ಭಾರತದಲ್ಲಿ ದಾಖಲೆ ಪ್ರಮಾಣದಲ್ಲಿ ಹೊಸ ಕೇಸ್; ಸೋಂಕಿತರ ಸಂಖ್ಯೆ 12,38,635 ಕ್ಕೆ ಏರಿಕೆ

ದೆಹಲಿ: ಕೊರೋನಾ ಪರಿಸ್ಥಿತಿಯಿಂದಾಗಿ ದೇಶದ ಜನ ಆತಂಕದ ಸುಳಿಯಲ್ಲಿ ಸಿಲುಕಿದ್ದಾರೆ. ನಿನ್ನೆ ಮತ್ತೆ ದಾಖಲೆಯ ಪ್ರಮಾಣದಲ್ಲಿ ಹೊಸ ಸೋಂಕು ದೃಢಪಟ್ಟಿದ್ದು ವಿವಿಧ ರಾಜ್ಯಗಳಲ್ಲಿ 45,720 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಈ ಮೂಲಕ ಭಾರತದಲ್ಲಿ ಸೋಂಕಿತರ ಸಂಖ್ಯೆ 12,38,635 ಕ್ಕೆ ಏರಿಕೆಯಾಗಿದೆ. ನಿನ್ನೆ ಒಂದೇ ದಿನ ದೇಶದಲ್ಲಿ 1,129 ಜನರು ಸಾವನ್ನಪ್ಪಿದ್ದು ಕೊರೋನಾ ಸೋಂಕಿಗೆ ಬಲಿಯಾದವರ ಸಂಖ್ಯೆಯೂ 29,861ಕ್ಕೆ ಏರಿಕೆಯಾಗಿದೆ. . ಮಹಾರಾಷ್ಟ್ರದಲ್ಲಿ ನಿನ್ನೆ 10574 ಹೊಸ ಪ್ರಕರಣಗಳು ಪತ್ತೆಯಾಗಿದ್ದು, 280 ಜನರು ಸಾವನ್ನಪ್ಪಿದ್ದಾರೆ. ಆಂದ್ರಪ್ರದೇಶದಲ್ಲಿ 6045 ಸೋಂಕು ಪತ್ತೆಯಾಗಿದ್ದು, ಆ ರಾಜ್ಯದಲ್ಲಿ 65 ಮಂದಿ ಸೋಂಕಿತರು ಸಾವನ್ನಪ್ಪಿದ್ದಾರೆ. ತಮಿಳುನಾಡಿನಲ್ಲಿ 5845 ಹೊಸ ಪಾಸಿಟಿವ್ ಕೇಸ್’ಗಳು ಪತ್ತೆಯಾಗಿದ್ದು ಆ ವೇಳೆಗಾಗಲೇ 74 ಸಾವನ್ನಪ್ಪಿರುವ ಮಾಹಿತಿಯೂ ಲಭಿಸಿದೆ. ನಂತರದ ಸ್ಥಾನದಲ್ಲಿರುವ ಕರ್ನಾಟಕದಲ್ಲಿ 4764 ಮಂದಿ ಸೋಂಕಿತರು ಪಟ್ಟಿ ಸೇರಿದ್ದು, 55 ಮಂದಿ ಸಾವನ್ನಪ್ಪಿದ್ದಾರೆ. ಕೇರಳದಲ್ಲೂ ನಿನ್ನೆ 1038 ಹೊಸ ಕೇಸು…

