ಬಹುತೇಕ ರಾಜ್ಯಗಳಲ್ಲಿ ಈ ಬಾರಿ ಪಟಾಕಿ ರಹಿತ ದೀಪಾವಳಿಗೆ ಆದ್ಯತೆ ನೀಡಲಾಗಿದೆ. ಕರ್ನಾಟಕ ಸರ್ಕಾರ ಪಟಾಕಿ ನಿಷೇಧ ಜಾರಿ ಮಾಡಿದ್ದು ಹಸಿರು ಪಟಾಕಿಗೆ ಮಾತ್ರ ಅವಕಾಶ ನೀಡಿದೆ. ರಾಜ್ಯ ಸರ್ಕಾರ ಪಟಾಕಿ ನಿಷೇಧ ಜಾರಿ ಮಾಡಿರುವ ಹಿನ್ನೆಲೆಯಲ್ಲಿ ಪಟಾಕಿ ಮಾರಾಟ ಬಗ್ಗೆ ಪೊಲೀಸರು ತೀವ್ರ ನಿಗಾ ವಹಿಸಿದ್ದಾರೆ. ರಾಜಸ್ಥಾನದಲ್ಲಿ ಭಾರೀ ಫೈನ್ ರಾಜಸ್ಥಾನದಲ್ಲೂ ಪಟಾಕಿ ಸಿಡಿಸುವುದಕ್ಕೆ ನಿರ್ಬಂಧ ಹೇರಲಾಗಿದೆ. ಜನರು ಪಟಾಕಿ ಬಳಸದೆ ದೀಪಾವಳಿ ಆಚರಿಸುವಂತೆ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮನವಿ ಮಾಡಿಕೊಂಡಿದ್ದಾರೆ. ಅಷ್ಟೇ ಅಲ್ಲ, ರಾಜ್ಯದಲ್ಲಿ ಪಟಾಕಿ ಮಾರಾಟ ಮತ್ತು ಬಳಕೆ ನಿಷೇಧವನ್ನು ಉಲ್ಲಂಘಿಸುವವರ ವಿರುದ್ಧ ಕಡ್ಡಾಯವಾಗಿ ದಂಡ ವಿಧಿಸಲು ಅವರು ಪೊಲೀಸರಿಗೆ ಸೂಚಿಸಿದ್ದಾರೆ. ಯಾವುದೇ ಅಂಗಡಿ ಮಾಲೀಕರು ಪಟಾಕಿ ಮಾರಾಟ ಮಾಡುವುದು ಕಂಡುಬಂದಲ್ಲಿ 10 ಸಾವಿರ, ಯಾರಾದರೂ ಪಟಾಕಿ ಬಳಸುವುದು ಕಂಡುಬಂದಲ್ಲಿ 2 ಸಾವಿರ ದಂಡವನ್ನು ವಿಧಿಸಲು ಸರ್ಕಾರ ಸೂಚನೆ ನೀಡಿದೆ.
Year: 2020
ಬೈಕ್ ಶೋರೂಮ್’ಗೆ ಬೆಂಕಿ; ವಾಹನಗಳು ಭಸ್ಮ
ತುಮಕೂರು: ಕೆಲ ದಿನಗಳ ಹಿಂದೆ ಬೆಂಗಳೂರಿನಲ್ಲಿ ಕೆಮಿಕಲ್ ಸಂಗ್ರಹಣಾ ಕೇಂದ್ರದಲ್ಲಿ ಸಂಭವಿಸಿದ ಅಗ್ನಿ ಆಕಸ್ಮಿಕ ಘಟನೆಯ ನಂತರ ತುಮಕೂರಿನಲ್ಲೂ ಅಂತಹುದೇ ಭೀಕರ ಅನಾಹುತ ನಡೆದಿದೆ. ತುಮಕೂರಿನ ಬಿಹೆಚ್ ರಸ್ತೆಯಲ್ಲಿನ ಹೋಂಡಾ ಶೋರೂಮ್’ನಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಲಕ್ಷಾಂತರ ಮೌಲ್ಯದ ಬೈಕ್’ಗಳು ಸುಟ್ಟು ಹೋಗಿವೆ. ಮಾಹಿತಿ ಆಧರಿಸಿ ಸ್ಥಳಕ್ಕಾಕ್ಕೆ ಧಾವಿಸಿದ ಅಗ್ನಿಶಾಮಕ ದಶದ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಶಾರ್ಟ್ ಸರ್ಕ್ಯೂಟ್’ನಿಂದ ಅಗ್ನಿ ಅವಘಢ ಸಂಭವಿಸಿರಬಹುದೆಂದು ಶಂಕಿಸಲಾಗಿದೆ.
