ಹೃದಯಾಘಾತ: ಜಿಮ್‌ನಲ್ಲಿ ವ್ಯಾಯಾಮ ಮಾಡುತ್ತಿದ್ದಾಗಲೇ ಕುಸಿದುಬಿದ್ದು ಯುವಕ ಸಾವು

ಫರಿದಾಬಾದ್: ವ್ಯಾಯಾಮದ ವೇಳೆ ಹೃದಯಾಘಾತವಾಗಿ 35 ವರ್ಷದ ವ್ಯಕ್ತಿ ಸಾವನ್ನಪ್ಪಿದ ಘಟನೆ ಹರಿಯಾಣದ ಫರಿದಾಬಾದ್‌ನಲ್ಲಿ ನಡೆದಿದೆ. ಈ ಘಟನೆಯ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಮೃತ ವ್ಯಕ್ತಿಯನ್ನು ಫರಿದಾಬಾದ್‌ನ ಸೆಕ್ಟರ್-3 ರ ರಾಜಾ ನಹರ್ ಸಿಂಗ್ ಕಾಲೋನಿಯ ನಿವಾಸಿ ಪಂಕಜ್ ಎಂದು ಗುರುತಿಸಲಾಗಿದೆ. ಅವರು ಕಳೆದ ಐದು ತಿಂಗಳಿಂದ ತಮ್ಮ ಸ್ನೇಹಿತ ರೋಹಿತ್ ಜೊತೆಗೆ ಸೆಕ್ಟರ್-9 ರ ಶ್ರೋಟಾ ವೆಲ್‌ನೆಸ್ ಜಿಮ್‌ಗೆ ನಿಯಮಿತವಾಗಿ ಹೋಗುತ್ತಿದ್ದವರು.

ಮಂಗಳವಾರ ಬೆಳಿಗ್ಗೆ ಸುಮಾರು 10:30ಕ್ಕೆ ಪಂಕಜ್ ಹಾಗೂ ರೋಹಿತ್ ಜಿಮ್‌ಗೆ ಹಾಜರಾಗಿದ್ದು, ವ್ಯಾಯಾಮ ಆರಂಭಕ್ಕೂ ಮುನ್ನ ಪಂಕಜ್ ಕಪ್ಪು ಕಾಫಿ ಸೇವಿಸಿದ್ದರು ಎಂದು ರೋಹಿತ್ ತಿಳಿಸಿದ್ದಾರೆ. ಕೇವಲ ಎರಡು ನಿಮಿಷಗಳ ವ್ಯಾಯಾಮದ ನಂತರ ಅವರು ಕುಸಿದುಬಿದ್ದರು.ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅಷ್ಟರಲ್ಲೇ ಅವರು ಕೊನೆಯುಸಿರೆಳೆದಿದ್ದಾರೆ.

Related posts