‘ಮೈ ಮುಲಾಯಂ ಸಿಂಗ್ ಯಾದವ್’ ಟ್ರೈಲರ್; ರಾಜಕಾರಣದಲ್ಲೂ ಕುತೂಹಲ

ಲಾಕ್’ಡೌನ್ ಕಾರಣದಿಂದಾಗಿ ಭಾರತೀಯ ಚಿತ್ರೋದ್ಯಮ ಬಡವಾಗಿದೆ. ಇದೀಗ ಅನ್ಲಾಕ್ ಪ್ರಕ್ರಿಯೆ ಆರಂಭವಾಗುತ್ತಿದ್ದಂತೆಯೇ ಸಿನಿಮಾ ರಂಗದಲ್ಲೂ ಚೈತನ್ಯ ತುಂಬುವ ಸನ್ನಿವೇಶಗಳು ನಡೆದಿದೆ. ಅಲ್ಲೊಂದು ಇಲ್ಲೊಂದು ಕಾರ್ಯಕ್ರಮಗಳೂ ಎಲ್ಲರ ಗಮನ ಕೇಂದ್ರೀಕರಿಸುತ್ತಿದೆ. ಇದೇ ವೇಳೆ, ಮಾಜಿ ಮುಖ್ಯಮಂತ್ರಿ ಮುಲಾಯಂ ಸಿಂಗ್ ಯಾದವ್ ಜೀವನಾಧಾರಿತ ಚಿತ್ರ ‘ಮೈ ಮುಲಾಯಂ ಸಿಂಗ್ ಯಾದವ್’ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ರಾಷ್ಟ್ರ ರಾಜಕಾರಣದಲ್ಲಿ ಆಗಾಗ್ಗೆ ಸುದ್ದಿಯ ಕೇಂದ್ರಬಿಂದುವಾಗುತ್ತಿರುವ ಮುಲಾಯಂ ಸಿಂಗ್ ಕುರಿತ ಈ ಸಿನಿಮಾವೂ ಎಲ್ಲರ ಕುತೂಹಲ ಕೆರಳುವಂತೆ ಮಾಡಿದೆ. ‘ಮೈ ಮುಲಾಯಂ ಸಿಂಗ್ ಯಾದವ್’ ಚಿತ್ರದ ಟ್ರೈಲರ್’ಗೆ ಸಾಮಾಜಿಕ ಜಾಲತಾಣಗಳಲ್ಲಿ ಸಕತ್ ರೆಸ್ಪಾನ್ಸ್ ಸಿಕ್ಕಿದೆ. https://youtu.be/6mEa3Ge2-44  

