ಬೆಂಗಳೂರು: ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ನಟಿ ರನ್ಯಾ ರಾವ್ ಬಂಧನಕ್ಕೊಳಗಾಗಿದ್ದು, ಇದೀಗ ಸಿಬಿಸಿ ಕೂಡಾ ಪ್ರತನಿಖೆಯ ಅಖಾಡಕ್ಕೆ ಧುಮುಕಿದೆ.
ನಟಿ ರನ್ಯಾ ರಾವ್ ವಿರುದ್ಧ ಡಿಆರ್ಐ ಅಧಿಕಾರಿಗಳು ನೀಡಿದ ಮಾಹಿತಿ ಆಧರಿಸಿ ಸಿಬಿಐ ಪ್ರಕರಣ ದಾಖಲಿಸಿಕೊಂಡಿದೆ ಎನ್ನಲಾಗಿದೆ. ಸಿಬಿಐ ಮುಂಬೈ ಹಾಗೂ ಬೆಂಗಳೂರಿನಲ್ಲಿ ಪರಿಶೀಲನೆಯಲ್ಲಿ ತೊಡಗಿರುವ ಸಿಬಿಐ ಇದೀಗ ತಾನು ಕೂಡಾ ತನಿಖೆಗೆ ಮುಂದಾಗಿದೆ.
ವಿದೇಶದಿಂದ ಚಿನ್ನ ಕಳ್ಳಸಾಗಣೆ ಮಾಡುತ್ತಿದ್ದ ಸಂದರ್ಭದಲ್ಲಿ ನಟಿಯನ್ನು ಬಂಧಿಸಲಾಗಿತ್ತು. ಆಕೆಯಿಂದ ಸುಮಾರು 14.20 ಕೆಜಿ ಚಿನ್ನ ನಗದು ಸೇರಿ 17.29 ಕೋಟಿ ರೂಪಾಯಿ ಮೌಲ್ಯದ ವಸ್ತುಗಳನ್ನು ಡಿಆರ್ಐ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಗಂಭೀರ ಆರೋಪದಲ್ಲಿ ಬಂಧಿತರಾಗಿರುವ ನಟಿ ರನ್ಯಾ ಅವರನ್ನು ಕೋರ್ಟ್ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.