ಬೆಂಗಳೂರು: ಯಾವುದೇ ಸರ್ಕಾರಗಳು ಬರಲಿ ಕೃಷಿ ಅಧಿಕಾರಿಗಳು ಪ್ರಾಮಾಣಿಕವಾಗಿ ರೈತರ ಪರವಾದ ಕೆಲಸಗಳನ್ನು ಮಾಡಬೇಕು ಎಂದು ಕೃಷಿ ಸಚಿವ ಎನ್ ಚಲುವರಾಯಸ್ವಾಮಿ ಹೇಳಿದ್ದಾರೆ.
ಕೃಷಿ ಆಯುಕ್ತಾಲಯದಲ್ಲಿರುವ ಸಂಗಮ ಸಂಭಾಗಣದಲ್ಲಿ,NABL ಮಾನ್ಯತೆ ಪಡೆದಿರುವ ಪ್ರಯೋಗಾಲಯಗಳ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಮತನಾಡಿದ ಸಚಿವರು, ಕೃಷಿ ಇಲಾಖೆಯ ಯೋಜನೆಗಳು ರೈತರಿಗೆ ತಲುಪಬೇಕು, ಇದಕ್ಕಾಗಿ ಅಧಿಕಾರಿಗಳು ಒಗ್ಗಟ್ಟಿನಿಂದ ಕೆಲಸ ಮಾಡಿದಾಗ ಉತ್ತಮ ಫಲಿತಾಂಶ ಹೊರಬರಲಿದೆ ಎಂದು ಸಚಿವರು ತಿಳಿಸಿದರು.
ಕೃಷಿ ಇಲಾಖೆಯ 29, ತೋಟಗಾರಿಕೆ ಇಲಾಖೆಯ 6, ರೇಷ್ಮೆ ಇಲಾಖೆಯ 1, ಕೃಷಿ ವಿಶ್ವವಿದ್ಯಾಲಯಗಳ 3 ಮತ್ತು ಕೃಷಿ ವಿಜ್ಞಾನ ಕೇಂದ್ರಗಳ 5 ಮಣ್ಣು ಪರೀಕ್ಷಾ ಪ್ರಯೋಗಾಲಗಳು ಸೇರಿ ಒಟ್ಟು 44 ಮಣ್ಣು ಪರೀಕ್ಷಾ ಪ್ರಯೋಗಾಲಯಗಳು NABL Recognition ಪಡೆದಿರುವುದಕ್ಕೆ ಸಚಿವರು ಅಭಿನಂದನೆ ತಿಳಿಸಿದರು.
ಅಲ್ಲದೆ, ಕೃಷಿ ಇಲಾಖೆಯ 6 ರಸಗೊಬ್ಬರ ನಿಯಂತ್ರಣ ಪ್ರಯೋಗಾಲಯಗಳು, 2 ರಾಜ್ಯ ಪೀಡೆನಾಶಕ ಪರೀಕ್ಷಾ ಪ್ರಯೋಗಾಲಯಗಳು ಮತ್ತು ಕರ್ನಾಟಕ ರಾಜ್ಯ ಬೀಜ ಹಾಗೂ ಸಾವಯವ ಪ್ರಮಾಣನ ಸಂಸ್ಥೆಯ 1 ಬೀಜ ಪರೀಕ್ಷಾ ಪ್ರಯೋಗಾಲಯ ಸೇರಿ 9 ಪ್ರಯೋಗಾಲಯಗಳು NABL Accreditation ಪಡೆದಿರುತ್ತವೆ. ಈ ಹಿನ್ನಲೆಯಲ್ಲಿ, NABL ಸಹಯೋಗದೊಂದಿಗೆ “NABL ಮಾನ್ಯತೆ ಪಡೆದಿರುವ ಪ್ರಯೋಗಾಲಯಗಳ ಅಧಿಕಾರಿಗಳಿಗೆ ಸಚಿವರು ಅಭಿನಂದಿಸಿ ಪ್ರಶಸ್ತಿ ಪತ್ರ ನೀಡಿದರು.
ಕಾರ್ಯಕ್ರಮದಲ್ಲಿ NABL ಮಾನ್ಯತೆ ಪಡೆದ ವಿವಿಧ 53 ಪ್ರಯೋಗಾಲಯಗಳನ್ನು ಸನ್ಮಾನಿಸುವ ಜೊತೆಗೆ ಇತರೆ ಪ್ರಯೋಗಾಲಯಗಳ ಸಾಮರ್ಥ್ಯಾಭಿವೃದ್ಧಿ ಕಾರ್ಯಕ್ರಮಗಳನ್ನು ಸಹ ನಡೆಸಲಾಯಿತು.
ಕೃಷಿ ಸಚಿವರು ಎಲ್ಲಾ NABL ಮಾನ್ಯತೆ ಪಡೆದ ಪ್ರಯೋಗಾಲಯಗಳನ್ನು ಅಭಿನಂದಿಸುತ್ತಾ, ರಾಜ್ಯದ ರೈತರ ಏಳಿಗೆಗೆ ಗುಣಮಟ್ಟದ ಪರಿಕ್ಷಾ ಫಲಿತಾಂಶ ನೀಡುವಲ್ಲಿ ಮತ್ತು ಗುಣಮಟ್ಟವನ್ನು Lab to Land ಗೆ ತಲುಪಿಸುವ ನಿಟ್ಟಿನಲ್ಲಿ ಕೃಷಿ ಇಲಾಖೆಯು ಕಾರ್ಯ ನಿರ್ವಹಿಸುವ ಜವಾಬ್ದಾರಿ ಹೊಂದಿದ್ದು, ಈ ನಿಟ್ಟಿನಲ್ಲಿ “NABL ಮಾನ್ಯತೆ” ಅತ್ಯಂತ ಅವಶ್ಯವಾಗಿರುತ್ತದೆ ಎಂದು ತಿಳಿಸಿದರು..
NABL ಮಾನ್ಯತೆ ಪಡೆಯುವಲ್ಲಿ ಶ್ರಮಿಸಿದ ಎಲ್ಲಾ ಹಂತದ ಇಲಾಖಾ ಅಧಿಕಾರಿಗಳು/ ಸಿಬ್ಬಂದಿಗಳ ಪ್ರಯತ್ನ ಪ್ರಶಂಸನೀಯ ಎಂದು ಇದೇ ವೇಳೆ ಸಚಿವರು ತಿಳಿಸಿದರು.