ಸೂರಿಗಾಗಿ ‘ಪೂಜಾರಿ’ ಸೇವೆ; ಅನ್ನದಾತ ಆಶ್ರಯದಾತನಾದ ಕಥೆ

ಉಡುಪಿ: ಬದುಕು ಅಂದಮೇಲೆ ಮದುವೆ ಮಾಡಿಕೊಳ್ಳಬೇಕು, ಮನೆ ಕಟ್ಟಿಕೊಳ್ಳಬೇಕು’ ಎಂಬುದು ನಾಣ್ನುಡಿ. ಆದರೆ ಪರಿಸ್ಥಿತಿಯ ಹೊಡೆತಕ್ಕೆ ಸಿಲುಕಿದ ಬಡಪಾಯಿಗಳ ಪಾಲಿಗೆ ಮನೆ ಎಂಬುದು ಕನಸಿನ ಮಾತು. ಕೇಂದ್ರ-ರಾಜ್ಯ ಸರ್ಕಾರಗಳು ಬಡತನ ನಿವಾರಣೆಗೆ ಹಲವಾರು ಕಾರ್ಯಕ್ರಮಗಳನ್ನು ಕೈಗೊಂಡರೂ ಬಹುಪಾಲು ಮಂದಿಗೆ ಅವೆಲ್ಲವೂ ಮರೀಚಿಕೆ. ಇದಕ್ಕೆ ಉದಾಹರಣೆಯಂತಿದೆ ಹಲವರ ಬದುಕು. ಇಂತಹಾ ಪರಿಸ್ಥಿತಿಯಲ್ಲಿದ್ದ ಉಡುಪಿ ಜಿಲ್ಲೆ ಉಪ್ಪುಂದದ ಬಾಯಂಹಿತ್ಲುವಿನಲ್ಲಿ ಬೇಬಿ ಸುಬ್ಬಯ್ಯ ದೇವಾಡಿಗ ಕುಟುಂಬಕ್ಕೆ ಸಾಮಾಜಿಕ ಕಾರ್ಯಕರ್ತರೂ ಆದ ಉದ್ಯಮಿ ಗೋವಿಂದ ಬಾಬು ಪೂಜಾರಿಯವರು ಸುಂದರವಾದ ಮನೆ ನಿರ್ಮಿಸಿ ಕೊಟ್ಟು ಮಾದರಿಯಾಗಿದ್ದಾರೆ. ಬೈಂದೂರಿನ ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್’ನ ಮುಖ್ಯಸ್ಥರೂ ಆಗಿರುವ ಶೆಫ್ ಟಾಕ್ ಕಂಪೆನಿಯ ಮಾಲೀಕ ಗೋವಿಂದ ಬಾಬು ಪೂಜಾರಿ ತನ್ನ ಊರಾದ ಕುಂದಾಪುರದಲ್ಲಿ ಯುವಕರ ಸೈನ್ಯ ಕಟ್ಟಿ, ಹಲವಾರು ಹಳ್ಳಿಗಳ ಸಾವಿರಾರು ಕುಟುಂಬಗಳಿಗೆ ಲಾಕ್’ಡೌನ್ ವೇಳೆ ಆಹಾರ ಕಿಟ್ ವಿತರಿಸುತ್ತಿದ್ದಾಗ ಬಡಪಾಯಿ ಕುಟುಂಬದ ವೇದನೆ ಕೇಳಿ ಗೋವಿಂದ…

ದೇವತೆಗಳ ಬಗ್ಗೆ ಅವಹೇಳನಕಾರಿ ಸಂದೇಶ ಪ್ರಕರಣ; ನಿರಾಣಿಗೆ ಸಿದ್ದರಾಮಯ್ಯ ತರಾಟೆ

ಬೆಂಗಳೂರು: ಮಾಜಿ ಸಚಿವ, ಬಿಜೆಪಿ ಶಾಸಕ ಮುರುಗೇಶ್ ನಿರಾಣಿಯವರು ಹಿಂದೂ ದೇವತೆಗಳ ಬಗ್ಗೆ ಅವಹೇಳನಕಾರಿ ಸಂದೇಶಗಳನ್ನು ಹರಿಯಬಿಟ್ಟಿದ್ದಾರೆಂಬ ಪ್ರಕರಣ ಇದೀಗ ರಾಜ್ಯ ರಾಜಕಾರಣದಲ್ಲಿ ವಿವಾದದ ಬಿರುಗಾಳಿಯನ್ನೇ ಎಬ್ಬಿಸಿದೆ. ಸಾಮಾಜಿಕ ಜಾಲತಾಣಗಳಲ್ಲಿ ಮುಗೇಶ್ ನಿರಾಣಿ ಅವರಿಂದ ಸಂದೇಶವೊಂದು ಹಾಕಲ್ಲಟ್ಟಿದೆ. ಇದು ಕಣ್ತಪ್ಪಿನಿಂದಾದ ಪ್ರಮಾದ ಎಂದಿರುವ ನಿರಣಿ ಈ ಬಗ್ಗೆ ಬಹಿರಂಗ ಕ್ಷಮೆ ಯಾಚಿಸಿದ್ದಾರೆ. ಆದರೂ ಹಿಂದೂ ಕಾರ್ಯಕರ್ತರು ಮಾತ್ರವಲ್ಲ, ಕಾಂಗ್ರೆಸ್ ನಾಯಕರೂ ಮುರುಗೇಶ್ ನಿರಾಣಿ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ. ಈ ಬೆಳವಣಿಗೆ ಕುರಿತಂತೆ ಟ್ವೀಟ್ ಮಾಡಿರುವ ವಿಧಾನಸಭೆಯ ಪ್ರತಿಪಕ್ಷ ನಾಯಕ ಸಿದ್ಧರಾಮಯ್ಯ, ‘ಮಾಜಿ ಸಚಿವ ಮುರುಗೇಶ್ ನಿರಾಣಿಯವರು ಹಿಂದೂ ದೇವರ ಬಗ್ಗೆ ವ್ಯಕ್ತಪಡಿಸಿದ್ದಾರೆ ಎಂದು ಹೇಳಲಾದ ವಿಚಾರ ಮಾಧ್ಯಮಗಳ ಮೂಲಕ ಗಮನಕ್ಕೆ ಬಂತು. ಇದು ನಿಜವಾಗಿದ್ದರೆ ಬಹಳ ಕೆಟ್ಟ ನಡೆ ಎಂದು ಹೇಳಬೇಕಾಗುತ್ತದೆ. ದೇವರು ಮತ್ತು ಧರ್ಮ ಅವರವರ ನಂಬಿಕೆ ಅದನ್ನು ಗೌರವಿಸಬೇಕು. ಅವಹೇಳನ ಮಾಡಬಾರದು’ ಎಂದು ಅಭಿಪ್ರಾಯ…

