ಬೆಂಗಳೂರು: ರಾಜ್ಯದ ಹಲವೆಡೆ ಭಾರೀ ಮಳೆಯಾಗುತ್ತಿದ್ದು ಭಾರೀ ಹಾನಿಯುಂಟಾಗಿದೆ. ಹಲವೆಡೆ ಭೂ ಕುಸಿತ ಸಂಭವಿಸಿದ್ದು ಅನೇಕ ಮನೆಗಳಿಗೂ ಹಾನಿಯಾಗಿವೆ. ಮಳೆಯಾಗುತ್ತಿರುವ ಜಿಲ್ಲೆಗಳಲ್ಲಿ ತುರ್ತು ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಆದೇಶಿಸಿದ್ದಾರೆ. ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ವಹಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವರಿಗೂ ಸಿಎಂ ಸೂಚನೆ ನೀಡಿದ್ದಾರೆ. ಕ್ಷೇತ್ರ ಬಿಟ್ಟು ಹೋಗದೆ, ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಬೇಕು ಎಂದು ಅವರು ಸಲಹೆ ಮಾಡಿದ್ದಾರೆ. ಭಾಗಶಃ ಹಾನಿಯಾಗಿದ್ದಾರೆ ಹಾನಿಗೆ ಅನುಗುಣವಾಗಿ ಪರಿಹಾರ ವಿತರಿಸಬೇಕು ಹಾಗು ಈಗಾಗಲೇ ಜಿಲ್ಲಾ ಕೇಂದ್ರಗಳ ಹಾಸ್ಟೆಲ್, ಶಾಲಾ-ಕಾಲೇಜುಗಳು ಕೋವಿಡ್ ಕೇಂದ್ರಗಳಾಗಿರುವುದರಿಂದ ಹಳ್ಳಿಗಳಲ್ಲಿರುವ ಶಾಲಾ-ಕಾಲೇಜುಗಳನ್ನು ನಿರಾಶ್ರಿತರ ಕೇಂದ್ರಗಳನ್ನಾಗಿಸಿ, ಅಲ್ಲಿ ಎಲ್ಲಾ ಸೌಲಭ್ಯಗಳನ್ನು ನೀಡಬೇಕು ಎಂದು ಮುಖ್ಯಮಂತ್ರಿ ಆದೇಶಿಸಿದ್ದಾರೆ. ರಾಜ್ಯಾದ್ಯಂತ ಮಳೆ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಈ ಹಿಂದಿನ ರೀತಿಯೇ ಪರಿಹಾರ ನೀಡಬೇಕು ಅಂತ ಮುಖ್ಯಮಂತ್ರಿ ಶ್ರೀ @BSYBJP ರವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಮಳೆಯಿಂದ ಹಾನಿಗೊಳಗಾದ ಕುಟುಂಬಗಳಿಗೆ ತಕ್ಷಣ…
Year: 2020
ರಾಜ್ಯದಲ್ಲಿ ಹೆಚ್ಚಿದ ಕೊರೋನಾ ಆತಂಕ; ಸೋಂಕಿತರ ಸಾವಿನ ಸಂಖ್ಯೆ 2,897ಕ್ಕೆ ಏರಿಕೆ
ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಸೋಂಕಿನ ಪ್ರಮಾಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಲಿದ್ದು, ಗುರುವಾರ ದಾಖಲೆ ಎಂಬಂತೆ ಸುಮಾರು 6,805 ಕೊರೋನಾ ಸೋಂಕು ಪತ್ತೆಯಾಗಿದೆ. ಅಷ್ಟೇ ಅಲ್ಲ ಗುರುವಾರ ಸಂಜೆಯ ವರದಿ ಪ್ರಕಾರ ಕರ್ನಾಟಕದಲ್ಲಿ ಒಂದೇ ದಿನ ಕೊರೋನಾಗೆ 93 ಮಂದಿ ಬಲಿಯಾಗಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಒಟ್ಟಾರೆ ಸೋಂಕಿತರ ಸಾವಿನ ಸಂಖ್ಯೆ 2,897ಕ್ಕೆ ಏರಿಕೆಯಾಗಿದೆ. ಆರೋಗ್ಯ ಇಲಾಖೆಯ ಹೆಲ್ತ್ ಬುಲೆಟಿನ್ ಪ್ರಕಾರ ಗುರುವಾರ ಬೆಂಗಳೂರಿನಲ್ಲಿ 2544, ಬಳ್ಳಾರಿಯಲ್ಲಿ 431, ಶಿವಮೊಗ್ಗದಲ್ಲಿ 292, ಬೆಳಗಾವಿಯಲ್ಲಿ 229, ಉಡುಪಿಯಲ್ಲಿ 217, ಧಾರವಾಡದಲ್ಲಿ 212 ಹೊಸ ಪ್ರಕರಣಗಳು ದಾಖಲಾಗಿವೆ. ಈ ನಡುವೆ ರಾಜ್ಯದ ವಿವಿಧೆಡೆ ಸುಮಾರು 671 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದಿನ 06/08/2020 ಸಂಪೂರ್ಣ ಪತ್ರಿಕಾ ಪ್ರಕಟಣೆಗಾಗಿ ಇಲ್ಲಿ ನೀಡಲಾಗಿರುವ ಲಿಂಕ್ ಅನ್ನು ಕ್ಲಿಕ್ ಮಾಡಿ.@CMofKarnataka @BSYBJP @DVSadanandGowda @SureshAngadi_ @sriramulubjp @drashwathcn @BSBommai @mla_sudhakar @iaspankajpandey @Tejasvi_Surya @BBMP_MAYOR…
ಕರಾವಳಿ ಮಲೆನಾಡಲ್ಲಿ ಭಾರೀ ಮಳೆ; ಹಲವೆಡೆ ಪ್ರವಾಹ, ಭೂ ಕುಸಿತ
ಬೆಂಗಳೂರು: ಕರಾವಳಿ ಮಲೆನಾಡಿನಲ್ಲಿ ಭಾರೀ ಮಳೆಯಾಗಿದ್ದು ಜನ ಜೀವನ ಏರುಪೇರಾಗಿದೆ. ಹಲವು ಜಿಲ್ಲೆಗಳಲ್ಲಿ ತಗ್ಗು ಪ್ರದೇಶಗಳು ಜಲಾವೃತವಾಗಿದ್ದು ಅನೇಕ ಮನೆಗಳು ಸೇತುವೆಗಳು ಹಾನಿಗೊಳಗಾಗಿವೆ. ದಕ್ಷಿಣಕನ್ನಡ ಜಿಲ್ಲೆಯಲ್ಲಿ ನಿರಂತರ ವರ್ಷಧಾರೆಯಾಗಿದ್ದು, ನೇತ್ರಾವತಿ ನದಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿಯುತ್ತಿದೆ. ಧರ್ಮಸ್ಥಳದಲ್ಲಿನ ಸ್ನಾನ ಘಟ್ಟ ಮುಳುಗಿದ್ದು ದೇವಾಲಯದ ಭಕ್ತಾದಿಕಗಳಿಗೆ ಸ್ನಾನಕ್ಕೆ ಅವಕಾಶ ಇಲ್ಲ. ಚಾರ್ಮಾಡಿ ಘಾಟ್ ನ ರಸ್ತೆಗಳ ಮೇಲೆ ಬೃಹತ್ ಬಂಡೆಗಳು ಉರುಳಿಬಿದ್ದಿವೆ. ಹಲವು ಮರಗಳು ಧರೆಗುರುಳಿವೆ. ಚಿಕ್ಕಮಗಳೂರಿನಲ್ಲಿ 14 ಮನೆಗಳು ಸಂಪೂರ್ಣವಾಗಿ ಹಾನಿಗೊಳಗಾಗಿವೆ, ನದಿಗಳು ಉಕ್ಕಿ ಹರಿಯುತ್ತಿರುವುದರಿಂದ ರಸ್ತೆಗಳು ಸಂಪೂರ್ಣ ಜಲಾವೃತವಾಗಿವೆ. ಈ ನಡುವೆ ಮಳೆ ಮತ್ತು ಪ್ರವಾಹದಿಂದ ಉಂಟಾದ ಹಾನಿ ಬಗ್ಗೆ ಅಂದಾಜು ಮಾಡಲು ಸಚಿವ ಸಿ.ಟಿ.ರವಿ ಅವರು ಜಿಲ್ಲಾಧಿಕಾರಿಗೆ ನಿರ್ದೇಶನ ನೀಡಿದ್ದಾರೆ.