ಕೊರೋನಾ ವೈರಸ್’ಗೆ ಈವರೆಗೆ 13 ಲಕ್ಷ ಮಂದಿ ಬಲಿ
ವಾಷಿಂಗ್ಟನ್: ಅಗೋಚರ ವೈರಾಣು ಕೊರೋನಾ ಜಗತ್ತಿನಾದ್ಯಂತ ಈಗಿನ್ನೂ ತಲ್ಲಣ ಸೃಷ್ಟಿಸುತ್ತಲೇ ಇದೆ. ಹೆಮ್ಮಾರಿ ಕೊರೋನಾ ವೈರಸ್ ವಿಶ್ವದಾದ್ಯಂತ 1,309,713 ಮಂದಿಯನ್ನು ಬಲಿತೆಗೆದುಕೊಂಡಿದೆ ಎಂಬ ಅಂಕಿಅಂಶ ಬಯಲಾಗಿದೆ. ವೈರಾಣು ಸೋಂಕಿಗೆ ಬಲಿಯಾದವರ ಬಗ್ಗೆ ಮಾಹಿತಿ ಸಂಗ್ರಹಿಸಿರುವ ಪ್ರತಿಷ್ಠಿತ ಜಾನ್ಸ್ ಹಾಪ್‌ಕಿನ್ಸ್ ವಿಶ್ವವಿದ್ಯಾಲಯ ಈ ಬಗ್ಗೆ ಅಂಕಿ ಸಂಖ್ಯೆಗಳನ್ನು ಬಹಿರಂಗಪಡಿಸಿದೆ. ಈ ನಡುವೆ ನವೆಂಬರ್ 14ರಂದು ಒಂದೇ ದಿನ ವಿವಿಧ ದೇಶಗಳಲ್ಲಿ ಸುಮಾರು 657,312 ಮನದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ಈ ಮೂಲಕ ಜಗತ್ತಿನಾದ್ಯಂತ ಕೊರೋನಾ ಸೋಂಕಿತರ ಸಂಖ್ಯೆ 54,318,841ಕ್ಕೆ ಏರಿಕೆಯಾಗಿದೆ.
