‘ಸರ್ಕಾರ ಪತನಗೊಳಿಸಿ ಸಿಎಂವಾಗಲು ಕೋಟಿ ರೂ’; ಬಿಜೆಪಿ ನಾಯಕನ ವಿರುದ್ದ ಕಾಂಗ್ರೆಸ್ ದೂರು

ಬೆಂಗಳೂರು: ರಾಜ್ಯದ ಕಾಂಗ್ರೆಸ್ ಸರ್ಕಾರವನ್ನು ಪತನಗೊಳಿಸಲು ಯತ್ನ ನಡೆದಿದೆ ಎಂದೂ, ಕೆಲವರು ಮುಖ್ಯಮಂತ್ರಿಯಾಗಲು ಸಾವಿರ ಕೋಟಿ ಹಣ ಇಟ್ಟುಕೊಂಡು ಕಾಯುತ್ತಿದ್ದಾರೆಂದು ಹೇಳಿಕೆ ನೀಡಿದ್ದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಕಾಂಗ್ರೆಸ್ ದೂರು ನೀಡಿದೆ.

ಬೆಂಗಳೂರಿನ ಹೈಗ್ರೌಂಡ್ ಪೊಲೀಸರಿಗೆ ಕಾಂಗ್ರೆಸ್ ಹಿರಿಯವನಾಯಕ ಉತ್ತಪ್ಪ ನೇತೃತ್ವದ ನಿಯೋಗ ಸೋಮವಾರ ದೂರು ನೀಡಿದೆ.

ಸೆಪ್ಟೆಂಬರ್ 29ರಂದು ದಾವಣಗೆರೆಯಲ್ಲಿ ಯತ್ನಾಳ್‌ ಅವರು ಈ ಹೇಳಿಕೆ ನೀಡಿದ್ದರು. ಅವರ ವಿರುದ್ದ ಎಫ್‌ಐಆರ್ ದಾಖಲಿಸಬೇಕು ಹಾಗೂ 1,000 ಕೋಟಿ ಹಣದ ಮೂಲ ಯಾವುದು ಎಂಬ ಬಗ್ಗೆ ತನಿಖೆ ನಡೆಸಬೇಕು ಎಂದು ಕಾಂಗ್ರೆಸ್ ನಾಯಕರು ಒತ್ತಾಯಿಸಿದ್ದಾರೆ.

Related posts