ಮೋದಿ ಸಂಪುಟದಲ್ಲಿ ಸರ್ಜರಿ; ರಾಷ್ಟ್ರಪತಿ ಅನುಮೋದನೆ

ದೆಹಲಿ: ಪ್ರಧಾನಿ ನರೇಂದ್ರ ಮೋದಿ ಸಂಪುಟದಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದೆ. ಕಾನೂನು ಸಚಿವ ಕಿರಣ್​ ರಿಜಿಜು ಅವರು ನಿರ್ವಹಿಸುತ್ತಿದ್ದ ಖಾತೆಯನ್ನು ಸಚಿವ ಅರ್ಜುನ್ ಮೇಘವಾಲ್​ ಅವರಿಗೆ ವಹಿಸಲಾಗಿದೆ. ಸಚಿವ ಕಿರಣ್ ರಿಜಿಜು ಅವರಿಗೆ ಭೂ ವಿಜ್ಞಾನ ಇಲಾಖೆಯ ಹೊಣೆ ವಹಿಸಲಾಗಿದೆ.

ಪ್ರಧಾನಿ ನರೇಂದ್ರ ಮೋದಿ ಅವರ ಶಿಫಾರಸಿನಂತೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಖಾತೆ ಮರುಹಂಚಿಕೆಗೆ ಅನುಮೋದನೆ ನೀಡಿದ್ದಾರೆ.

Related posts