ದೆಹಲಿ: ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಕಾಂಗ್ರೆಸ್ ಇತಿಹಾಸ ಕುರಿತ ವೆಬ್ ಸೀರೀಸ್ ಅನಾವರಣಗೊಂಡಿದೆ. ಈ ವೆಬ್ ಸೀರೀಸ ನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ವೆಬ್ ಸೀರೀಸ್’ನ ಮೊದಲ ಸಂಚಿಕೆಗೆ ‘ಧರೋಹರ್’ ಎಂದು ಹೆಸರಿಸಲಾಗಿದೆ. ದೇಶಕ್ಕೆ ಕಾಂಗ್ರೆಸ್ ತಂದುಕೊಡುವಲ್ಲಿ ತಮ್ಮ ಪಕ್ಷ ಪ್ರಮುಖ ಪಾತ್ರ ವಹಿಸಿದೆ ಎಂದು ಹೇಳಿಕೊಂಡು ಬರುತ್ತಿರುವ ಕಾಂಗ್ರೆಸ್, ಇದೀಗ ಈ ವೆಬ್ ಸೀರೀಸ್ ಮೂಲಕ ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಕಾಂಗ್ರೆಸ್ ನ ಪಯಣ ಹಾಗೂ ಪಾತ್ರವನ್ನು ತಿಳಿಸಲು ಪ್ರಾಯಂಟಿಸಿದೆ. https://twitter.com/RahulGandhi/status/1294567141270671360?ref_src=twsrc%5Etfw
Year: 2020
ಭಾರತದಲ್ಲಿ ಕೊರೋನಾ ಸೋಂಕಿಗೆ ಒಟ್ಟು 49,980 ಮಂದಿ ಬಲಿ
ದೆಹಲಿ: ಅನೇಕ ತಿಂಗಳುಗಳು ಕಳೆದರೂ, ಜಾಗೃತಿ ಕಹಳೆ ಮೊಳಗುತ್ತಿದ್ದರೂ ಕೊರೋನಾ ಸೋಂಕಿನಿಂದ ಉಡೂರ ಉಳಿಯುವಲ್ಲಿ ದೇಶ ಸಫಲವಾಗುತ್ತಿಲ್ಲ. ದೇಶದಲ್ಲಿ ಕೊರೋನಾ ಆರ್ಭಟ ಮುಂದುವರೆದಿದ್ದು, ಶನಿವಾರ ಬೆಳಿಗ್ಗೆಯಿಂದ ಭಾನುವಾರ ಬೆಳಿಗ್ಗೆ ವರೆಗೆ 24 ತಾಸುಗಳಲ್ಲಿ 63,489 ಮಂದಿಯಲ್ಲಿ ವೈರಸ್ ಪತ್ತೆಯಾಗಿದೆ. ದಿನೇದಿನೇ ಸೋಂಕಿನ ಪ್ರಮಾಣ ಏರುತ್ತಲೇ ಇದ್ದು ಭಾರತದಲ್ಲಿ ಕೋವಿಡ್ 19 ಸೋಂಕಿತರ ಸಂಖ್ಯೆ 25,89,682ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ಬಹಿರಂಗಪಡಿಸಿದೆ, ಶನಿವಾರ ಬೆಳಿಗ್ಗೆಯಿಂದ ಭಾನುವಾರ ಬೆಳಿಗ್ಗೆ ವರೆಗೆ ಒಂದೇ ದಿನ 944 ಮಂದಿ ಬಲಿಯಾಗಿದ್ದಾರೆ. ಈ ಮೂಲಕ ಕೊರೋನಾ ಸೋಂಕಿನಿಂದಾಗಿ ವಿವಿಧ ರಾಜ್ಯಗಳಲ್ಲಿ ಸಾವನ್ನಪ್ಪಿದವರ ಸಂಖ್ಯೆ ಕೂಡ 49,980ಕ್ಕೆ ತಲುಪಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ಮಾಡಿದೆ.