ಬಿಜೆಪಿ ಸರ್ಕಾರದಲ್ಲಿ ಅಚ್ಚರಿಯ ಬೆಳವಣಿಗೆ; ಸಂಪುಟ ದರ್ಜೆ ಹುದ್ದೆಯಿಂದ ಸಿಎಂ ಆಪ್ತ ನಿರ್ಗಮನ
ಬೆಂಗಳೂರು: ಉಪಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸುತ್ತಿದ್ದಂತೆಯೇ ಬಿಜೆಪಿ ಪಾಲಯದಲ್ಲೂ ಬೆಳವಣಿಗೆಗಳು ಗರಿಗೆದರಿವೆ. ಕೆಲ ದಿನಗಳ ಹಿಂದಷ್ಟೇ ಸಿ.ಟಿ.ರವಿ ಅವರು ಸಂಪುಟದಿಂದ ನಿರ್ಗಮಿಸಿದ ಬೆನ್ನಲ್ಲೇ ಯಡಿಯೂರಪ್ಪ ಅವರ ಆಪ್ತ ಎಂ.ಬಿ.ಮರಂಕಲ್ ಅವರೂ ಸಂಪುಟ ದರ್ಜೆಯ ಹುದ್ದೆಯಿಂದ ದೂರವಾಗಿದ್ದಾರೆ. ಅಚ್ಚರಿಯ ನಿರ್ಧಾರವೊಂದರಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ರಾಜಕೀಯ ಸಲಹೆಗಾರ ಎಂ.ಬಿ.ಮರಂಕಲ್ ಅವರನ್ನು ಕರ್ತವ್ಯದಿಂದ ಮುಕ್ತಗೊಳಿಸಲಾಗಿದೆ. ರಾಷ್ಟ್ರೀಯ ಪತ್ರಿಕೆಗಳಲ್ಲಿ ಪತ್ರಕರ್ತರಾಗಿ ಸೇವೆ ಸಲ್ಲಿಸಿರುವ ಎಂ.ಬಿ.ಮರಂಕಲ್ ಇತ್ತೀಚಿನ ವರ್ಷಗಳಲ್ಲಿ ಯಡಿಯೂರಪ್ಪ ಜೊತೆ ಗುರುತಿಸಿಕೊಂಡಿದ್ದರು. ಆಪರೇಷನ್ ಕಮಲ ವಿಚಾರದಲ್ಲೂ ಅವರ ಹೆಸರು ಥಳುಕುಹಾಕಿಕೊಂಡಿತ್ತು. ಯಡಿಯೂರಪ್ಪ ಅವರು ಈ ಆಪ್ತನಿಗೆ ರಾಜ್ಯ ಸರ್ಕಾರದ ಸಂಪುಟ ದರ್ಜೆ ಸ್ಥಾನಮಾನದ ಹುದ್ದೆನೀಡಿ ತಮ್ಮ ರಾಜಕೀಯ ಸಲಹೆಗಾರರನ್ನಾಗಿ ನೇಮಕ ಮಾಡಿದ್ದರು. ಆದರೆ ಇದೀಗ ಅವರ ನೇಮಕವನ್ನು ರದ್ದುಪಡಿಸಿರುವ ಬೆಳವಣಿಗೆ ಅಚ್ಚರಿ ಹಾಗೂ ಕುತೂಹಲಕ್ಕೆ ಕಾರಣವಾಗಿದೆ.
‘ರೈತರೊಂದಿಗೊಂದು ದಿನ’ ನಿರಂತರ; ಕೃಷಿ ಸಚಿವ ಬಿ.ಸಿ.ಪಾಟೀಲ್
ಮಂಡ್ಯ: ರೈತರ ಮನೆ ಬಾಗಿಲಿಗೆ ಸರ್ಕಾರ ತರುವ ಉದ್ದೇಶದಿಂದ ‘ರೈತರೊಂದಿಗೊಂದು ದಿನ’ ಆಯೋಜಿಸಿದೆ. ಈ ಕಾರ್ಯಕ್ರಮ ನಿರಂತರವಾಗಿ ನಡೆಯಲಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ತಿಳಿಸಿದ್ದಾರೆ. ಮಾನ್ಯ ಜಿಲ್ಲೆ ಕೆ.ಆರ್.ಪೇಟೆ ಮಡುವಿನಕೋಡಿ ಗ್ರಾಮದಲ್ಲಿ ರೈತರೊಂದಿಗೆ ವಿಡಿಯೋ ಸಂವಾದ ನಡೆಸಿದ ಸಚಿವ ಬಿ.ಸಿ.ಪಾಟೀಲ್ ರೈತರಿಗೆ ಅನುಕೂಲ ಪರಿಸ್ಥಿತಿ ನಿರ್ಮಿಸವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ವಿಸ್ತರಿಸಲಾಗುವುದೆಂದು ತಿಳಿಸಿದರು. ವೈಜ್ಞಾನಿಕ ಬೆಲೆ ಕೊಡುವುದಲ್ಲ; ರೈತನೇ ವೈಜ್ಞಾನಿಕ ಬೆಲೆಯನ್ನು ಸೃಷ್ಟಿಸಿಕೊಳ್ಳುವಂತಾಗಬೇಕು ಎಂದು ಅನ್ನದಾತರಿಗೆ ಆತ್ಮಸ್ಥೈರ್ಯ ತುಂಬಿದ ಅವರು, ಎಫ್‌ಪಿಓಗಳ ಮೂಲಕ ಕೃಷಿ ಆಹಾರ ಉತ್ಪಾದನೆ ಸಂಸ್ಕರಣೆ ಉತ್ಪನ್ನಗಳನ್ನು ಖರೀದಿಸಲಾಗುತ್ತಿದೆ.ಸಮಗ್ರ ಕೃಷಿ ನೀತಿ ಅಳವಡಕೆ ರೈತರಿಗೆ ಸ್ವಾವಲಂಬಿ ಬದುಕು ನೀಡಬಹುದು ಎಂದರು.