‘ಪೊಗರು’ ಚಿತ್ರದ ‘ಕರಾಬು’ ಹಾಡು ಸಕತ್ ಸದ್ದು
ಧ್ರುವ ಸರ್ಜಾ ಅಭಿನಯದ ಬಹು ನಿರೀಕ್ಷಿತ ‘ಪೊಗರು’ ಚಿತ್ರ ಬಗ್ಗೆ ಸಿನಿ ರಸಿಕರ ಕುತೂಹಲ ಹೆಚ್ಚಾಗಿದೆ. ‘ಪೊಗರು’ ಚಿತ್ರದ ‘ಕರಾಬು’ ಹಾಡು ಬಿಡುಗಡೆಯಾಗುತ್ತಿದ್ದು ಸಾಮಾಜಿಕ ಜಾಲತಾಣ ಹಾಗೂ ಮ್ಯೂಸಿಕ್ ವಾಹಿನಿಗಳಲ್ಲಿ ಸಕತ್ ಸದ್ದು ಮಾಡುತ್ತಿದೆ. ಇದೀಗ ತೆಲುಗು ಸಾಂಗ್ ಕೂಡಾ ಬಿಡುಗಡೆಯಾಗಿದೆ.
ತಲಕಾವೇರಿ ದುರಂತ; ಅರ್ಚಕರ ಕುಟುಂಬಕ್ಕೆ ಭಾಗಮಂಡಲದ ಕಾಶೀ ಮಠದಲ್ಲಿ ವ್ಯವಸ್ಥೆ
ಕೊಡಗು: ಕಾವೇರಿ ತೀಥ೯ಕ್ಷೇತ್ರ ತಲಕಾವೇರಿಯಲ್ಲಿ ಭೂಕುಸಿತ ಸಂಭವಿಸಿ ಎರಡು ಮನೆಗಳು ಸಂಪೂಣ೯ ಮಣ್ಣುಪಾಲಾಗಿವೆ. ತಲಕಾವೇರಿ ಕ್ಷೇತ್ರದ ಪ್ರಧಾನ ಅಚ೯ಕ ಟಿ.ಎಸ್.ನಾರಾಯಣ ಆಚಾರ್, ಪತ್ನಿ, ಆನಂದತೀಥ೯ ಮತ್ತು ಇಬ್ಬರು ಅಚ೯ಕರು ನಾಪತ್ತೆಯಾಗಿದ್ದಾರೆ. ಈ ನಡುವೆ ದುರ್ಘಟನೆ ಹಿನ್ನೆಲೆಯಲ್ಲಿ, ಅರ್ಚಕರ ಕುಟುಂಬ ಸದಸ್ಯರಿಗೆ ಭಾಗಮಂಡಲದಲ್ಲಿರುವ ಶ್ರೀ ಕಾಶೀ ಮಠದಲ್ಲಿ ಉಳಕೊಳ್ಳುವ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಮಠದ ಮೂಲಗಳು ತಿಳಿಸಿವೆ. ಇದನ್ನೂ ಓದಿ.. ಕಾಶೀ ಮಠದಲ್ಲಿ ಋಗುಪಾಕರ್ಮ; ಸಂಯಮಿಂದ್ರ ತೀರ್ಥರಿಂದ ವಿಶೇಷ ಕೈಂಕರ್ಯ
