ವಿಜಯೇಂದ್ರ ಕಾಂಗ್ರೆಸ್ ನಾಯಕರ ಒಳ ಒಪ್ಪಂದ? ಆರೋಪ ತಳ್ಳಿಹಾಕಿದ ಪ್ರಿಯಾಂಕ್

ಕಲಬುರಗಿ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಕಾಂಗ್ರೆಸ್ ನಾಯಕರ ಒಳ ಒಪ್ಪಂದವಿದೆ ಎಂಬ ಆರೋಪವನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ತಳ್ಳಿ ಹಾಕಿದ್ದಾರೆ.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾವು ವಿಜಯೇಂದ್ರ ಅವರ ವಿರೋಧಿಯಾಗಿದ್ದೇವೆ. ವೈಹಾಗಾಗಿ ಅವರು ಯಾವಾಗಲೂ ರಾಜ್ಯದ ಆರ್ಥಿಕ ಸ್ಥಿತಿ ಬಗ್ಗೆ ಟೀಕಿಸುತ್ತಾರೆ ಎಂದರು.

ವಿಜಯೇಂದ್ರ ವಿರುದ್ಧ ವಾಗ್ದಾಳಿ ನಡೆಸಿದ ಅವರು, ರಾಜ್ಯ ಸರ್ಕಾರ ದಿವಾಳಿಯಾಗಿದೆ ಎಂಬ ವಿಜಯೇಂದ್ರರ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿ, ಸರ್ಕಾರ ದಿವಾಳಿಯಾಗಿಲ್ಲ, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರರೇ ದಿವಾಳಿಯಾಗಿದ್ದಾರೆಂದು ಎದಿರೇಟು ನೀಡಿದರು.

ವಿಜಯೇಂದ್ರ ಅವರು ಮೊದಲು ತಮ್ಮ ಪಕ್ಷದ ದಿವಾಳಿತನ ಬಗ್ಗೆ ಮಾತನಾಡಲಿ ಎಂದು ಪ್ರಿಯಾಂಕ್ ಖರ್ಗೆ ಸವಾಲು ಹಾಕಿದರು.

Related posts