ಮಾಸ್ಕ್ ಧರಿಸುವುದು ಕಡ್ಡಾಯ; ತಪ್ಪಿದಲ್ಲಿ 500 ರೂ. ದಂಡ

ಬೆಂಗಳೂರು: ಕೊರೋನಾ ವೈರಸ್ ಹರಡದಂತೆ ತಡೆಯಲು ವಾರಕಾಲ ಜಾರಿಯಲ್ಲಿದ್ದ ಲಾಕ್’ಡೌನ್ ತೆರವುಗೊಂಡಿದೆ. ಆದರೆ ಕಠಿಣ ನಿಯಮಗಳು ಜಾರಿಗೆ ಬಂದಿವೆ. ರಾತ್ರಿ ಉರ್ಫ್ಯೂ ಹಾಗೂ ಸಂಡೇ ಲಾಕ್’ಡೌನ್ ಮುಂದುವರಿಯಲಿದ್ದು ನಿಯಮ ಉಲ್ಲಂಘಿಸಿದವರಿಗೆ ದಂಡ ವಿಧಿಸುವ ಎಚ್ಚರಿಕೆಯ ಸಂದೇಶವನ್ನು ಸರ್ಕಾರ ರವಾನಿಸಿದೆ. ಬೆಂಗಳೂರಿನಲ್ಲಿ ಕೋವಿಡ್-19 ಮುಂಜಾಗ್ರತಾ ನಿಯಮವಾಳಿ ಪಾಲನೆ ಕಡ್ಡಾಯ ಮಾಡಲಾಗಿದೆ. ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಪಾಲಿಸುವುದು ಕಡ್ಡಾಯವಾಗಿದೆ. ಈ ಹಿಂದೆ ಮಾಸ್ಕ್ ಧರಿಸದಿದ್ದರೆ ಮತ್ತು ಸಾಮಾಜಿಕ ಅಂತರ ಪಾಲಿಸದಿದ್ದರೆ 100 ರೂಪಾಯಿ ದಂಡ ವಿಧಿಸಲಾಗುತ್ತಿತ್ತು. ಇನ್ನು ಮುಂದೆ ಈ ಮೊತ್ತವನ್ನು 500 ರೂಪಾಯಿಗೆ ಏರಿಕೆ ಮಾಡಲಾಗಿದೆ.ಈ ನಿಯಮ ಪಾಲನೆ ಸಂಬಂಧ ಬಿಬಿಎಂಪಿಯು ಮಾರ್ಷಲ್ ಗಳ ಸಂಖ್ಯೆಯನ್ನು ಹೆಚ್ಚಿಸಿದೆ.

ರಾತ್ರಿ ಕರ್ಫ್ಯೂ, ಭಾನುವಾರ ಲಾಕ್ ಡೌನ್ ಮುಂದುವರಿಕೆ; ಡಾ.ಸುಧಾಕರ್ ಮಾಹಿತಿ

ಬೆಂಗಳೂರು: ಕೊರೋನಾ ವೈರಾಣು ಸೋಂಕು ಹರಡುವುದನ್ನು ತಡೆಯಲು ಹೇರಲಾಗಿದ್ದ ವಾರ ಕಾಲದ ಲಾಕ್’ಡೌನ್ ಕೊನೆಗೊಂಡಿದೆ. ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಕಂಟೈನ್ ಮೆಂಟ್ ಝೋನ್ ಹೊರತುಪಡಿಸಿ ಉಳಿದೆಡೆ ಜನ ಜೀವನ ಸಹಜ ಸ್ಥಿತಿಗೆ ಮರಳಿದೆ. ಇಂದು ಬೆಳಗ್ಗೆ 5ಗಂಟೆಗೆ ಲಾಕ್ ಡೌನ್ ಅವಧಿ ಮುಕ್ತಾಯವಾಗಿದೆ. ಆದರೆ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿ ಕೆಲ ವಿಯಮಗಳನ್ನು ಬಿಗಿಗೊಳಿಯಲಾಗಿದೆ. ರಾತ್ರಿ 9 ಗಂಟೆಯಿಂದ ಬೆಳಗ್ಗೆ 5 ಗಂಟೆಯವರೆಗೆ ಕರ್ಪ್ಯೂ ಜಾರಿಗೊಳಿಸಲಾಗಿದೆ. ಅಂತೆಯೇ ಭಾನುವಾರ ಲಾಕ್ ಡೌನ್ ಜಾರಿಗೊಳಿಸಲಾಗಿದೆ. ಉದ್ಯಾನವನಗಳಲ್ಲಿ ಜಿಮ್, ಸಲಕರಣೆಗಳು ಮತ್ತು ಕುಳಿತುಕೊಳ್ಳಲು ಬೆಂಚ್ ಬಳಕೆಯನ್ನು ನಿಷೇಧಿಸಲಾಗಿದೆ. ಈ ಕುರಿತಂತೆ ಟ್ವೀಟ್ ಮಾಡಿರುವ ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ‘ಆನ್ ಲಾಕ್ – 2.0 ಮಾರ್ಗಸೂಚಿಯಲ್ಲಿ ಕೆಲ ಬದಲಾವಣೆಗಳನ್ನು ಮಾಡಿ ಜುಲೈ 22ರಿಂದ ಜುಲೈ 31ರವರೆಗೂ ಜಾರಿಯಲ್ಲಿರುವಂತೆ ಪರಿಷ್ಕೃತ ಮಾರ್ಗಸೂಚಿ ಜಾರಿ ಮಾಡಲಾಗಿದೆ. ರಾಜ್ಯಾದ್ಯಂತ ರಾತ್ರಿ…

