ಬೆಂಗಳೂರು: ಆಷಾಢ ನಂತರದ ಮೊದಲ ಹಬ್ಬ ನಾಗರ ಪಂಚಮಿಯನ್ನು ಶ್ರದ್ದಾ ಭಕ್ತಿಯಿಂದ ಆಚರಿಸಲಾಗುತ್ತಿದೆ. ನಾಡಿನ ದೇವಾಲಯಗಳಲ್ಲಿ ಎಂದಿನಂತೆ ಆಚರಣಾ ವೈಭವ ಕಂಡುಬಂದಿಲ್ಲ. ಕೊರೋನಾ ವೈರಾಣು ಸೋಂಕಿನ ಭೀತಿಯ ಹಿನ್ನೆಲೆಯಲ್ಲಿ ದೇವಾಲಯಗಳ ಅರ್ಚಕರಷ್ಟೇ ಪೂಜಾ ಸಾಂಪ್ರದಾಯಿಕ ವಿಧಾನಗಳನ್ನು ನೆರವೇರಿಸಿದ್ದಾರೆ. ಮನೆ ಮನೆಗಳಲ್ಲಿ ಕುಟುಂಬ ಸದಸ್ಯರಿಗಷ್ಟೇ ಈ ಬಾರಿಯ ನಾರ ಪಂಚಮಿ ಆಚರಣೆ ಸೀಮಿತವಾಗಿದೆ. ಇದೇ ವೇಳೆ, ಮುಖ್ಯಮಂತ್ರಿ ಯಡಿಯೂರಪ್ಪ ಅವರು ನಾಡಿನ ಸಮಸ್ತ ಜನತೆಗೆ ನಾಗರಪಂಚಮಿ ಹಬ್ಬದ ಶುಭಾಶಯ ಕೋರಿದ್ದಾರೆ. ನಾಡಿನ ಸಮಸ್ತ ಜನತೆಗೆ ನಾಗರಪಂಚಮಿ ಹಬ್ಬದ ಹಾರ್ದಿಕ ಶುಭಕಾಮನೆಗಳು. ದೇವರು ಎಲ್ಲ ದುರಿತಗಳನ್ನು ಪರಿಹರಿಸಿ, ಎಲ್ಲರಿಗೂ ಸುಖ, ಸಂತೋಷ, ನೆಮ್ಮದಿ, ಆರೋಗ್ಯಗಳನ್ನು ಕರುಣಿಸಲಿ, ನಾಡಿಗೆ ಮಂಗಳವನ್ನು ಉಂಟುಮಾಡಲಿ ಎಂದು ಪ್ರಾರ್ಥಿಸೋಣ. ಮನೆಗಳಲ್ಲಿಯೇ ದೇವರನ್ನು ಪ್ರಾರ್ಥಿಸಿ, ಸಾಮಾಜಿಕ ಅಂತರ ಸೇರಿದಂತೆ ಸುರಕ್ಷತಾ ನಿಯಮಗಳನ್ನು ಕಡ್ಡಾಯ ಪಾಲಿಸಿ. pic.twitter.com/HVG3Xol9w2 — B.S.Yediyurappa (Modi Ka Parivar) (@BSYBJP) July 25,…
Year: 2020
‘ನಾಗರ ಪಂಚಮಿ’: ಕುಕ್ಕೆ, ಮಂಜೇಶ್ವರದಲ್ಲಿ ಕೈಂಕರ್ಯ ಹೇಗಿತ್ತು ಗೊತ್ತಾ?