ಕೊಡಗಿನಲ್ಲಿ ಭಾರೀ ಮಳೆ; ಕಾವೇರಿ ತೀಥ೯ಕ್ಷೇತ್ರ ತಲಕಾವೇರಿ ಬಳಿ ಭೂಕುಸಿತ
ಮಡಿಕೇರಿ: ರಾಜ್ಯದ ವಿವಿಧೆಡೆ ಭಾರೀ ಮಳೆಯಾಗಿದ್ದು ಸರಣಿ ಅನಾಹುತಗಳು ಸಂಭವಿಸಿದೆ. ಕೊಡಗು ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿದ್ದು, ಭೂ ಕುಸಿತ ಘಟನೆ ಮರುಕಳಿಸಿದೆ. ಕಾವೇರಿ ತೀಥ೯ಕ್ಷೇತ್ರ ತಲಕಾವೇರಿ ಬಳಿ ಭೂಕುಸಿತ ಸಂಭವಿಸಿದ್ದು, ಎರಡು ಮನೆಗಳು ಸಂಪೂಣ೯ ಮಣ್ಣುಪಾಲಾಗಿವೆ. ತಲಕಾವೇರಿ ಕ್ಷೇತ್ರದ ಅರ್ಚಕ ಟಿ.ಎಸ್.ನಾರಾಯಣ ಆಚಾರ್, ಅವರ ಪತ್ನಿ, ಆನಂದತೀಥ೯ ಮತ್ತು ಇಬ್ಬರು ಅಚ೯ಕರು ನಾಪತ್ತೆಯಾಗಿದ್ದಾರೆ. ಮಣ್ಣಿನಡಿ ಸಿಲುಕಿರುವವರ ರಕ್ಷಣೆಗೆ ಸ್ಥಳೀಯರೊಂದಿಗೆ ವಿಪತ್ತು ನಿರ್ವಹಣಾ ಪಡೆ ಕೂಡ ಕಾಯಾ೯ಚರಣೆ ನಡೆದಿದೆ. ಈ ದುರ್ಘಟನೆಯಲ್ಲಿ ಕೆಲವು ವಾಹನಗಳೂ ಮಣ್ಣಿನಡಿ ಸಿಲುಕಿವೆ ಎನ್ನಲಾಗಿದೆ. ಈ ನಡುವೆ, ಭಾಗಮಂಡಲದ ಭಗಂಡಕ್ಷೇತ್ರ ದ್ವೀಪದಂತಾಗಿದೆ. ಮಳೆ-ಪ್ರವಾಹದಿಂದಾಗಿ ಮಡಿಕೇರಿ-ವೀರಾಜಪೇಟೆಗೆ ರಸ್ತೆಯ ಬೇತ್ರಿ ಸೇತುವೆ ಬಂದ್ ಮಾಡಲಾಗಿದೆ.
ರಾಮ ಮಂದಿರಕ್ಕಾಗಿ ಹೋರಾಟ; ಸಾರಥ್ಯ ವಹಿಸಿದ್ದ ಡಾ.ಪ್ರಭಾಕರ ಭಟ್’ಗೆ ಗೌರವ
ಮಂಗಳೂರು : ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ ಕನಸು ಈಡೇರಿದೆ. ರಾಮ ಜನ್ಮಭೂಮಿಯ್ಲಲಿ ಶಿಲಾನ್ಯಾಸ ನೆರವೇರಿದರೆ ಅದಕ್ಕೆ ಪೂರಕವಾಗಿ ನಾಡಿನ ವಿವಿಧೆಡೆ ಧಾರ್ಮಿಕ ಕೈಂಕರ್ಯಗಳು ಗಮನಸೆಳೆದವು. ರಾಮ ಮಂದಿರ ಹೋರಾಟದಲ್ಲಿ ಪಾಲ್ಗೊಂಡವರನ್ನು ನೆನಪಿಸುವ ಸನ್ನಿವೇಶಗಳೂ ಗಮನ ಸೆಳೆದವು. ಈ ನಡುವೆ ರಾಮ ಮಂದಿರಕ್ಕಾಗಿ ನಡೆದ ಹೋರಾಟದಲ್ಲಿ ಸುದೀರ್ಘ ಕಾಲ ಭಾಗಿಯಾಗಿ ಕರಸೇವಕರು ಹಾಗೂ ಹಿಂದೂ ಕಾರ್ಯಕರ್ತರಿಗೆ ಸ್ಪೂರ್ತಿಯಾಗಿರುವ ಆರೆಸ್ಸೆಸ್ ರಾಷ್ಟ್ರೀಯ ಪ್ರಮುಖ್ ಡಾ.ಪ್ರಭಾಕರ್ ಭಟ್ ಅವರ ಸೇವೆಯನ್ನು ಸ್ಮರಿಸುವ ಪ್ರಯತ್ನ ನಡೆಯಿತು. ಶಾಸಕ ರಾಜೇಶ್ ನಾಯ್ಕ್ ಅವರು ಡಾ.ಪ್ರಭಾಕರ್ ಭಟ್ ಅವರನ್ನು ಭೇಟಿಯಾಗಿ ಗೌರವ ಸಲ್ಲಿಸಿ ಆಶೀರ್ವಾದ ಪಡೆದರು. ಬಿಜೆಪಿ ನಾಯಕ ರಮಾನಾಥ್ ರಾಯಿ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ, 1990-1992 ರ ಅಯೋಧ್ಯೆ ಕರಸೇವೆಗೆ ಭಾಗವಹಿಸಿದ ಶ್ರೀ ಪ್ರವೀಣ್ ಕುಮಾರ್ ಶೆಟ್ಟಿ ಅಡ್ಯಾರ್ ಶ್ರೀ ಮಹಾಬಲ ಅಡ್ಯಾರ್ ಶ್ರೀ ರವೀಂದ್ರ ಶೆಟ್ಟಿಗಾರ್ ಅವರಿಗೆ…
ಮೀನು ಪ್ರೀಯರಿಗೂ ಇಷ್ಟ.. ಉದ್ಯೋಗ ಸೃಷ್ಟಿಯೂ ಪಕ್ಕಾ; ChefTalk ಪೂಜಾರಿಯ ‘ಮತ್ಷ್ಯದರ್ಶಿನಿ’ ವೈಶಿಷ್ಟ್ಯ
ಬೆಂಗಳೂರು: ಉದ್ಯೋಗ ಉತ್ತೇಜನ ಪರಿಕಲ್ಪನೆಯಲ್ಲಿ ಯಶಸ್ವಿಯಾಗಿರುವ Chef Talk ಕಂಪೆನಿಯ ಪ್ರವರ್ತಕರಾದ ಗೋವಿಂದ ಪೂಜಾರಿ ಇದೀಗ ರಾಜ್ಯ ಸರ್ಕಾರದ ಮೀನುಗಾರಿಕಾ ಇಲಾಖೆ ಜೊತೆ ಕೈಜೋಡಿಸಿದ್ದಾರೆ. ಮತ್ಯೋದ್ಯಮಕ್ಕೆ ಸ್ಫೂರ್ತಿಯಾಗಿ ಹಾಗೂ ನಿರುದ್ಯೋಗಿಳಿಗೆ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ‘ಮತ್ಸ್ಯಬಂಧ’ ಯೋಜನೆಯನ್ನು ಆರಂಭಿಸಿರುವ ಗೋವಿಂದ ಬಾಬು ಪೂಜಾರಿ, ಇದೀಗ ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯ ಹೊನ್ನಪ್ಪ ರೆಡ್ಡಿ ಬಡಾವಣೆಯಲ್ಲಿ ‘ಮತ್ಸ್ಯದರ್ಶಿನಿ’ ಆರಂಭಿಸಿದ್ದಾರೆ. ಮತ್ಸ್ಯಪ್ರಿಯರ ಅಭಿರುಚಿಗೆ ತಕ್ಕಂತೆ ಖಾದ್ಯ ಸಿದ್ದಪಡಿಸಿ ಒದಗಿಸುವ ಈ ದರ್ಶಿನಿಗೆ ರಾಜ್ಯ ಸರ್ಕಾರದ ಮೀನುಗಾರಿಕಾ ಅಭಿವೃದ್ಧಿ ನಿಗಮದ ಅಧಿಕಾರಿಗಳು ಬುಧವಾರ ಚಾಲನೆ ನೀಡಿದರು. ಕಬ್ಬನ್ ಪಾರ್ಕ್ ಬಳಿ ಗ್ರಾಹಕರನ್ನು ಸಂತುಷ್ಟಗೊಳಿಸುವಲ್ಲಿ ಯಶಸ್ವಿಯಾಗಿರುವ ಮತ್ಸ್ಯದರ್ಶಿನಿ ರೀತಿಯಲ್ಲೇ ಹೊನ್ನಪ್ಪ ರೆಡ್ಡಿ ಲೇಔಟ್‌ನ ಟಿ.ರಾಮಣ್ಣ ಗಾರ್ಡನ್‌ನಲ್ಲಿ ಸುಸಜ್ಜಿತ ಮತ್ಸ್ಯದರ್ಶಿನಿ ಆರಂಭಗೊಂಡಿದೆ. ಕಡಲ ತೋರಕ್ಕಷ್ಟೇ ಸೀಮಿತವಾಗಿದ್ದ ವಿವಿಧ ತಳಿಗಳ ಮೀನುಗಳ ಖಾಧ್ಯ ಇಲ್ಲಿ ಲಬ್ಯವಿದೆ. ತಾಜಾ ಮೀನುಗಳ ಪೂರೈಕೆಗೂ ಅವಕಾಶ ನೀಡಲಾಗುತ್ತಿದೆ ಎಂದು ಇದರ ಮಾಲಕರೂ…
ರಾಮಮಂದಿರ ಶಿಲಾನ್ಯಾಸ; ವೀಡಿಯೋ ಕಾನ್ಫರೆನ್ಸ್ ಮೂಲಕ ಕಣ್ತುಂಬಿಕೊಂಡ ಅಡ್ವಾಣಿ, ವಕೀಲ ಶ್ರೀ ಪರಾಶರಣ್,
ದೆಹಲಿ: ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರಕ್ಕಾಗಿ ಪ್ರಧಾನಿ ಮೋದಿಯವರು ಶಿಲಾನ್ಯಾಸ ನೆರವೇರಿಸಿದ್ದಾರೆ. ಈ ಸುಂದರ ಸಮಾರಂಭದಲ್ಲಿ ಪಾಲ್ಗೊಳ್ಳಲು ಬಹುತೇಕ ನಾಯಕರಿಗೆ, ಗಣ್ಯರಿಗೆ ಸಾಧ್ಯವಾಗಿಲ್ಲ. ರಾಮ ಮಂದಿರಕ್ಕಾಗಿ ಹೋರಾಟ ನಡೆಸಿರುವ ಮಾಜಿ ಉಪಪ್ರಧಾನಿ ಎಲ್.ಕೆ.ಅಡ್ವಾಣಿ ವೀಡಿಯೋ ಕಾನ್ಫರೆನ್ಸ್ ಮೂಲಕ ಈ ಕೈಂಕರ್ಯವನ್ನು ಕಣ್ತುಂಬಿಕೊಂಡರು. ರಾಮ ಜನ್ಮಭೂಮಿ ಪರವಾಗಿ ಸುಪ್ರಿಮ್ ಕೋರ್ಟ್ ನಲ್ಲಿ ಹೋರಾಟ ನಡೆಸಿದ್ದ ಹಿರಿಯ ವಕೀಲ ಶ್ರೀ ಪರಾಶರಣ್ ಕೂಡಾ ಈ ಸಮಾರಂಭದಲ್ಲಿ ಪಾಲ್ಗೊಳ್ಳಬೇಕಿತ್ತು. ಆದರೆ ಅದು ಸಾಧ್ಯವಾಗಿಲ್ಲ. ಹಾಗಾಗಿ ಅವರು ತಮ್ಮ ಕುಟುಂಬದ ಜೊತೆ ಭೂಮಿ ಪೂಜೆ ಕಾರ್ಯಕ್ರಮ ವೀಕ್ಷಿಸಿದರು.