ದೆಹಲಿ ಕೆಂಪುಕೋಟೆ; ಸ್ವಾತಂತ್ರ್ಯ ದಿನಾಚರಣೆ.. ಫೋಟೋಗಳು
ದೆಹಲಿ ಕೆಂಪುಕೋಟೆ; ಸ್ವಾತಂತ್ರ್ಯ ದಿನಾಚರಣೆ.. ಫೋಟೋಗಳು
ಭಾರತ-ಚೀನಾ ಗಡಿ ಭಾಗ ಲಡಾಖ್’ನ ಪ೦ಗ್ಯಾ೦ಗ್ ಟಿಸೋದಲ್ಲಿ ಭಾರತೀಯ ಯೋಧರಿಂದ ಸ್ವಾತಂತ್ರ್ಯ ದಿನಾಚರಣೆ ಫೋಟೋಗಳು
ಭಾರತ-ಚೀನಾ ಗಡಿ ಭಾಗ ಲಡಾಖ್’ನ ಪ೦ಗ್ಯಾ೦ಗ್ ಟಿಸೋದಲ್ಲಿ ಭಾರತೀಯ ಯೋಧರಿಂದ ಸ್ವಾತಂತ್ರ್ಯ ದಿನಾಚರಣೆ ಫೋಟೋಗಳು
ಸಂಜಯ್ ದತ್ ಅಭಿನಯದ ‘ಸಡಕ್ 2’ ಟ್ರೇಲರ್’ಗೆ ಸಕತ್ ಲೈಕ್
ದಾಸವಾಳ ಹೂವಿನ ಚಹಾ; ಆರೋಗ್ಯಪೂರ್ಣ ಟೀ
ದಾಸವಾಳ ಹೂವಿನಿಂದಲೂ ಚಹಾ ತಯಾರಿಸಬಹುದು. ಇದು ಆರೋಗ್ಯಪೂರ್ಣ ಟೀ ಎನ್ನುತ್ತಾರೆ ಪರಿಣಿತರು. ಬೇಕಾಗುವ ಸಾಮಾಗ್ರಿ ದಾಸವಾಳ ಹೂ 8 ನೀರು 7 ಕಪ್ ಸಕ್ಕರೆ 5 ಚಮಚ ನಿಂಬೆ ರಸ 3 ಚಮಚ ಮಾಡುವ ವಿಧಾನ ದಾಸವಾಳ ಹೂ ಎಸಳನ್ನು ತೆಗದು ಚೆನ್ನಾಗಿ ಸ್ವಚ್ಛ ಮಾಡಿ, ತೊಳೆದು ಇಡಬೇಕು. ಒಂದು ಪಾತ್ರೆಯಲ್ಲಿ ನೀರನ್ನು ಕುದಿಸಬೇಕು. ಕುದಿಸಿದ ನೀರನ್ನು ದಾಸವಾಳಕ್ಕೆ ಹಾಕಿ.
‘ಪತ್ರೊಡೆ ಒಗ್ಗರಣೆ’ಯ ರುಚಿಯನ್ನು ನೀವೂ ಒಮ್ಮೆ ಸವಿಯಿರಿ.
ಶಾಲಾ ಕಾಲೇಜು ಆರಂಭ ಸಧ್ಯಕ್ಕಿಲ್ಲ; ಕೇಂದ್ರ ಸರ್ಕಾರದ ನಡೆ ಏನು ಗೊತ್ತಾ?
