ವಿಶ್ವದ ಪ್ರಭಾವಿ ತನಿಖಾ ಸಂಸ್ಥೆ FBIಗ ಮುಖ್ಯಸ್ಥರಾಗಿ ಭಾರತ ಮೂಲದ ಕಾಶ್ ಪಟೇಲ್ ನೇಮಕ

ವಾಷಿಂಗ್ಟನ್: ವಿಶ್ವದ ಪ್ರಭಾವಿ ತನಿಖಾ ಸಂಸ್ಥೆಯಾಗಿರುವ ಅಮೇರಿಕಾದ ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (FBI), ಮುಖ್ಯಸ್ಥರಾಗಿ ಭಾರತ ಮೂಲದ ಕಾಶ್ ಪಟೇಲ್ ನೇಮಕ ಗೊಂಡಿದ್ದಾರೆ. ಕಶ್ಯಪ್ ಪಟೇಲ್ ಎಂದೂ ಗುರುತಾಗಿರುವ ಕಾಶ್ ಪಟೇಲ್ ಅವರನ್ನು ಸೆನೆಟ್ ಆಯ್ಕೆ ಮಾಡಿದೆ.


ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಅವರ ಆರಾಗಿ ಗುರುತಿಸಿಕೊಂಡಿರುವ ಕಾಶ್ ಪಟೇಲ್(ಕಶ್ಯಪ್ ಪಟೇಲ್) ಅವರನ್ನು ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್(ಎಫ್​ಬಿಐ) ನಿರ್ದೇಶಕರನ್ನಾಗಿ ನೇಮಿಸಲಾಗಿದೆ ಶ್ವೇತ ಭವನ ಮೂಲಗಳು ತಿಳಿಸಿವೆ.
ಕಾಶ್ ಪಟೇಲ್ ಅವರ ನೇಮಕವನ್ನು ಅಮೆರಿಕ ಸೆನೆಟ್ 51-49 ಮತಗಳಿಂದ ಅನುಮೋದಿಸಿದೆ. ಈ ನೇಮಕ ಪ್ರಕ್ರಿಯೆ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಸಂತಸ ಹಂಚಿಕೊಂಡಿರುವ ಕಾಶ್ ಪಟೇಲ್ ‘ನನ್ನ ಮೇಲಿಟ್ಟಿರುವ ನಿಮ್ಮ ನಂಬಿಕೆಗೆ ಧನ್ಯವಾದಗಳು. ಅಮೆರಿಕದ ಜನರಿಗೆ ಪಾರದರ್ಶಕ, ಜವಾಬ್ದಾರಿಯುತ ಮತ್ತು ನ್ಯಾಯಕ್ಕೆ ಬದ್ಧವಾಗಿರುವ ಎಫ್‌ಬಿಐ ಅಗತ್ಯವಿದೆ’ ಎಂದು ಅವರು ಬರೆದುಕೊಂಡಿದ್ದಾರೆ.

Related posts