ಬೆಂಗಳೂರು: ಆಷಾಢ ನಂತರದ ಮೊದಲ ಹಬ್ಬ ‘ನಾಗರ ಪಂಚಮಿ’ಯನ್ನು ಶ್ರದ್ದಾ ಭಕ್ತಿಯಿಂದ ಆಚರಿಸಲಾಗುತ್ತಿದೆ. ನಾಡಿನ ದೇವಾಲಯಗಳಲ್ಲಿ ಎಂದಿನಂತೆ ಆಚರಣಾ ವೈಭವ ಕಂಡುಬಂದಿಲ್ಲ. ಕೊರೋನಾ ವೈರಾಣು ಸೋಂಕಿನ ಭೀತಿಯ ಹಿನ್ನೆಲೆಯಲ್ಲಿ ದೇವಾಲಯಗಳ ಅರ್ಚಕರಷ್ಟೇ ಪೂಜಾ ಸಾಂಪ್ರದಾಯಿಕ ವಿಧಾನಗಳನ್ನು ನೆರವೇರಿಸಿದ್ದಾರೆ. ದಕ್ಷಿಣ ಭಾರತದ ಪ್ರಮುಖ ನಾಗ ದೇವತಾ ಕ್ಷೇತ್ರ ಎನ್ನಲಾದ ಕುಕ್ಕೆ ಸುಬ್ರಹ್ಮಣ್ಯ ದೇವಾಲಯದಲ್ಲಿ ಇಂದು ಯಾವುದೇ ಜಾತ್ರಾ ವೈಭವ ಇರಲಿಲ್ಲ. ಅರ್ಚಕ ವೃಂದ ಸಂಪ್ರಾದಾಯಿಕ ಕೈಂಕರ್ಯವನ್ನಷ್ಟೇ ನೆರವೇರಿಸಿದ್ದಾರೆ. ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ ನಂತರ ನಾಗರ ಪಂಚಮಿ ವೈಭವಕ್ಕೆ ಸಾಕ್ಷಿಯಾಗುತ್ತಿದ್ದ ಮಂಜೇಶ್ವರದ ಶ್ರೀಮದ್ ಅನಂತೇಶ್ವರ ದೇವಸ್ಥಾನದಲ್ಲೂ ನಾಗರ ಪಂಚಮಿ ಅಂಗವಾಗಿ ಸರಳ ರೀತಿಯಲ್ಲಿ ಆಚರಣೆ ನೆರವೇರಿತು. ಹದಿನೆಂಟು ಪೇಟೆಯ ದೇವಳವೆಂಬ ಖ್ಯಾತಿಯ ಮಂಜೇಶ್ವರ ಶ್ರೀಮದ್ ಅನಂತೇಶ್ವರ ದೇವಸ್ಥಾನದಲ್ಲಿ ನಾಗರಪಂಚಮಿ ಪ್ರಯುಕ್ತ ನಾಗ ದೇವರ ಬಿಂಬಗಳಿಗೆ ಪಂಚಾಮೃತ, ಕ್ಷೀರಾಭಿಷೇಕಗಳು ದೇವಳದ ವೈದಿಕರಿಂದ ನೆರವೇರಿತು. ಮನೆ ಮನೆಗಳಲ್ಲಿ ಕುಟುಂಬ ಸದಸ್ಯರಿಗಷ್ಟೇ ಈ ಬಾರಿಯ…
ಮಹಿಳಾ ಪೊಲೀಸ್ ಟ್ರೈನಿಂಗ್ ವೇಳೆ ಜಿಂಗ್ ಚಕ್ ಜಿಂಗಿಂಗ್ ಚಕ್; ವೀಡಿಯೋ ವೈರಲ್
ಬೆಂಗಳೂರು: ಪೊಲೀಸರು ನಾಡು ರಕ್ಷಕರು. ಅಷ್ಟೇ ಅಲ್ಲ ಅವರ ಪ್ರತಿಭೆ ಸಾಂಸ್ಕೃತಿಕ ಸಕ್ಷೇತ್ರದಲ್ಲೂ ಪ್ರತಿಬಿಂಭಿಸುತ್ತಿದೆ. ಇಲ್ಲೊಬ್ಬ ಪೊಲೀಸ್ ತನ್ನ ಸಹೋದ್ಯೋಗಿ ತಂಡಕ್ಕೆ ಜಾನಪದ ಹಾಡಿನೊಂದಿಗೆ ಕಾರ್ಯಕ್ಷಮತೆಯ ಪಾಠ ಹೇಳಿ ಗಮನಸೆಳೆದಿದ್ದಾರೆ. ಕರ್ನಾಟಕ ಪೊಲೀಸ್ ತರಬೇತಿ ಶಾಲೆಯೊಂದರಲ್ಲಿ ತರಬೇತುದಾರರೊಬ್ಬರು ಜಾನಪದ ಹಾಡೊಂದನ್ನು ಹಾಡುತ್ತಾ ಪಾಠ ಹೇಳುತ್ತಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಕತ್ ವೈರಲ್ ಆಗಿದೆ. ತರಬೇತಿ ಸಂದರ್ಭದಲ್ಲಿ ಏಕ್-ದೊ-ತೀನ್-ಚಾರ್ ಎನ್ನುತ್ತಾ ಅಂಕಿಗಳಿಗೆ ತಕ್ಕಂತೆ ಡ್ರಿಲ್ ಮಾಡೋದನ್ನು ತಿಳಿದಿದ್ದೇವೆ. ಇಲ್ಲೊಬ್ಬ ತರಬೇತುದಾರ ಕನ್ನಡ ಜಾನಪದ ಹಾಡನ್ನು ಹೇಳುತ್ತಾ ಶಿಕ್ಷಾರ್ಥಿಗಳನ್ನು ರಂಜಿಸುತ್ತಾ ತರಬೇತಿ ನೀಡಿದ ವೈಖರಿ ನಾಡಿನ ಗಮನಸೆಳೆದಿದೆ. ಈ ಇನ್ಸ್ಟ್ರಕ್ಟರ್’ನ ಹಾಡು ಮಹಿಳಾ ಶಿಕ್ಷಾರ್ಥಿಗಳ ಹುಮ್ಮಸ್ಸನ್ನೂ ದುಪ್ಪಟ್ಟು ಮಾಡುತ್ತಿತ್ತು ಎಂಬುದಕ್ಕೆ ಈ ವೀಡಿಯೊ ಸಾಕ್ಷಿಯಾಗಿದೆ. #Police training school somewhere in #Karnataka.#desi style of command with a folk song by an instructor.Video: forwarded on…
ಕೊರೋನಾ ವಿಚಾರ; ಸಂಜೀವಿನಿಯಾದ ಎಸಿಪಿಗೆ ನಾಡಿನ ಸೆಲ್ಯೂಟ್
ಬೆಂಗಳೂರು: ರಾಜ್ಯದಲ್ಲಿ ಕೊರೋನಾ ವೈರಾಣು ಹಾವಳಿ ಮುಂದುವರಿದಿದ್ದು, ಸೋಂಕಿತರಿಗೆ ಚಿಕಿತ್ಸೆ ನೀಡುವುದೇ ಸವಾಲಾಗಿ ಪರಿಣಮಿಸಿದೆ. ಇದೇ ಸಂದರ್ಭದಲ್ಲಿ ಪ್ಲಾಸ್ಮಾ ಥೆರಪಿ ಚಿಕಿತ್ಸೆ ಯಶಸ್ವಿಯಾಗುತ್ತಿದ್ದು ಕೆಲ ದಿನಗಳ ಹಿಂದೆ ಬೆಂಗಳೂರಿನಲ್ಲಿ ಪ್ಲಾಸ್ಮಾ ಬ್ಯಾಂಕ್ ಕಾರ್ಯಾರಂಭ ಮಾಡಿದೆ. ಈ ನಡುವೆ ಮಾರಣಾಂತಿಕ ಕೊರೋನಾ ಸೋಂಕಿನಿಂದ ಬಳಲುತ್ತಿರುವವರಿಗೆ ಸಂಜೀವಿನಿಯಾಗಬಲ್ಲ ಪ್ಲಾಸ್ಮಾವನ್ನು ದಾನ ಮಾಡುವ ಮೂಲಕ ರಾಜ್ಯ ಪೊಲೀಸ್ ಇಲಾಖೆಯ ಅಧಿಕಾರಿ ಸತೀಶ್ ರಾಜ್ಯದ ಗಮನಸೆಳೆದಿದ್ದಾರೆ. ಪ್ರಸ್ತುತ ದೇವನಹಳ್ಳಿ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾಗಿರುವ ಸತೀಶ್ ಅವರ ಕೋವಿಡ್ ನಿಂದ ಗುಣಮುಖರಾದ ನಂತರ ಅವರು ತಮ್ಮ ಪ್ಲಾಸ್ಮಾ ದಾನ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಎಸಿಪಿ ಸತೀಶ್ ಅವರ ಈ ಮಾನವೀಯ ನಡೆ ಬಗ್ಗೆ ಎಲ್ಲೆಡೆ ಮೆಚ್ಚುಗೆಯ ಮಾತುಗಳು ಹರಿದಾಡುತ್ತಿವೆ. ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಕೂಡಾ ಪೊಲೀಸ್ ಅಧಿಕಾರಿ ಸತೀಶ್ ಅವರ ಸೇವಾ ಮನೋಭಾವವನ್ನು ಹಾದಿ ಹೋಗಲಿ ಟ್ವೀಟ್ ಮಾಡಿದ್ದಾರೆ. ಕೊರೊನಾದಿಂದ…
ಆಭರಣ ಪ್ರಿಯರಿಗೆ ಶಾಕಿಂಗ್ ಸುದ್ದಿ.. ಚಿನ್ನ ಇನ್ನು ಗಗನ ಕುಸುಮ?
