ಶಿವಮೊಗ್ಗ: ಅನುಮಾಸ್ಪದ ಬಾಕ್ಸ್‌ನಲ್ಲಿದ್ದುದು ಸ್ಫೋಟಕವಲ್ಲ ಎಂದ ಪೊಲೀಸರು

ಶಿವಮೊಗ್ಗ: ಶಿವಮೊಗ್ಗ ರೈಲು ನಿಲ್ದಾಣದಲ್ಲಿ ಪತ್ತೆಯಾಗಿರುವ ಎರಡು ಅನುಮಾನಾಸ್ಪದ ಬಾಕ್ಸ್‌ಗಳ ಕುರಿತಂತೆ ಎದ್ದಿರುವ ಆತಂಕ ಕೊನೆಗೂ ನಿವಾರಣೆಯಾಗಿದೆ. ಪತ್ತೆಯಾಗಿರುವ ಬಾಕ್ಸ್‌ಗಳಲ್ಲಿ ಬಾಂಬ್ ಇರಬಹುದೆಂಬ ಭೀತಿ ಕಾಡಿತ್ತು.

ಈ ಕುರಿತಂತೆ ಪರಿಶೀಲಿಸಿರುವ ಪೊಲೀಸರು, ಪತ್ತೆಯಾಗಿರುವ ಬಾಕ್ಸ್‌ನಲ್ಲಿ ಸ್ಫೋಟಕದ ಪುಡಿ ಇದ್ದುದಲ್ಲ, ಬದಲಾಗಿ ಅದರಲ್ಲಿರುವುದು ಉಪ್ಪು ಎಂದು ದೃಢಪಡಿಸಿದ್ದಾರೆ.

ಶಿವಮೊಗ್ಗ ರೈಲು ನಿಲ್ದಾಣದಲ್ಲಿ ವಾಹನ ನಿಲುಗಡೆ ಪ್ರದೇಶದಲ್ಲಿ ಭಾನುವಾರ ಬಾಕ್ಸ್‌ಗಳು ಪತ್ತೆಯಾಗಿದ್ದು ವಾತಸುದಾರರಿಲ್ಲದ ಈ ಬಾಕ್ಸ್ ಬಗ್ಗೆ ಅಂತೆ-ಕಂತೆಗಳ ಸುದ್ದಿ ಹರಡಿತ್ತು. ಇದೀಗ ಪೊಲೀಸ್ ಪರಿಶೀಲನೆ ನಂತರ ಗೊಂದಲಗಳು ಬಗೆಹರಿದಂತಾಗಿದೆ.‌

Related posts