ಶಿಮ್ಲಾ: ಹಿಮಾಚಲ ಪ್ರದೇಶದಲ್ಲಿ ಮಳೆ, ಪ್ರವಾಹಕ್ಕೆ 60 ಕ್ಕೂ ಹೆಚ್ಚು ಮಂದಿಯನ್ನು ಬಲಿತೆಗೆದುಕೊಂಡಿದೆ. ಬಳಿ ಭಾರೀ ಮಳೆಯು ಹಿಮಾಚಲ ಪ್ರದೇಶವನ್ನು ಬಿಕ್ಕಟ್ಟಿನ ಸ್ಥಿತಿಗೆ ದೂಡಿದೆ, ಮೇಘಸ್ಫೋಟ, ಭೂಕುಸಿತಗಳು ಮತ್ತು ರಸ್ತೆ ಅವಘಡಗಳು 60 ಕ್ಕೂ ಹೆಚ್ಚು ಜೀವಗಳನ್ನು ಬಲಿಪಡೆದಿವೆ
ಸಈನಿ ಭೂ ಕುಸಿತ ಪ್ರಕರಣಗಳಲ್ಲಿ ಹಲವಾರು ಸಮಾಧಿಯಾಗಿದ್ದು ಅನೇಕ ವಾಹನಗಳೂ ಅವಶೇಷಗಳ ಅಡಿಯಲ್ಲಿ ಸಿಲುಕಿವೆ. ಅವುಗಳನ್ನು ಹೊರತೆಗೆಯಲು ಅವಿರತ ಪ್ರಯತ್ನಗಳು ನಡೆದಿವೆ.
ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡ್ ಎರಡರಲ್ಲೂ ಮಳೆ ಅವಾಂತರ ಮುಂದುವರೆದಿದೆ. ಮುಂದಿನ ಎರಡು ದಿನಗಳ ಕಾಲ ಹಿಮಾಚಲ ಪ್ರದೇಶದಲ್ಲಿ ಪ್ರತ್ಯೇಕವಾದ ಇನ್ನೂ ಗಣನೀಯ ಮಳೆಯಾಗುವ ನಿರೀಕ್ಷೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಎಚ್ಚರಿಕೆ ನೀಡಿದೆ.