ಮುಂಬೈ: ಆಭರಣ ಪ್ರಿಯರಿಗೆ ಇದು ನಿಜಕ್ಕೂ ಶಾಕಿಂಗ್ ಸುದ್ದಿ. ಚಿನಿವಾರ ಪೇಟೆಯಲ್ಲಿ ಆಭರಣ ಚಿನ್ನದ ಧಾರಣೆ ಮತ್ತೆ ಗಗನದತ್ತ ಮುಖ ಮಾಡಿದ್ದು ನಾಗರ ಪಂಚಮಿ ಆಚರಣೆಯ ಭಕ್ತಿ ಕೈಂಕರ್ಯದ ಸಂದರ್ಭದಲ್ಲೇ ಚಿನ್ನದ ದರ ಏರಿಕೆಯ ಸುದ್ದಿ ಕೇಳಿಬಂದಿದೆ. ಚಿನ್ನದ ದರ ಮತ್ತೊಮ್ಮೆ ಗರಿಷ್ಠ ಮಟ್ಟಕ್ಕೆ ಏರಿಕೆಯಾಗಿದೆ. ದೇಶದಲ್ಲಿ 10 ಗ್ರಾಂ ಚಿನ್ನ ದರ 50,760 ರೂಪಾಯಿಗೆ ತಲುಪಿದೆ. ರಾಜಧಾನಿ ದೆಹಲಿಯಲ್ಲಿ 22 ಕ್ಯಾರಟ್ ಚಿನ್ನದ ದರ ಪ್ರತೀ 10 ಗ್ರಾಂಗೆ 49,560 ದಾಖಲಾದರೆ, 24 ಕ್ಯಾರಟ್ ಚಿನ್ನದ ಬೆಲೆ 10 ಗ್ರಾಂಗೆ 50,760 ರೂಪಾಯಿಗೆ ಏರಿಕೆಯಾಗಿದೆ. ಬೆಂಗಳೂರಿನಲ್ಲಿ ಈ ದರ ಸ್ವಲ್ಪ ಮಟ್ಟಿಗೆ ಕಡಿಮೆ ಇದ್ದು, 22 ಕ್ಯಾರಟ್’ನ 10 ಗ್ರಾಂ ಚಿನ್ನಕ್ಕೆ 48,110 ರೂಪಾಯಿ ಇದೆ. ಆದರೆ ಅಪರಂಜಿ 24 ಕ್ಯಾರಟ್ 10 ಗ್ರಾಂ ಚಿನ್ನಕ್ಕೆ 52,480 ದರ ನಿಗದಿಯಾಗಿದ್ದು ದೆಹಲಿಗಿಂತಲೂ ಹೆಚ್ಚಿದೆ. ಅಮೆರಿಕಾ-ಚೀನಾ ನಡುವಿನ…
ಕರುನಾಡಲ್ಲಿ ಕೊರೋನಾ ತಲ್ಲಣ; ಸೋಂಕು ಹೆಚ್ಚಳದ ಆತಂಕ
ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಸೋಂಕಿನ ಪ್ರಕರಣಗಳ ಹೆಚ್ಚಳ ಗಮನಿಸಿದರೆ ಮುಂದಿನ ದಿನಗಳ ಬಗ್ಗೆ ಆತಂಕ ಉಂಟಾಗುತ್ತದೆ. ಶುಕ್ರವಾರ ಮತೊಮ್ಮೆ ದಾಖಲೆ ಎಂಬಂತೆ ಹೊಸ ಸೋಂಕಿತರ ಸಂಖ್ಯೆ 5 ಸಾವಿರದ ದಾಟಿದ್ದು ಹೆಲ್ತ್ ಬುಲೆಟಿನ್’ನ ಮಾಹಿತಿ ಕಂಡು ಜನ ಬೆಚ್ಚಿ ಬಿದ್ದಿದ್ದಾರೆ. ಶುಕ್ರವಾರ ರಾಜ್ಯದಲ್ಲಿ 5007 ಪ್ರಕರಣಗಳು ವರದಿಯಾಗಿದ್ದು, ಸೋಂಕಿತರ ಸಂಖ್ಯೆ 85,870ಕ್ಕೆ ಹೆಚ್ಚಳವಾಗಿದೆ. ಬೆಂಗಳೂರು ನಗರದಲ್ಲಿ 2267 ಪ್ರಕರಣಗಳು ಪತ್ತೆಯಾಗಿದ್ದು, ಉಡುಪಿಯಲ್ಲಿ 190, ಬಾಗಲಕೋಟೆಯಲ್ಲಿ 184, ದಕ್ಷಿಣ ಕನ್ನಡದಲ್ಲಿ 180, ಧಾರವಾಡದಲ್ಲಿ 174, ಕಲಬುರಗಿಯಲ್ಲಿ 159, ವಿಜಯಪುರದಲ್ಲಿ 158, ಬಳ್ಳಾರಿಯಲ್ಲಿ 136, ಹಾಸನದಲ್ಲಿ 118, ಬೆಳಗಾವಿಯಲ್ಲಿ 116, ಗದಗದಲ್ಲಿ 108, ರಾಯಚೂರಿನಲ್ಲಿ 107 ಹೊಸ ಸೋಂಕಿನ ಪ್ರಕರಣಗಳು ಬೆಳಕಿಗೆ ಬಂದಿವೆ. 110 ಮಂದಿ ಸೋಂಕಿನಿಂದ ಮೃತಪಟ್ಟಿದ್ದು, ಇದರೊಂದಿಗೆ ಕೊರೋನಾಗೆ ಬಲಿಯಾದವರ ಸಂಖ್ಯೆ 1732 ಕ್ಕೆ ಹೆಚ್ಚಳವಾಗಿದೆ ಎಂದು ಹೆಲ್ತ್ ಬುಲೆಟಿನ್’ ಹೇಳಿದೆ. ಇಂದಿನ 24/07/2020 ಸಂಪೂರ್ಣ ಪತ್ರಿಕಾ…
ಅರಿಶಿನ ಎಲೆ ಗಟ್ಟಿ; ಹಬ್ಬಕ್ಕೆ ಸ್ವಾದಿಷ್ಟದ ಮೆರಗು
ಹಬ್ಬಗಳು ಸಾಲು ಸಾಲಾಗಿ ಬರುತ್ತಿವೆ. ಪ್ರತೀ ಹಬ್ಬಗಳನ್ನೂ ಒಂದೊಂದು ಖಾದ್ಯದ ವಿಶೇಶದೊಂದಿಗೆ ಗುರುತಿಸಲಾಗುತ್ತಿದೆ. ಅದರಲ್ಲೂ ನಾಗರ ಪಂಚಮಿ ಹಾಗೂ ಶ್ರಾವಣ ಮಾಸದ ಹಬ್ಬಗಳಲ್ಲಿ ಅರಿಶಿನ ಎಲೆ ಗಟ್ಟಿ ಅಥವಾ ಕಡುಬು ಗಮನಸೆಳೆಯುತ್ತವೆ. .ಅರಿಶಿನ ಔಷಧಿಯುಕ್ತ ಸಸ್ಯ. ಅದರ ಎಲೆ ಪರಿಮಳ ಕೂಡಾ. ಅದರ ಎಳೆಯಲ್ಲಿ ಮಾಡಿದ ಗಟ್ಟಿ ಅಥವಾ ಕಡುಬು ಸ್ವಾದಿಷ್ಟ ಖಾದ್ಯ. ಇದನ್ನು ಮಾಡುವ ವಿಧಾನ ಕೂಡಾ ಬಲು ಸುಲಭ.
