ನವದೆಹಲಿ: ಭಾರತದ ಪ್ರಾಚೀನ ನಾಗರಿಕತೆ ಮೌಲ್ಯಗಳು, ಸಾಂಸ್ಕತಿಕ ವಿಕಸನ, ಶ್ರೀಮಂತವಾದ ಭೂತ ಕಾಲ ಮತ್ತು ವೈಭವದ ಸಮಾಗಮ ನೀತಿಗಳ ಕುರಿತು 17 ಭಾಷೆಗಳಲ್ಲಿ 10 ಲಕ್ಷಕ್ಕೂ ಹೆಚ್ಚು ಬಾರಿ ಆಡಿದ ಜಿಗ್ಯಾಸ ರಸಪ್ರಶ್ನೆ ವಿಜೇತರಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಭಿನಂದನೆ ಸಲ್ಲಿಸಿದ್ದಾರೆ.
ಕೇಂದ್ರ ಸಚಿವ ಶ್ರೀ ಹರ್ದೀಪ್ ಸಿಂಗ್ ಪುರಿ ಅವರ ಟ್ವೀಟ್ ಅನ್ನು ಹಂಚಿಕೊಂಡು ಪ್ರಧಾನಮಂತ್ರಿ ಅವರು ಟ್ವೀಟ್ ಮಾಡಿದ್ದಾರೆ. “ಜಿಗ್ಯಾಸದಲ್ಲಿ ಗೆದ್ದ ಎಲ್ಲರಿಗೂ ಅಭಿನಂದನೆಗಳು. ಯುವ ಸಮೂಹದಲ್ಲಿ ನಮ್ಮ ಇತಿಹಾಸ ಮತ್ತು ಸಂಸ್ಕೃತಿ ಕುರಿತು ಜ್ಞಾನ ವೃದ್ಧಿಸಲು ನಡೆಸಿದ ವ್ಯಾಪಕ ಪ್ರಯತ್ನ ಇದಾಗಿದೆ. ಈ ರಸ ಪ್ರಶ್ನೆಗೆ ಇಂತಹ ಅದ್ಭುತ ಪ್ರತಿಕ್ರಿಯೆ ನೋಡಿ ಸಂತಸವಾಗುತ್ತಿದೆ” ಎಂದು ಹೇಳಿದ್ದಾರೆ.
Yesterday meets today & tomorrow.
Jigyasa- When young minds come together to explore, inquire, discover & rediscover, it is not just a quiz, but a grand celebration of India, her ancient civilisational values, evolution of her cultures, the rich past & glorious samagam of ethos. pic.twitter.com/zvLmyvYI0f— Hardeep Singh Puri (मोदी का परिवार) (@HardeepSPuri) August 12, 2023