ದೆಹಲಿ: ಮಾರಣಾಂತಿಕ ಕೊರೋನಾ ಸೋಂಕು ಇಡೀ ದೇಶವನ್ನು ಆವರಿಸಿರುವ ಹಿನ್ನೆಲೆಯಲ್ಲಿ ಶಾಲಾ ಕಾಲೇಜು ಆರಂಭ ಸಧ್ಯಕ್ಕಿಲ್ಲ ಎಂಬ ಸುಳಿವನ್ನು ಕೇಂದ್ರ ಸರ್ಕಾರ ನೀಡಿದೆ. ಕೋವಿಡ್ 19 ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಬಹುತೇಕ ರಾಜ್ಯಗಳು ಶಾಲೆಗಳ ಪುನರಾರಂಭಕ್ಕೆ ಒಲವು ವ್ಯಕ್ತಪಡಿಸಿಲ್ಲ. ಈ ಕಾರಣದಿಂದಾಗಿ ಶಾಲೆಗಳ ಆರಂಭಕ್ಕೆ ಇನ್ನೂ ದಿನಾಂಕ ನಿಗದಿಪಡಿಸಿಲ್ಲ ಎಂದು ಕೇಂದ್ರ ಶಿಕ್ಷಣ ಸಚಿವಾಲಯ ಹೇಳಿದೆ. ಸೆಪ್ಟೆಂಬರ್ ಅಥವಾ ಅಕ್ಟೋಬರ್ ತಿಂಗಳಲ್ಲಿ ಪ್ರೌಢಶಾಲಾ ಶಿಕ್ಷಣದ ನಂತರದ ಶಾಲೆಗಳನ್ನು ಆರಂಭಿಸುವ ಸಾಧ್ಯತೆ ಬಗ್ಗೆ ಚಿಂತನೆ ನಡೆದಿತ್ತಾದರೂ ಸದ್ಯದ ಪರಿಸ್ಥಿತಿ ಹಿನ್ನೆಲೆಯಲ್ಲಿ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಪರಿಸ್ಥಿತಿ ನೋಡಿಕೊಂಡು ಮುಂದೆ ತೀರ್ಮಾನಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ.. ಮನೋರಂಜನೆಯ ಮಜಲಲ್ಲಿ ಮತ್ತೆ ‘ಬಣ್ಣ ಬಣ್ಣದ ಬದುಕು’
ಶ್ವೇತಭವನದಲ್ಲಿ ಗುಂಡಿನ ಸದ್ದು; ಟ್ರಂಪ್ ಸುದ್ದಿಗೋಷ್ಠಿ ವೇಳೆ ಘಟನೆ
ವಾಷಿಂಗ್ಟನ್: ಅಮೆರಿಕಾದ ಶಕ್ತಿ ಕೇಂದ್ರ ಶ್ವೇತಭವನ ಆತಂಕಕಾರಿ ಘಟನೆಗೆ ಸಾಕ್ಷಿಯಾಯಿತು. ಶ್ವೇತಭವನದ ಹೊರಗೆ ಗುಂಡಿನ ಶಬ್ದ ಮಾರ್ಧನಿಸಿದೆ. ಶ್ವೇತಭವನದಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಸುದ್ದಿಗೋಷ್ಠಿ ಏರ್ಪಡಿಸಿದ್ದ ವೇಳೆ ಹೊರಗಡೆ ಶಾಸ್ತ್ರಧಾರಿ ಯುವಕನೊಬ್ಬ ಪ್ರತ್ಯಕ್ಷನಾಗಿ ಆತಂಕ ಸೃಷ್ಟಿಸಿದ್ದ. ರಹಸ್ಯ ಸೇವಾ ಪಡೆ ಸಿಬ್ಬಂದಿ ಆತನನ್ನು ಸೆರೆ ಹಿಡಿಯಲು ಪ್ರಯತ್ನಿಸಿದ್ದಾರೆ. ಆ ವೇಳೆ ರಕ್ಷಣಾ ಸಿಬ್ಬಂದಿ ಗುಂಡಿನ ದಾಳಿ ನಡೆಸಿದ್ದಾರೆ. ಈ ಸುದ್ದಿ ತಿಳಿಯುತ್ತಿದ್ದಂತೆಯೇ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸುದ್ದಿಗೋಷ್ಠಿಯನ್ನು ಅರ್ಧಕ್ಕೇ ನಿಲ್ಲಿಸಿ ಹೊರಗೆ ಹೋಗಿ ವಿಚಾರಿಸಿದ್ದಾರೆ. ಸ್ವಲ್ಪ ಹೊತ್ತಿನ ನಂತರ ಸುದ್ದಿಗೋಷ್ಠಿಯನ್ನು ಮುಂದುವರಿಸಿದ ಅವರು, ಶ್ವೇತಭವನದ ಹೊರಗೆ ಯಾರೋ ಗುಂಡು ಹಾರಿಸಿದರು. ಈ ವೇಳೆ ಭದ್ರತಾ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ ಕೈಗೊಂಡರು ಎಂದು ವಿವರಿಸಿದರು.