ದ್ವಿತೀಯ PUC ವಿದ್ಯಾರ್ಥಿಗಳಿಗೆ ಶಿಕ್ಷಣ ಇಲಾಖೆಯಿಂದ ಆನ್‌ಲೈನ್ ಕ್ಲಾಸ್; ಇಲ್ಲಿದೆ ಲಿಂಕ್
ಬೆಂಗಳೂರು: ಕೊರೋನಾ ವೈರಾಣು ಹಾವಳಿ ಕಾರಣದಿಂದಾಗಿ ಶಿಕ್ಷಣ ಸಂಸ್ಥೆಗಳಲ್ಲಿ ತರಗತಿ ಆರಂಭ ವಿಳಂಬವಾಗಿವೆ. ಹಾಗಾಗಿ ಆನ್‌ಲೈನ್ ಮೂಲಕ ಪಠ್ಯಕ್ರಮ ಅನುಸರಿಸಲಾಗುತ್ತಿದೆ. ಇದೇ ವೇಳೆ ಪದವಿಪೂರ್ವ ವಿದ್ಯಾರ್ಥಿಗಳಿಗಾಗಿ ಶಿಕ್ಷಣ ಇಲಾಖೆ ಯೂಟ್ಯೂಬ್ ಪಾಠ ಆರಂಭಿಸಿದೆ. ಯೂ ಟ್ಯೂಬ್ ಮೂಲಕ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗಾಗಿ ಪ್ರೀ ರೆಕಾರ್ಡೆಡ್ ಕ್ಲಾಸ್ ಆರಂಭವಾಗಿದ್ದು https://www.youtube.com/c/dpuedkpucpa ಲಿಂಕ್ ಮೂಲಕ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಲಾಗಿದೆ. ಪ್ರತಿ ದಿನ 45 ನಿಮಿಷಗಳ 4 ಅವಧಿಯ ತರಗತಿಗಳು ಲಭ್ಯವಾಗಲಿದೆ. ಆಯಾ ಪಾಠಕ್ಕೆ ಸಂಬಂಧಿಸಿದ ನೋಟ್ಸ್‌ಗಳು ಅದೇ ದಿನ ಲಭ್ಯವಾಗಲಿವೆ. ಇದನ್ನು ವಿದ್ಯಾರ್ಥಿಗಳ ಪ್ರಯೋಜನವಾಗಿಸಲು ಆಯಾ ಕಾಲೇಜುಗಳ ಪ್ರಾಧ್ಯಾಪಕರನ್ನೇ ಹೊಣೆಗಾರರನ್ನಾಗಿಸಲಾಗಿದೆ ಎಂದು ಪಿಯು ಮಂಡಳಿ ಹೇಳಿದೆ. ದ್ವಿತೀಯ ಪಿಯು ಯೂಟ್ಯೂಬ್ ತರಗತಿಯ ವೇಳಾಪಟ್ಟಿ ಹೀಗಿದೆ: ಜುಲೈ 23: ಭೌತಶಾಸ್ತ್ರ/ಅಕೌಂಟೆನ್ಸಿ ಭೌತಶಾಸ್ತ್ರ/ ಅಕೌಂಟೆನ್ಸಿ (ನೋಟ್ಸ್) ರಸಾಯನಶಾಸ್ತ್ರ /ರಾಜ್ಯಶಾಸ್ತ್ರ ರಸಾಯನಶಾಸ್ತ್ರ / ರಾಜ್ಯಶಾಸ್ತ್ರ (ನೋಟ್ಸ್) ಜುಲೈ 24: ಜೀವಶಾಸ್ತ್ರ/ಬಿಸಿನೆಸ್ ಸ್ಟಡೀಸ್ ಜೀವಶಾಸ್ತ್ರ /…
ಅಮರನಾಥ ಯಾತ್ರೆ; ಪರಮೇಶ್ವರನ ಪ್ರತಿಬಿಂಬ ಈಗ ಹೇಗಿದೆ ಗೊತ್ತಾ?