ದೀಪಾವಳಿಗೆ ಶೀತಲ್ ‘ವಿಂಡೋ ಸೀಟ್’ ಟೀಸರ್ ರಂಜನೆ
ದೀಪಾವಳಿ ಸಂದರ್ಭದಲ್ಲಿ ಸಿನಿ ರಸಿಕರಿಗೂ ಸಂಭ್ರಮ ಉಣಬಡಿಸಲು ಸಿದ್ಧರಾಗಿದ್ದಾರೆ ಸಿನಿಮಾ ದಿಗ್ಗಜರು. ಇದೇ ಸಂದರ್ಭದಲ್ಲಿ ರಂಜನೆಯ ಸನ್ನಿವೇಶ ಸೃಷ್ಟಿಸಿದ್ದಾರೆ ಆ್ಯಂಕರ್ ಶೀತಲ್ ಶೆಟ್ಟಿ. ಶೀತಲ್ ಶೆಟ್ಟಿ ನಿರ್ದೇಶಿಸಿರುವ ‘ವಿಂಡೋ ಸೀಟ್’ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸಕತ್ ಮೆಚ್ಚುಗೆ ಗಳಿಸಿಕೊಳ್ಳುತ್ತಿದೆ. ಈ ಚಿತ್ರದಲ್ಲಿ ನಿರೂಪ್ ಬಂಡಾರಿಗೆ ಜೋಡಿಯಾಗಿ ಅಮೃತ ಅಭಿನಯಿಸಿದ್ದಾರೆ.
ಮತ್ತೆ ಪಾಕ್ ಕಿರಿಕ್; ಭಾರತೀಯ ಯೋಧರ ಪ್ರಬಲ ಪ್ರತ್ಯುತ್ತರ
ಶ್ರೀನಗರ: ಜಮ್ಮು ಮತ್ತು ಕಾಶ್ಮೀರ ಗಡಿ ನಿಯಂತ್ರಣ ರೇಖೆ ಬಳಿ ಪಾಕಿಸ್ತಾನ ಪಡೆ ಭಾರತದ ತಾಳ್ಮೆ ಪರೀಕ್ಷೆ ಮಾಡಲು ಮುಂದಾಗಿ ಮತ್ತೊಮ್ಮೆ ನಗೆಪಾಟಲಿಗೀಡಾಗಿದೆ. ಗಡಿ ಭಾಗದಲ್ಲಿ ಭಾತದತ್ತ ಗುಂಡಿನ ದಾಳಿಗೆ ಮುಂದಾದ ಪಾಕ್ ಸೇನೆಗೆ ಭಾರತೀಯ ಯೋಧರು ಇಂದು ತಕ್ಕ ಪ್ರತ್ಯುತ್ತರ ನೀಡಿದ್ದಾರೆ. ಪಾಕಿಸ್ತಾನದ ದಾಳಿಗೆ ಪ್ರತಿಯಾಗಿ ಭಾರತೀಯ ಸೇನೆ ಶಸ್ತ್ರಗಳಿಂದಲೇ ಪ್ರತಿಕ್ರಿಸಿದ್ದು, ಪಾಕ್ ಬಂಕರ್ ಗಳ ಮೇಲೆ ಸಾಲು ಸಾಲು ದಾಳಿ ನಡೆಸಿದೆ. ಭಾರತದ ಯೋಧರ ಪ್ರಬಲ ದಾಳಿಗೆ ನಲುಗಿದ ಪಾಕ್ ಪಡೆ ಲಾಂಚ್ ಪ್ಯಾಂಡ್ ಬಿಟ್ಟು ಓಡಿಹೋಗುವಂತಾಯಿತು. ಈ ಕಾದಾಟದಲ್ಲಿ ಐವರು ಭಾರತೀಯ ಯೋಧರು ಹುತಾತ್ಮರಾಗಿದ್ದಾರೆ. ಪಾಕಿಸ್ತಾನ ಪಡೆಯ 8 ಮಂದಿ ಯೋಧರು ಸಾವನ್ನಪ್ಪಿದ್ದಾರೆಂದು ಹೇಳಲಾಗುತ್ತಿದೆ.