ಕೊರೋನಾ ಕಾಲದಲ್ಲಿ ರಾಜಸ್ಥಾನ ಸರ್ಕಾರದ ಪತನ ಯತ್ನ; ಮೋದಿ ಬಗ್ಗೆ ರಾಹುಲ್ ಗೇಲಿ

ದೆಹಲಿ : ಕೊರೋನಾ ಕಾಲದಲ್ಲಿ ರಾಜಸ್ಥಾನ ಸರ್ಕಾರ ಪತನ ಮಾಡಲು ಮೋದಿ ಸರ್ಕಾರ ಮುಂದಾಗಿದೆ ಎಂದು ಕಾಂಗ್ರೆಸ್ ನಾಯ್ಕ ರಾಹುಲ್ ಗಾಂಧಿ ವ್ಯಂಗ್ಯವಾಡಿದ್ದಾರೆ. ಈ ಕುರಿತಂತೆ ಮೋದಿ ಸರ್ಕಾರದ ಸಾಧನೆಗಳೆಂದು ಗುರುತಿಸಿ ಆ ಪಟ್ಟಿಯನ್ನು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ. ಫೆಬ್ರವರಿಯಲ್ಲಿ ನಮಸ್ತೆ ಟ್ರಂಪ್, ಮಾರ್ಚ್’ನಲ್ಲಿ ಮಧ್ಯಪ್ರದೇಶ ಸರ್ಕಾರದ ಪದಚ್ಯುತಿ, ಏಪ್ರಿಲ್’ನಲ್ಲಿ ಎಂಎಂಬತ್ತಿ ಅಭಿಯಾಣ, ಮೇ ತಿಂಗಳಲ್ಲಿ ಸರ್ಕಾರದ 6 ನೇ ವರ್ಷಾಚರಣೆ, ಜೂನ್ ತಿಂಗಳಲ್ಲಿ ಬಿಹಾರ ವರ್ಚುಯಲ್ ಜಾಥಾ, ಜುಲೈನಲ್ಲಿ ರಾಜಸ್ಥಾನ ಸರ್ಕಾರದ ಪತನಕ್ಕೆ ಯತ್ನವು ಕೇಂದ್ರ ಸರ್ಕಾರದ ಆಧನೆಗಳಾಗಿವೆ ಎಂದು ರಾಹುಲ್ ಗಾಂಧೀ ವ್ಯಂಗ್ಯವಾಡಿದ್ದಾರೆ. कोरोना काल में सरकार की उपलब्धियां: ● फरवरी- नमस्ते ट्रंप● मार्च- MP में सरकार गिराई● अप्रैल- मोमबत्ती जलवाई● मई- सरकार की 6वीं सालगिरह● जून- बिहार में वर्चुअल रैली…

ಬೆಂಗಳೂರಿನಲ್ಲಿ ಮೊದಲ ಪ್ಲಾಸ್ಮಾ ಬ್ಯಾಂಕ್; ಪ್ಲಾಸ್ಮಾ ದಾನಕ್ಕೆ ಕರೆ

ಬೆಂಗಳೂರು: ದೇಶಾದ್ಯಂತ ಕೊರೋನಾ ವಕ್ಕರಿಸಿದ್ದು ಸೋಂಕಿತರ ಸಂಖ್ಯೆಯೂ ಹೆಚ್ಚುತ್ತಿದೆ. ಈ ವರೆಗೂ ಸಮರ್ಪಕ ಔಷಧ ವ್ಯವಸ್ಥೆ ಇಲ್ಲದ ಸಂದರ್ಭದಲ್ಲಿ ಕೋವಿಡ್-19 ಸೋಂಕಿತರಿಗೆ ಪ್ಲಾಸ್ಮಾ ಥೆರಪಿ ಚಿಕಿತ್ಸೆಯ ಫಲಾಫಲಗಳ ಬಗ್ಗೆ ಚರ್ಚೆ ನಡೆಯುತ್ತಿದೆ. ಹಲವೆಡೆ ಪ್ಲಾಸ್ಮಾ ಥೆರಪಿ ಚಿಕಿತ್ಸೆ ಫಲ ಕಂಡಿರವ ಹಿನ್ನೆಲೆಯಲ್ಲಿ ಕರ್ನಾಟಕವೂ ಈ ಚಿಕಿತ್ಸೆಯತ್ತ ಒಲವು ತೋರಿದೆ. ಕೋವಿಡ್ ಇಂಡಿಯಾ ಕ್ಯಾಂಪೈನ್ ಮತ್ತು ಹೆಚ್ ಸಿಜಿ ಆಸ್ಪತ್ರೆ ಸಹಯೋಗದಲ್ಲಿ ಮೊದಲ ಪ್ಲಾಸ್ಮಾ ಬ್ಯಾಂಕ್’ನ್ನು ಬೆಂಗಳೂರಿನಲ್ಲಿ ಆರಂಭಿಸಲಾಗಿದೆ. ಈ ಪ್ಲಾಸ್ಮಾ ಬ್ಯಾಂಕ್’ನ್ನು ಉಪ ಮುಖ್ಯಮಂತ್ರಿ ಡಾ.ಅಶ್ವಥ ನಾರಾಯಣ ಹೆಚ್ ಸಿಜಿ ಆಸ್ಪತ್ರೆಯಲ್ಲಿ ನಿನ್ನೆ ಉದ್ಘಾಟಿಸಿದರು. ಸಂಸದ ತೇಜಸ್ವಿ ಸೂರ್ಯ ಕೂಡಾ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಪ್ರಾಯೋಗಿಕ ಪರೀಕ್ಷೆಯಲ್ಲಿ ಪ್ಲಾಸ್ಮಾ ಥೆರಪಿ ಉತ್ತಮ ಫಲಿತಾಂಶ ನೀಡಿದೆ. ಹಾಗಾಗಿ ಕೊರೋನಾದಿಂದ ಗುಣಮುಖರಾದವರು ಪ್ಲಾಸ್ಮಾ ದಾನ ಮಾಡುವಂತೆ ಹೆಚ್ ಸಿಜಿ ಗ್ಲೋಬಲ್ ಆಸ್ಪತ್ರೆ ನಿರ್ದೇಶಕ ಡಾ.ವಿಶಾಲ್ ರಾವ್ ಮನವಿ ಮಾಡಿಕೊಂಡರು.

