ನ.26ರಂದು ದೇಶಾದ್ಯಂತ ಜಿಲ್ಲಾಧಿಕಾರಿಗಳ ಕಚೇರಿ ಬಳಿ ರೈತರ ಪ್ರತಿಭಟನೆ

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ರೈತರು ನಡೆಸುವ ಉಪವಾಸ ಸತ್ಯಾಗ್ರಹ ಬೆಂಬಲಿಸಿ ದಕ್ಷಿಣ ರಾಜ್ಯಗಳಲ್ಲಿ 26 ರಂದು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ರೈತರ ಮೌನ ದರಣಿ ನಡೆಸಲಾಗುವುದು ಎಂದು ರೈತ ನಾಯಕರು ಘೋಷಿಸಿದ್ದಾರೆ.

ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರಾಷ್ಟ್ರೀಯ ರೈತ ಮುಖಂಡ ಜಗಜಿತ್ ಸಿಂಗ್ ದಲೆವಾಲ, ಕೇಂದ್ರ ಸರ್ಕಾರ ಸಮಸ್ಯೆಗೆ ಪರಿಹಾರ ಸೂಚಿಸಲು ಕ್ರಮ ಕೈಗೊಳ್ಳದಿದ್ದರೆ ದೇಶಾದ್ಯಂತ ರೈತರು ಬೀದಿಗಿಳಿಯ ಬೇಕಾಗುತ್ತದೆ. ಎರಡು ದಿನ ಕಾದು ನೋಡುತ್ತೇವೆ ಎಂದರು.

ದೆಹಲಿಯ ಕನೂರಿ ಬಾರ್ಡರ್.ಶಂಬು ಬಾರ್ಡರ್ ಗಳಲಿ.ರೈತರ ಹೂರಾಟ ಗಂಬೀರ ಸ್ವರೂಪ ಪಡೆಯುತಿದೆ. ಸಂಸತ್ ಆದೀವೆಶನ ಆರಂಬವಾಗುತಿರುವ ಹಿನ್ನೆಲೆಯಲ್ಲಿ ನವಂಬರ್ 26 ರಿಂದ ರಾಷ್ಟ್ರೀಯ ರೈತ ಮುಖಂಡ ಜಗಜಿತ್ ಸಿಂಗ್ ಧಲೇವಾಲ ಆಮರಣಾಂತ ಉಪವಾಸ ಸತ್ಯಾಗ್ರಹ ಆರಂಭಿಸುವಲ್ಲಿಯೆ ಕೆಂದ್ರ ಸರ್ಕಾರ ಎಚ್ಚೆತ್ತುಕೊಂಡು ಸಮಸ್ಯೆ ಬಗೆಹರಿಸಬೇಕು. ಇಲ್ಲದಿದ್ದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದರು.

ಕುರುಬೂರು ಎಚ್ಚರಿಕೆ:

ಕೇಂದ್ರ ಸರ್ಕಾರ ಎಚ್ಚೆತ್ತುಕೊಳ್ಳದಿದ್ದರೆ 26 ರಂದು ಉಪವಾಸ ಸತ್ಯಾಗ್ರಹ ಸ್ಥಳದಲ್ಲಿಯೇ ದೇಶಾದ್ಯಂತ ಬೀದಿಗಿಳಿಯಲು ಹೋರಾಟಕ್ಕೆ ರೈತರಿಗೆ ಕರೆ ನೀಡಬೇಕಾಗುತ್ತದೆ ಎಂದು ಸಂಯುಕ್ತ ಕಿಸಾನ್ ಮೋರ್ಚಾ ದಕ್ಷಿಣ ಭಾರತ ಸಂಚಾಲಕ ಕುರುಬೂರು ಶಾಂತಕುಮಾರ್ ಎಚ್ಚರಿಸಿದ್ದರು ದೇಶಾದ್ಯಂತ ರೈತರಿಗೆ ಬೇಕಾದ ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಖಾತ್ರಿ ಕಾನೂನು. ರೈತರ ಸಂಪೂರ್ಣ ಸಾಲಮನ್ನಾ. 60 ವರ್ಷ ತುಂಬಿದ ರೈತರಿಗೆ ಪಿಂಚಣಿ ಯೋಜನೆ ಜಾರಿಗೆ ತರಬೇಕೆಂಬ ಒತ್ತಾಯದ ಬಗ್ಗೆ ಡಯ ಫೆಬ್ರವರಿ 13 ರಿಂದ ನಿರಂತರ ಹೋರಾಟ ನಡೆಸಲಾಗುತ್ತಿದೆ

ಪತ್ರಿಕಾಗೋಷ್ಠಿಯಲ್ಲಿ ಏಸ ಕೆ ಎಂ ರಾಜಕೀಯೆತರ ಸಂಘಟನೆಯ ಮುಖಂಡರುಗಳಾದ ಪಂಜಾಬ್ ಸುರಜೀಂದರ್ ರ್ಸಿಂಗ್. ಕೆ ಎಂ ಎಂ ಶರವಣ ಸಿಂಗ್ ಪಂದೆರಾ. ತೆಜ್ನಿಂದ್ರ ಸಿಂಗ್. ತಮಿಳುನಾಡಿನ ಪಾಂಡ್ಯನ್. ಸುದಾ ದರ್ಮಲಿಂಗಂ. ಉತ್ತರ ಪ್ರದೇಶ ಹರ್ಪಾಲ್ ಬಿಲಾರಿ.ರಾಜೇಂದ್ರಯಾದವ್. ಹರಿಯಾಣ ಅಭಿಮನ್ಯುಕೂಹರ್.
ಲಕ್ವಿಂದ್ರ ಸಿಂಗ್. ಇಂದ್ರಜಿತ್ ಸಿಂಗ್ ಉಪಸ್ಥಿತರಿದ್ದರು.

Related posts