ಈ ಬಾರಿಯ ದೀಪಾವಳಿ ಹೊಸ ಮನ್ವಂತರಕ್ಕೆ ಮುನ್ನುಡಿ
ಎಲ್ಲೆಲ್ಲೂ ಬೆಳಕಿನ ಹಬ್ಬ ದೀಪಾವಳಿಯ ಸಂಭ್ರಮ ಮನೆಮಾಡಿದೆ. ಕೊರೋನಾ ಕರಾಳತೆಯ ಸನ್ನಿವೇಶದಲ್ಲಿ ನಾಡು ಸಿಲುಕಿದ್ದರೂ ಈ ಬಾರಿಯ ದೀಪಾವಳಿಯ ಸಡಗರಕ್ಕೇನೂ ಅಡ್ಡಿಯಾಗಿಲ್ಲ. ಪಟಾಕಿ ಇಲ್ಲದೇ ದೀಪಗಳ ಬೆಳಕಿಗಷ್ಟೇ ಸೀಮಿತಗೊಳಿಸಲು ಪ್ರಜ್ಞಾವಂತ ಜನತೆ ನಿರ್ಧರಿಸುವ ಮೂಲಕ ಈ ದೀಪಾವಳಿ ಸಂದರ್ಭದಲ್ಲಿ ಹೊಸ ಮನ್ವಂತರಕ್ಕೂ ಮುನ್ನುಡಿ ಬರೆಯಲಾಗಿದೆ. ಈ ಬಾರಿಯ ದೀಪಾವಳಿ ಪ್ರಧಾನಿ ನರೇಂದ್ರ ಮೋದಿ ಪಾಲಿಗೂ ವಿಶೇಷ. ದೇಶ ಕಾಯುವ ಯೋಧರೊಂದಿಗೆ ಬೆಳಕಿನ ಹಬ್ಬ ಆಚರಿಸಿ ಸಿಹಿ ಸನ್ನಿವೇಶದಲ್ಲಿ ಅವರು ಪಾಲ್ಗೊಂಡು ಜಾಗತಿಕ ಗಮನಸೆಳೆದರು. ಇದೇ ವೇಳೆ ಟ್ವೀಟ್ ಮಾಡಿ ದೇಶದ ಜನತೆಗೆ ದೀಪಾವಳಿಯ ಶುಭಾಶಯ ಕೋರಿರುವ ಪ್ರಧಾನಿ ನರೇಂದ್ರ ಮೋದಿ, ಈ ಬಾರಿ ದೀಪಾವಳಿ ಸಂದರ್ಭದಲ್ಲಿ ದೇಶದ ಗಡಿ ಕಾಯುತ್ತಿರುವ ನಮ್ಮ ವೀರ ಯೋಧರಿಗೆ ಸೆಲ್ಯೂಟ್ ಹೊಡೆಯಲು ದೀಪಗಳನ್ನು ಬೆಳಗಿಸಿ ಎಂದು ಕರೆ ಕೊಟ್ಟಿದ್ದಾರೆ. This Diwali, let us also light a Diya as…
ಗೆಲುವಿನ ಅಭಿಯಾನ ಮುಂದುವರಿಸಲು ಬಿಜೆಪಿ ಕಾರ್ಯತಂತ್ರ; ರಾಜ್ಯಗಳ ಉಸ್ತುವಾರಿಗೆ ಯುವ ತಂಡ