ಪ್ರವಾಹ ಪರಿಸ್ಥಿತಿ; 395 ಕೋಟಿ ರೂ ತುರ್ತು ನೆರವಿಗಾಗಿ ಕೇಂದ್ರಕ್ಕೆ ಕರ್ನಾಟಕ ಮೊರೆ
ಬೆಂಗಳೂರು: ದೇಶದ ಹಲವು ರಾಜ್ಯಗಳಲ್ಲಿ ಮುಂಗಾರು ಮಳೆಯಾಗುತ್ತಿದ್ದು ಅನೇಕ ರಾಜ್ಯಗಳು ಪ್ರವಾಹದಿಂದ ತತ್ತರಿಸಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿ ಪರಿಸ್ಥಿತಿ ಬಗ್ಗೆ ಪರಾಮರ್ಶೆ ನಡೆಸಿದರು. ಕರ್ನಾಟಕದ ಪ್ರವಾಹ ಪರಿಸ್ಥಿತಿ ಕುರಿತು ಪ್ರಧಾನಿಯವರ ಗಮನಸೆಳೆದ ರಾಜ್ಯದ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಪ್ರವಾಹ ಪರಿಸ್ಥಿತಿಯನ್ನು ನಿರ್ವಹಿಸಲು ನಾಲ್ಕು ಸಾವಿರ ಕೋಟಿ ರೂಪಾಯಿ ವಿಶೇಷ ಆರ್ಥಿಕ ನೆರವನ್ನು ಒದಗಿಸುವಂತೆ ಪ್ರಧಾನಿಯವರಿಗೆ ಮನವಿ ಮಾಡಿದರು. ತಕ್ಷಣದ ಪರಿಹಾರ ಮತ್ತು ಪುನರ್ವಸತಿ ಕಾರ್ಯಗಳಿಗೆ ಎಸ್.ಡಿ ಆರ್.ಎಫ್ ನ ಕಂತು 395 ಕೋಟಿ ರೂಪಾಯಿಗಳನ್ನು ತುರ್ತಾಗಿ ಬಿಡುಗಡೆ ಮಾಡುವಂತೆ ಮನವಿ ಮಾಡಿದರು. ಕರ್ನಾಟಕ ರಾಜ್ಯದಲ್ಲಿ ಪ್ರವಾಹ ಪರಿಸ್ಥಿತಿ ಯನ್ನು ನಿರ್ವಹಿಸಲು ಈಗಾಗಲೇ ತರಬೇತಿ ಪಡೆದ 200 ಎಸ್.ಡಿ.ಆರ್.ಎಫ್ ಸಿಬ್ಬಂದಿ , ನಾಲ್ಕು ಎನ್.ಡಿ.ಆರ್.ಎಫ್ ತಂಡಗಳು ಹಾಗೂ ನಾಲ್ಕು ರಕ್ಷಣಾ ಹೆಲಿಕಾಪ್ಟರ್ ಗಳನ್ನು ಒದಗಿಸಲಾಗಿದ್ದು, ಹೆಚ್ಚುವರಿಯಾಗಿ…
