ಸಂತಶ್ರೇಷ್ಠ ಕನಕದಾಸರು: ಈ ಕೀರ್ತನಾಕಾರನ ಬದುಕೇ ಆಸ್ತಿಕರಿಗೆ ಸೂತ್ರ

📝 ಎಸ್.ಟಿ.ಸೋಮಶೇಖರ್,
ಸಹಕಾರ ಸಚಿವರು

ಸಂತಶ್ರೇಷ್ಠ ಕನಕದಾಸರ ಜಯಂತ್ಯುತ್ಸವವನ್ನು ಇಙದು ನಾಡಿನಾದ್ಯಂತ ಶ್ರದ್ಧಾ ಭಕ್ತಿಯಿಂದ ಆಚರಿಸಲಾಗುತ್ತಿದೆ. ಆಸ್ತಿಕರ ಪಾಲಿಗೆ ಗುರು ಸ್ಥಾನದಲ್ಲಿರುವ ಈ ಕೀರ್ತನಾ ಹರಿಕಾರ ಕನಕದಾಸರ ಜಯಂತಿ ಈಗಿನ ಪೀಳಿಗೆಗೆ ಸ್ಫೂರ್ತಿಯಾಗಿದ್ದಾರೆ.

ದಾಸ ಸಾಹಿತ್ಯದ ಮೂಲಕ ಜೀವನದ ಪಾಠ ಸಾರಿದ ಕನಕದಾಸರು ಕನ್ನಡ ಸಾರಸ್ವತ ಲೋಕದಲ್ಲಿ ಅದ್ವೀತಿಯ ಸ್ಥಾನ ಗಳಿಸಿ ಚಿರಸ್ಮರಣೀಯರಾಗಿದ್ದಾರೆ. ಕವಿ, ಜ್ಞಾನಿ, ದಾರ್ಶನಿಕರಾಗಿ ನೀಡಿದ ಕೊಡುಗೆ ಅಪಾರ.

ವ್ಯಾಸರಾಯರ ಮೆಚ್ಚಿನ ಶಿಷ್ಯರಾದ ಕನಕದಾಸರು ಕೃಷ್ಣನ ಪರಮಭಕ್ತರಾಗಿದ್ದರು. ಸರಳ ಭಾಷೆಯಲ್ಲಿ, ಸಾಮಾನ್ಯ ಜನರಿಗೂ ಅರ್ಥವಾಗುವ ರೀತಿಯಲ್ಲಿ ಕೀರ್ತನೆಗಳ ಮೂಲಕ ಸಮಾಜದ ಒಳಿತು ಕೆಡುಕುಗಳನ್ನು ವಿಶ್ಲೇಷಿಸಿದವರು.

ಕನಕದಾಸರ ಜೀವನವೇ ಒಂದು ಪವಾಡ. ದಂಡನಾಯಕರಾಗಿದ್ದ ಅವರು ಮನಪರಿವರ್ತನೆ ಮಾಡಿಕೊಂಡು ಕವಿಯಾಗಿ, ದಾಸರಾಗುತ್ತಾರೆ. ಸಮಾಜದ ಅಂಕು-ಡೊಂಕು ತಿದ್ದುವ ಮೂಲಕ ಶ್ರೇಷ್ಠ ವ್ಯಕ್ತಿಯಾಗುತ್ತಾರೆ.

 

ಕನಕದಾಸರು ಬಹುಮುಖಿ ಸಮಾಜದ ಚಿಂತಕರಾಗಿ ಹೊಸ ಹೊಸ ಚಿಂತನೆಗಳನ್ನು ಮಾಡಿ ಅದಕ್ಕೆ ತಕ್ಕಂತಹ ಕೀರ್ತನೆಗಳನ್ನು ರಚಿಸಿ ಸಮಾಜ ಸುಧಾರಣೆಗೆ ಶ್ರಮಿಸಿದವರು.

300ಕ್ಕೂ ಅಧಿಕ ಕೀರ್ತನೆಗಳು, ನಳಚರಿತ್ರೆ, ಮೋಹನತರಂಗಿಣಿ ಸೇರಿದಂತೆ ಕಾವ್ಯಕೃತಿಗಳನ್ನು ರಚಿಸಿ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸುವುದರ ಜೊತೆಗೆ ಸಂಗೀತ ಪ್ರಪಂಚದಲ್ಲೂ ತಮ್ಮದೇ ಕೊಡುಗೆಯನ್ನು ನೀಡಿದ್ದಾರೆ.

ನಿಷ್ಠೆ ಭಕ್ತಿಯೊಂದಿಗೆ ಕೃಷ್ಣನ ದರ್ಶನ ಪಡೆದ ಭಕ್ತ ಕನಕದಾಸರ ತತ್ವಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡರೆ ಪ್ರತಿಯೊಬ್ಬರು ಉತ್ತಮ ಜೀವನ ರೂಪಿಸಿಕೊಳ್ಳಬಹುದು. ಕನಕದಾಸರ ಜಯಂತಿಯು ಎಲ್ಲರ ಒಳಿತಿಗೂ ಆಶಾದಾಯಕವಾಗಲಿ

Related posts