ಬೆಂಗಳೂರು: ರಾಜ್ಯ ಪೊಲೀಸ್ ಇಲಾಖೆಗೆ ಸರ್ಕಾರ ಮತ್ತೆ ಮೇಜರ್ ಸರ್ಜರಿ ಮಾಡಿದೆ. ಎಡಿಜಿಪಿಗಳು ಸೇರಿದಂತೆ ಪ್ರಮುಖ ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶಿಸಿದೆ.
ಆಡಳಿತ ವಿಭಾಗದ ಹೆಚ್ಚುವರಿ ಡಾ| ಅಬ್ದುಲ್ ಸಲೀಂ ಅವರನ್ನು ಬೆಂಗಳೂರು ಸಂಚಾರ ವಿಭಾಗಕ್ಕೆ ವರ್ಗಾಯಿಸಲಾಗಿದೆ.
ಈ ವರೆಗೂ ಜಂಟಿ ಪೊಲೀಸ್ ಆಯುಕ್ತರು ಬೆಂಗಳೂರು ಟ್ರಾಫಿಕ್ ಪೊಲೀಸ್ ವಿಭಾಗದ ಸರಥಿಯಾಗಿದ್ದರು. ಇದೀಗ ಆ ಹುದ್ದೆಯನ್ನು ವಿಶೇಷ ಸಂಚಾರ ಆಯುಕ್ತರರಾಗಿ ಮೇಲ್ದರ್ಜೆಗೆ ಏರಿಸಲಾಗಿದೆ. ಈ ಹುದ್ದೆಗೆ ಸಲೀಂ ಅವರು ನಿಯುಕ್ತಿಯಾಗಿದ್ದಾರೆ. ಇದೇ ವೇಳೆ, ಸಿಐಡಿ ಎಡಿಜಿಪಿಯಾಗಿದ್ದ ಉಮೇಶ್ ಕುಮಾರ್ ಅವರನ್ನು ಆಡಳಿತ ವಿಭಾಗದ ಎಡಿಜಿಪಿಯಾಗಿ ವರ್ಗಾಯಿಸಲಾಗಿದೆ.
ಐಜಿಪಿ, ಎಸ್ಪಿಗಳ ವರ್ಗಾವರ್ಗಿ..
- ಐಜಿಪಿ ದಿವ್ಯಜ್ಯೋತಿ ರಾಯ್ – ಕುಂದುಕೊರತೆಗಳು ಮತ್ತು ಮಾನವ ಹಕ್ಕುಗಳ ವಿಭಾಗ
- ಡಾ| ಬಿ.ಆರ್. ರವಿಕಾಂತೇ ಗೌಡ – ಡಿಐಜಿ ಸಿಐಡಿ
- ರವಿ ಡಿ.ಚನ್ನಣ್ಣನವರ್ – ಕಿಯೋನಿಕ್ಸ್ ವ್ಯವಸ್ಥಾಪಕ ನಿರ್ದೇಶಕರು
- ಬಿ.ರಮೇಶ್ – ಪೊಲೀಸ್ ಆಯುಕ್ತರು, ಮೈಸೂರು
- ರಮಣ ಗುಪ್ತ – ಡಿಐಜಿ ಗುಪ್ತಚರ ಇಲಾಖೆ
- ಬಿ.ಎಸ್.ಲೋಕೇಶ್ ಕುಮಾರ್ – ಡಿಐಜಿ, ಬಳ್ಳಾರಿ ವಿಭಾಗ ,
- ಡಾ| ಚಂದ್ರಗುಪ್ತ- ಡಿಐಜಿ, ಪಶ್ಚಿಮ ವಿಭಾಗ, ಮಂಗಳೂರು.
- ಡಾ| ಶರಣಪ್ಪ- ಜಂಟಿ ಪೊಲೀಸ್ ಆಯುಕ್ತರು, ಅಪರಾಧ ವಿಭಾಗ, ಬೆಂಗಳೂರು
- ಎಂ.ಎನ್.ಅನುಚೇತ್- ಬೆಂಗಳೂರು ಸಂಚಾರ ವಿಭಾಗ