ಗುವಾಹಟಿ; ಇಂಫಾಲ ಸಮೀಪದ ಆಗಿಜಂಗ್ ಗ್ರಾಮದಲ್ಲಿ ಎರಡು ಗುಂಪುಗಳ ನಡುವೆ ಘರ್ಷಣೆ ನಡೆಸಿದೆ. ಪೊಲೀಸರ ನಿಯಂತ್ರಣ ಮೀರಿ ಈ ಸಂಘರ್ಷ ನಡೆದಿದ್ದು ಗಿಂಡಿನ ದಾಳಿ ಭಾರೀ ಸಾವು ನೋವಿಗೆ ಕಾರಣವಾಗಿದೆ.
ಬಂಡೂಕೋರರ ಗುಂಪು ದಾಳಿ ನಡೆಸಿದ ವೇಳೆ ಈ ಹಿಂಸಾಚಾರ ಭುಗಿಲೆದ್ದಿದೆ ಎನ್ಬಲಾಗಿದೆ. ಸುದೀರ್ಘ ಕಾರ್ಯಾಚರಣೆ ನಂತರ ಪೊಲೀಸರು ಪರಿಸ್ಥಿತಿಯನ್ನು ಹತೋಟಿಗೆ ತೆಗೆದುಕೊಂಡಿದ್ದಾರೆ.
ಈ ನಡುವೆ, ಮಣಿಪುರದ ಸಚಿವೆ ನಿವಾಸಕ್ಕೆ ದುಷ್ಕರ್ಮಿಗಳ ಗುಂಪು ಬೆಂಕಿ ಹಚ್ಚಿದ ಘಟನೆಯೂ ನಡದಿದೆ.. ಇಂಫಾಲ್ ಪಶ್ಚಿಮ ಜಿಲ್ಲೆಯ ಲಂಫೇಲ್ ಪ್ರದೇಶದಲ್ಲಿರುವ ಕೈಗಾರಿಕಾ ಸಚಿವ ನೆಮ್ಚಾ ಕಿಪ್ಗೆನ್ ಅವರ ಬಂಗಲೆ ಮೇಲೆ ಈ ದಾಳಿ ನಡೆದಿದೆ. ಈ ಕಟ್ಟಡದಲ್ಲಿ ಯಾರು ಇಲ್ಲದೇ ಇರುವುದರಿಂದ ಭಾರೀ ಅನಾಹುತ ತಪ್ಪಿದೆ.
ಮೈಟಿ ಮತ್ತು ಕುಕಿ ಸಮುದಾಯಗಳ ನಡುವಿನ ಜನಾಂಗೀಯ ಘರ್ಷಣೆ ಸಂದರ್ಭದಲ್ಲಿ ಸರ್ಕಾರದ ವಿರುದ್ದದ ಆಕ್ರೋಶವನ್ನು ಕಿಡಿಗೇಡುಗಳು ಈ ರೀತಿ ವ್ಯಕ್ತಪಡಿಸಿದ್ದಾರೆ.