ಉರಿದಿದೆ.

ಮಹಾರಾಷ್ಟ್ರದಿಂದ ಮಂಗಳೂರಿನತ್ತ ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದ ರೇಷ್ಮಾ ಟ್ರಾವೆಲ್ಸ್ ಸಂಸ್ಥೆಗೆ ಸೇರಿದ್ದೆನ್ನಲಾದ ಈ ಬಸ್ ಇಂದು ಬೆಳಿಗ್ಗೆ ಧಾರವಾಡ ಕ್ರಮಿಸಿ ಕರಾವಳಿಯತ್ತ ಪ್ರಯಾಣ ಬೆಳೆಸಿತ್ತು. ಹುಬ್ಬಳ್ಳಿ ಬೈಪಾಸ್ ಸಮೀಪ ಕಾರವಾರ ರಸ್ತೆಯಲ್ಲಿ ಚಲಿಸುತ್ತಿದ್ದಾಗ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ. ಕೂಡಲೇ ಚಾಲಕ ಪ್ರಯಾಣಿಕರನ್ನು ಬಸ್‌ನಿಂದ ಇಳಿಯುವಂತೆ ಸೂಚಿಸಿದ್ದಾರೆ. ಪ್ರಾಯಾಣಿಕರು ತರಾತುರಿಯಲ್ಲಿ ಬಸ್‌ನಿಂದ ಇಳಿದು ಪ್ರಾಣಪಾಯದಿಂದ ಪಾರಾಗಿದ್ದಾರೆ.

ಬಸ್ ಸುಟ್ಟು ಕರಕಲಾಗಿದೆ. ಸ್ಥಳೀಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Related posts