ಕರಾವಳಿಯಲ್ಲಿನ್ನು ಲಾಕ್‌ಡೌನ್ ಇಲ್ಲ; ಗುರುವಾರದಿಂದ ಸಹಜ ಸ್ಥಿತಿ

ಮಂಗಳೂರು: ರಾಜ್ಯದಲ್ಲಿ ಕೊರೋನಾ ವೈರಾಣು ಸೋಂಕು ತಡೆಯುವ ನಿಟ್ಟಿನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜಾರಿಗೊಳಿಸಲಾಗಿರುವ ಲಾಕ್‌ಡೌನ್ ವಿಸ್ತರಿಸದಿರಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಪ್ರಸ್ತುತ ಜಾರಿಯಲ್ಲಿರುವ ಲಾಕ್‌ಡೌನ್ ಗುರುವಾರ ಬೆಳಿಗ್ಗೆವರೆಗೆ ಜಾರಿಯಲ್ಲಿರಲಿದ್ದು, ಅನಂತರ ಮಂಗಳೂರು ಸಹಿತ ಕರಾವಳಿಯಲ್ಲಿ ವಾಣಿಜ್ಯ ಚಟುವಟಿಕೆಗಳಿಗೆ ಅಡ್ಡಿಯಿಲ್ಲ. ಈ ಸಂಬಂಧ ಟ್ವೀಟ್ ಮಾಡಿರುವ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ, ‘ಕರೋನಾ ನಿಯಂತ್ರಣಕ್ಕಾಗಿ ಒಂದು ವಾರಗಳ ಕಾಲ ಲಾಕ್ ಡೌನ್ ಅಲ್ಲಿ ಭಾಗವಹಿಸಿದ್ದಕ್ಕಾಗಿ ದಕ್ಷಿಣ ಕನ್ನಡ ಜಿಲ್ಲೆಯ ಸರ್ವರಿಗೂ ಧನ್ಯವಾದಗಳು ಎಂದಿದ್ದಾರೆ. 23ನೇ ತಾರೀಕು, ಗುರುವಾರ ಬೆಳಿಗ್ಗೆಯಿಂದ ಎಲ್ಲಾ ಅಂಗಡಿ ಮುಂಗಟ್ಟುಗಳು ತೆರೆಯಲಿವೆ. ಮಾಸ್ಕ್ ಧರಿಸೋಣ, ಸಾಮಾಜಿಕ ಅಂತರ ಕಾಯ್ದುಕೊಳ್ಳೋಣ ಎಂದು ಅವರು ಸಾರ್ವಜನಿಕರೊಂದಿಗೆ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಕರೋನಾ ನಿಯಂತ್ರಣಕ್ಕಾಗಿ ಒಂದು ವಾರಗಳ ಕಾಲ ಲಾಕ್ ಡೌನ್ ಅಲ್ಲಿ ಭಾಗವಹಿಸಿದ್ದಕ್ಕಾಗಿ ದಕ್ಷಿಣ ಕನ್ನಡ ಜಿಲ್ಲೆಯ ಸರ್ವರಿಗೂ ಧನ್ಯವಾದಗಳು. 23ನೇ ತಾರೀಕು,…

