ಭೀಕರ ಅಪಘಾತ; ಬಸ್ ಪಲ್ಟಿ, ಧಗಧಗಿಸಿದ ಕಾರು; ಇಬ್ಬರು ಸಜೀವ ದಹನ

ಚಿಕ್ಕಬಳ್ಳಾಪುರ: ಚಿಂತಾಮಣಿ ಬಳಿ ಖಾಸಗಿ ಬಸ್‌ ಮತ್ತು ಕಾರು ಅಪಘಾತಕ್ಕೀಡಾಗಿ ಪ್ರಯಾಣಿಕರಿಬ್ಬರು ಸಾವನ್ನಪ್ಪಿದ್ದಾರೆ.

ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಗೋಪಲ್ಲಿ ಗೇಟ್ ಬಳಿ ಈ ಅಪಘಾತ ನಡೆದಿದೆ. ಬಸ್ಸು ಡಿಕ್ಕಿಯಾದ ಸಂದರ್ಭದಲ್ಲಿ ಕಾರು ಧಗಧಗಿಸಿ ಹೊತ್ತಿ ಉರಿದಿದ್ದು ಇಬ್ಬರು ಸಜೀವ ದಹನವಾಗಿದ್ದಾರೆ. ಮೃತರನ್ನು ಆಂಧ್ರ ಮೂಲದ ಧನಂಜಯ ರೆಡ್ಡಿ, ಮತ್ತು ಕಲಾವತಿ ಮೃತರು ಎಂದು ಗುರುತಿಸಲಾಗಿದೆ.

ಅಪಘಾತಕ್ಕೀಡಾದ ಬಸ್ಸು ಕೂಡಾ ಉರುಳಿ ಬಿದ್ದಿದ್ದು ಅದರಲ್ಲಿದ್ದವರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎನ್ನಲಾಗಿದೆ.

Related posts