ದೆಹಲಿ: ಭಾರತ ಚೀನಾ ಗಡಿ ಭಾಗದಲ್ಲಿ ಡ್ರಾಗನ್ ಸೈನಿಕರ ರಗಳೆ ಹೆಚ್ಚಿದ ಹಿನ್ನೆಲೆಯಲ್ಲಿ ಗಡಿ ಕಾಯುವ ಯೋಧರನ್ನು ಭೇಟಿ ಮಾಡಿದ್ದ ರಕ್ಷಣಾ ಸಚಿವ ರಾಜನಾಥ್ ಸಿಂಗ್, ನಮ್ಮ ಸೈನಿಕರ ಯೋಗಕ್ಷೇಮ ಆಲಿಸಿ ಅವರನ್ನು ಹುರುರಿದುಂಬಿಸಿದ್ದರು. ಅನಂತರ ಬಿಹಾರ ರೆಜಿಮೆಂಟ್’ನ ಯೋಧರನ್ನೂ ಭೇಟಿ ಮಾಡಿ ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ ರಾಜನಾಥ್ ಸಿಂಗ್ ಅವರು ಸೇನಾಧಿಕಾರಿಗಳ ಜೊತೆ ಅಮನಾಥ ಕ್ಷೇತ್ರಕ್ಕೂ ತೆರಳಿ ಪರಮೇಶ್ವರನ ದರ್ಶನ ಪಡೆದರು. ಆ ಸಂದರ್ಭದ ಫೋಟೋಗಳನ್ನು ಅವರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. Raksha Mantri Shri @rajnathsingh met the soldiers from Bihar Regiment at Lukung during his visit to forward areas in Ladakh. He had a brief interaction with them. pic.twitter.com/81YS0T960a — रक्षा मंत्री कार्यालय/ RMO India (@DefenceMinIndia) July 19, 2020…
ಧ್ರುವಾಸ್ತ್ರ ಮಿಸೈಲ್’ನ ಪರೀಕ್ಷಾರ್ಥ ಉಡ್ಡಯನ ಯಶಸ್ವಿ
ದೆಹಲಿ: ಭಾರತೀಯ ಸೇನೆಯ ಬತ್ತಳಿಕೆಗೆ ಹೊಸದೊಂದು ಅಸ್ತ್ರ ಸೇರ್ಪಡೆಗೊಂಡಿದೆ. ಭಾರತದ ಮಹತ್ವಾಕಾಂಕ್ಷೆಯ ಆಂಟಿ ಟ್ಯಾಂಕ್ ಧ್ರುವಾಸ್ತ್ರ ಮಿಸೈಲ್’ನ ಪರೀಕ್ಷಾರ್ಥ ಉಡ್ಡಯನ ಯಶಸ್ವಿಯಾಗಿದೆ. ಮೇಕ್ ಇನ್ ಇಂಡಿಯಾ ಅಭಿಯಾನದಡಿ ಡಿಆರ್ ಡಿಒ ನಿರ್ಮಿಸಿರುವ ಮಿಸೈಲ್ ಇದಾಗಿದೆ. ಒಡಿಶಾದ ಇಂಟರಿಮ್ ಟೆಸ್ಟ್ ರೇಂಜ್’ನಲ್ಲಿ ಇದರ ಪರೀಕ್ಷೆ ನಡೆಯಿತು. ಜುಲೈ 15 ಮತ್ತು 16ರಂದು ಕೂಡಾ ಈ ಕ್ಷಿಪಣಿಯ ಪರೀಕ್ಷೆ ನಡೆಸಲಾಗಿತ್ತು.