ದೆಹಲಿ: ಇತ್ತೀಚಿನ ಚುನಾವಣೆಗಳಲ್ಲಿ ಜಯಭೇರಿ ಭಾರಿಸಿರುವ ಬಿಜೆಪಿಯಲ್ಲಿ ಸಂಚಲನ ಉಂಟಾಗಿದೆ. ಗೆಲುವಿನ ಅಭಿಯಾನವನ್ನು ಮುಂದುವರಿಸಲು ಕಾರ್ಯತಂತ್ರ ರೂಪಿಸಿರುವ ಪಕ್ಷದ ಹೈಕಮಾಂಡ್ ವಿವಿಧ ರಾಜ್ಯಗಳಿಗೆ ಉಸ್ತುವಾರಿಯ ಹೊಸ ತಂಡವನ್ನು ಘೋಷಿಸಿದೆ. ಕರ್ನಾಟಕ ರಾಜ್ಯದ ಉಸ್ತುವಾರಿಯಾಗಿ ಅರುಣ್ ಸಿಂಗ್ ಅವರನ್ನು ನೇಮಕ ಮಾಡಲಾಗಿದೆ. ಅವರ ಜೊತೆ ಡಿಕೆ ಅರುಣಾ ಅವರನ್ನು ನೇಮಿಸಲಾಗಿದೆ. ರಾಜ್ಯದ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಸಿ.ಟಿ. ರವಿ ಅವರಿಗೆ ತಮಿಳುನಾಡು, ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಗಳ ಉಸ್ತುವಾರಿ ವಹಿಸಲಾಗಿದೆ. ಪಿ.ಮುರುಳೀಧರ ರಾವ್ ಅವರಿಗೆ ಮಧ್ಯಪ್ರದೇಶದ ಹೊಣೆ ವಹಿಸಲಾಗಿದೆ. ನಿರ್ಮಲಕುಮಾರ್ ಸುರಾನಾ ಅವರನ್ನು ನೆರೆಯ ಪುದುಚೇರಿ ಉಸ್ತುವಾರಿಯನ್ನಾಗಿ ನೇಮಕ ಮಾಡಲಾಗದೆ.
ಕೃಷಿ ಬೆಲೆ ಆಯೋಗದಿಂದ ಕೃಷಿ ಮತ್ತು ತೋಟಗಾರಿಕಾ ಬೆಲೆ ಕುರಿತು ಸಿಎಂಗೆ ಶಿಫಾರಸು
ಬೆಂಗಳೂರು: ಕರ್ನಾಟಕ ಕೃಷಿ ಬೆಲೆ ಆಯೋಗದ ಅಧ್ಯಕ್ಷ ಹನುಮಗೌಡ ಬೆಳಗುರ್ಕಿ ಅವರು ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರನ್ನು ಭೇಟಿಯಾಗಿ 2019-20 ಹಾಗೂ 2020-21 ನೆ ಸಾಲಿನ ಕೃಷಿ ಮತ್ತು ತೋಟಗಾರಿಕಾ ಬೆಲೆಗಳ ಕುರಿತು ಆಯೋಗದ ಶಿಫಾರಸುಗಳನ್ನು ಸಲ್ಲಿಸಿದರು. ಕೃಷಿ ಸಚಿವ ಬಿ. ಸಿ. ಪಾಟೀಲ್, ಪೌರಾಡಳಿತ, ತೋಟಗಾರಿಕೆ ಮತ್ತು ರೇಷ್ಮೆ ಸಚಿವ ನಾರಾಯಣ ಗೌಡ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