ಪಂಪ್ ಸೆಟ್ ಮೂಲಕ ಕಾಲುವೆಗಳಿಂದ ಹೊಲಗಳಿಗೆ ನೀರು; ತಪ್ಪಿತಸ್ಥರಿಗೆ ಸರ್ಕಾರ ಎಚ್ಚರಿಕೆ
ಬೆಂಗಳೂರು: ತುಂಗಭದ್ರಾ ಅಚ್ಚುಕಟ್ಟು ಪ್ರದೇಶದಲ್ಲಿ ಕಾನೂನು ವ್ಯಾಪ್ತಿ ಮೀರಿ ಹೊಲಗಳಿಗೆ ಪಂಪ್ ಸೆಟ್ ಮೂಲಕ ಕಾಲುವೆ ನೀರನ್ನು ಸರಬರಾಜು ಮಾಡಿಕೊಳ್ಳುತ್ತಿರುವ ಬಗ್ಗೆ ಆರೋಪಗಳು ಕೇಳಿಬಂದಿವೆ. ಈ ವಿಚಾರವನ್ನು ಸರ್ಕಾರ ಗಂಭೀರವಾಗಿ ಪರಿಣಮಿಸಿದೆ ಎಂದು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ತಿಳಿಸಿದ್ದಾರೆ. ಪಂಪ್ ಸೆಟ್ ಗಳನ್ನು ಅಳವಡಿಸಿ ಕಾಲುವೆಗಳಿಂದ ಹೊಲಗಳಿಗೆ ನೀರು ಹರಿಸುವುದು ಕಾನೂನಿಗೆ ವಿರುದ್ಧವಾಗಿದ್ದು ಇಂಥಹಾ ಪಂಪ್ ಸೆಟ್ ಗಳನ್ನು ಅಳವಡಿಸಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಜಲಸಂಪನ್ಮೂಲ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿರುವುದಾಗಿ ಅವರು ಹೇಳಿದ್ದಾರೆ. ಕಾನೂನಿಗೆ ವಿರುದ್ಧವಾಗಿ ಪಂಪ್ ಸೆಟ್ ಗಳನ್ನು ಅಳವಡಿಸಿ ನೀರೆತ್ತುವ ಇಂಥಹಾ ಘಟನೆಗಳು ಎಲ್ಲೆಡೆ ವರದಿಯಾಗುತ್ತಿರುವ ಹಿನ್ನೆಲೆಯಲ್ಲಿ ಈ ಕುರಿತು ಶೀಘ್ರವಾಗಿ ಉನ್ನತ ಮಟ್ಟದ ಸಭೆ ಕರೆಯುತ್ತೇನೆ ಎಂದಿರುವ ಸಚಿವರು, ತುಂಗಭದ್ರಾ ಎಡದಂಡೆ ಕಾಲುವೆ ವ್ಯಾಪ್ತಿಯಲ್ಲಿ ಹಮ್ಮಿಕೊಂಡಿರುವ ಪ್ರತಿಭಟನೆಯನ್ನು ಸ್ಥಗಿತಗೊಳಿಸುವಂತೆ ರೈತರಲ್ಲಿ ಮನವಿ ಮಾಡುತ್ತೇನೆ.