ಕರಾವಳಿಯಲ್ಲಿ 31ರಂದು ಬಕ್ರೀದ್; ತ್ಯಾಗ ಬಲಿದಾನಗಳ ಹಬ್ಬಕ್ಕೆ ಕ್ಷಣಗಣನೆ

ಮಂಗಳೂರು: ಮುಸ್ಲಿಮರ ಪವಿತ್ರ ಹಬ್ಬಗಳಲ್ಲೊಂದಾದ ಬಕ್ರೀದ್ ಆಚರಣೆಗೆ ಕ್ಷಣಗಣನೆ ಆರಂಭವಾಗಿದೆ. ರಾಜ್ಯದ ಕರಾವಳಿ ಭಾಗದಲ್ಲಿ ಈ ತಿಂಗಳ 31ರಂದು ತ್ಯಾಗ ಬಲಿದಾನಗಳ ಹಬ್ಬ ‘ಬಕ್ರೀದ್’ ಆಚರಣೆ ಮಾಡಲಾಗುವುದೆಂದು ಧಾರ್ಮಿಕ ಮುಖಂಡರು ಘೋಷಣೆ ಮಾಡಿದ್ದಾರೆ. ಈ ಕುರಿತಂತೆ ಮಂಗಳೂರಿನಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಖಾಝಿ ಶೈಖುನಾ ಅಲ್ ಹಾಜ್ ತ್ವಾಖಾ ಅಹ್ಮದ್ ಅಲ್ ಅಝ್ಹರಿ ಉಸ್ತಾದ್ ಅವರು ಘೋಷಣೆ ಮಾಡಿದ್ದಾರೆ. ದುಲ್ ಹಜ್ಜ್ ತಿಂಗಳ ಚಂದ್ರದರ್ಶನವಾಗಿದೆ. ಹಾಗಾಗಿ ಜುಲೈ 31 ಶುಕ್ರವಾರದಂದು ಈದುಲ್ ಅಝ್ ಹಾ (ಬಕ್ರಿದ್) ಆಚರಣೆಗೆ ಅವರ ಉಪಸ್ಥಿತಿಯಲ್ಲಿ ತೀರ್ಮಾನಿಸಲಾಗಿದೆ. ಈ ಬಗ್ಗೆ ಮಂಗಳೂರಿನ ಝೀನತ್ ಬಕ್ಷ್ ಮತ್ತು ಈದ್ಗಾ ಜುಮಾ ಮಸೀದಿಯ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಹನೀಫ್ ಹಾಜಿ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದು, ಜುಲೈ 31 ಶುಕ್ರವಾರದಂದು ಈದುಲ್ ಅಝ್ ಹಾ (ಬಕ್ರಿದ್) ಹಬ್ಬ ಆಚರಿಸಲು ಖಾಝಿ ಶೈಖುನಾ ಅಲ್ ಹಾಜ್ ತ್ವಾಖಾ ಅಹ್ಮದ್…