ಯಶ್ ‘ರಾಮಾಯಣ’ ಪಯಣ ಆರಂಭ; ರಾವಣ ಪಾತ್ರಕ್ಕಾಗಿ ಶೂಟಿಂಗ್

ಮುಂಬೈ: ನಟ ಯಶ್ ‘ರಾಮಾಯಣ’ ಚಿತ್ರೀಕರಣ ಆರಂಭಿಸಿದ್ದಾರೆ. ನಿತೇಶ್ ತಿವಾರಿ ಅವರ ಈ ಸಿನಿಮಾದಲ್ಲಿ ಯಶ್ ರಾವಣನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ರಾಮಾಯಣದಲ್ಲಿ ಲಾರಾ ದತ್ತ, ಸನ್ನಿ ಡಿಯೋಲ್ ಮತ್ತು ಇಂದಿರಾ ಕೃಷ್ಣ ಮೊದಾಲದವರೂ ನಟಿಸುತ್ತಿದ್ದಾರೆ.

ತಿವಾರಿ ನಿರ್ದೇಶನದ ಈ ಚಿತ್ರದ ಚಿತ್ರೀಕರಣ ಭಾರತದಲ್ಲಿ ನಡೆಯುತ್ತಿದೆ. ನಟ ರಣಬೀರ್ ಕಪೂರ್ ರಾಮನ ಪಾತ್ರದಲ್ಲಿ ನಟಿಸಲಿದ್ದಾರೆ ಮತ್ತು ನಟಿ ಸಾಯಿ ಪಲ್ಲವಿ ಸೀತಾದೇವಿಯ ಪಾತ್ರವನ್ನು ನಿರ್ವಹಿಸಲಿದ್ದಾರೆ. ರಣಬೀರ್ ಮತ್ತು ಪಲ್ಲವಿ ಚಿತ್ರದ ಕೆಲವು ಭಾಗಗಳನ್ನು ಮುಂಬೈನಲ್ಲಿ ಚಿತ್ರೀಕರಿಸಿದ್ದಾರೆ. ಮತ್ತು ಈಗ, ಚಿತ್ರದ ನಿರ್ಮಾಪಕರೂ ಆಗಿರುವ ಯಶ್ ಮುಂಬೈನಲ್ಲಿ ತಮ್ಮ ಪಾತ್ರದ ಚಿತ್ರೀಕರಣವನ್ನು ಪ್ರಾರಂಭಿಸಿದ್ದಾರೆ.

ಫೆಬ್ರವರಿ 21 ರಂದು ಯಶ್ ರಾಮಾಯಣಕ್ಕಾಗಿ ತಮ್ಮ ಭಾಗಗಳ ಚಿತ್ರೀಕರಣವನ್ನು ಪ್ರಾರಂಭಿಸಿದ್ದಾರೆ. ಶೂಟಿಂಗ್ ಭಾಗವು ಯುದ್ಧದ ಸನ್ನಿವೇಶಗಳ ಮೇಲೆ ಕೇಂದ್ರೀಕೃತವಾಗಿರುತ್ತದೆ. ತಂಡವು ಮುಂಬೈನ ಅಕ್ಸಾ ಬೀಚ್‌ನಲ್ಲಿ ಕೆಲವು ನಿರ್ಣಾಯಕ ಯುದ್ಧ ದೃಶ್ಯಗಳನ್ನು ಚಿತ್ರೀಕರಿಸಲಿದೆ ಎಂದು ಮೂಲಗಳು.

“ರಾಮಾಯಣ” ಎರಡು ಭಾಗಗಳಲ್ಲಿ ಬಿಡುಗಡೆಯಾಗಲಿದೆ. ಮೊದಲ ಭಾಗವು 2026 ರ ದೀಪಾವಳಿಯಂದು ಬಿಡುಗಡೆಯಾಗಲಿದೆ, ಆದರೆ ಎರಡನೇ ಭಾಗವು 2027 ರ ದೀಪಾವಳಿಯಂದು ಬಿಡುಗಡೆಯಾಗುವಂತೆ ಪ್ಲಾನ್ ರೂಪಿಸಲಾಗಿದೆ.

 

Related posts