ಸಚಿವ ಶ್ರೀರಾಮುಲು ಬಗ್ಗೆ ಹೀಗೇಕೆ ಸಿಟ್ಟು? ಹೀಗೇಕೆ ಪ್ರತಿಕ್ರಿಯೆ?

ಬೆಂಗಳೂರು: ಕೊರೋನಾ ಸಂಕಟ ಕಾಲದಲ್ಲಿ ಆಡಳಿತ ಅತ್ಯಂತ ದುಸ್ತರ. ಅದರಲ್ಲೂ ಆರೋಗ್ಯ ಸಚಿವಾಲಯದ ಜವಾಬ್ಧಾರಿ ಬಹಳಷ್ಟು ಹೆಚ್ಸಿದೆ. ಆದರೆ ಬಹುತೇಕ ಆಸ್ಪತ್ರೆ ವೈದ್ಯರ ವಿರುದ್ಧ ಕೇಳಿಬರುತ್ತಿರುವ ಆರೋಪಗಳಿಂದಾಗಿ ಸಾರ್ವಜನಿಕರೂ ರೋಸಿಹೋಗಿದ್ದರೆ. ಈ ನಡುವೆ, ಬೆಂಗಳೂರಿನ ವಿಕ್ಟೋರಿಯ ಹಾಗೂ ವಾಣಿವಿಲಾಸ ಆಸ್ಪತ್ರೆಗಳ ವೈದ್ಯರು 100ನೇ ಕೋವಿಡ್ ಸೋಂಕಿತ ಗರ್ಭಿಣಿ‌ಗೆ ಯಶಸ್ವಿಯಾಗಿ ಹೆರಿಗೆ ಮಾಡಿಸಿದ್ದಾರೆ. ವೈದ್ಯರ ಈ ಸಾಧನೆ ಬಗ್ಗೆ ಟ್ವೀಟ್ ಮಾಡಿರುವ ಆರೋಗ್ಯ ಸಚಿವ ಶ್ರೀರಾಮುಲು, ಈ ಆಸ್ಪತ್ರೆಯ ವೈದ್ಯರು ವಿಶೇಷ ಮೈಲಿಗಲ್ಲು ಸಾಧಿಸಿದ್ದಾರೆ ಎಂದು ಬಣ್ಣಿಸಿದ್ದಾರೆ. ಈ ಎರಡೂ ಆಸ್ಪತ್ರೆಗಳ ವೈದ್ಯರು ಹಾಗೂ ಸಿಬ್ಬಂದಿಯ ಈ ಸಾಧನೆ‌ ನಿಜಕ್ಕೂ‌ ಶ್ಲಾಘನೀಯ ಎಂದವರು ಬಣ್ಣಿಸಿದ್ದಾರೆ. ಬೆಂಗಳೂರಿನ ವಿಕ್ಟೋರಿಯ ಹಾಗೂ ವಾಣಿವಿಲಾಸ ಆಸ್ಪತ್ರೆಗಳ ವೈದ್ಯರು 100 ನೇ ಕೋವಿಡ್ ಸೋಂಕಿತ ಗರ್ಭಿಣಿ‌ ಮಹಿಳೆಗೆ ಯಶಸ್ವಿಯಾಗಿ ಹೆರಿಗೆ ಮಾಡಿಸಿದ್ದಾರೆ. ಈ ಮೂಲಕ ವಿಶೇಷ ಮೈಲಿಗಲ್ಲು ಸಾಧಿಸಿದ್ದಾರೆ. ಎರಡೂ ಆಸ್ಪತ್ರೆಗಳ ವೈದ್ಯರು ಹಾಗೂ…

100 ನೇ ಕೋವಿಡ್ ಸೋಂಕಿತ ಗರ್ಭಿಣಿ‌ಗೆ ಯಶಸ್ವಿಯಾಗಿ ಹೆರಿಗೆ

ಬೆಂಗಳೂರು: ಕೊರೋನಾ ವೈರಾಣು ಹಾವಳಿ ಇಡೀ ನಾಡನ್ನು ತತ್ತರಿಸುವಂತೆ ಮಾಡಿದ್ದು, ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಕಾರಣದಿಂದಾಗಿ ಬಹುತೇಕ ಆಸ್ಪತ್ರೆಗಳಲ್ಲಿ ಸಾಮಾನ್ಯ ರೋಗಿಗಳಿಗೆ ಸರಿಯಾದ ಚಿಕಿತ್ಸೆ ಸಿಗುತ್ತಿಲ್ಲ. ಅದರಲ್ಲೂ ಗರ್ಭಿಣಿಯರ ಪರದಾಟ ಹೇಳತೀರದು. ಈ ಸಂಕಟ ಕಾಲದಲ್ಲೂ ಬೆಂಗಳೂರಿನ ವಿಕ್ಟೋರಿಯ ಹಾಗೂ ವಾಣಿವಿಲಾಸ ಆಸ್ಪತ್ರೆಗಳ ವೈದ್ಯರು 100ನೇ ಕೋವಿಡ್ ಸೋಂಕಿತ ಗರ್ಭಿಣಿಗೆ ಯಶಸ್ವಿಯಾಗಿ ಹೆರಿಗೆ ಮಾಡಿಸಿದ್ದಾರೆ. ಈ ಮೂಲಕ ಈ ಆಸ್ಪತ್ರೆ ವೈದ್ಯರು ದೇಶದ ಗಮನಸೆಳೆದಿದ್ದಾರೆ. ವೈದ್ಯರ ಈ ಸಾಧನೆ ಬಗ್ಗೆ ಟ್ವೀಟ್ ಮಾಡಿರುವ ಆರೋಗ್ಯ ಸಚಿವ ಶ್ರೀರಾಮುಲು, ಈ ಆಸ್ಪತ್ರೆಯ ವೈದ್ಯರು ವಿಶೇಷ ಮೈಲಿಗಲ್ಲು ಸಾಧಿಸಿದ್ದಾರೆ ಎಂದು ಬಣ್ಣಿಸಿದ್ದಾರೆ. ಈ ಎರಡೂ ಆಸ್ಪತ್ರೆಗಳ ವೈದ್ಯರು ಹಾಗೂ ಸಿಬ್ಬಂದಿಯ ಈ ಸಾಧನೆ‌ ನಿಜಕ್ಕೂ‌ ಶ್ಲಾಘನೀಯ ಎಂದವರು ಬಣ್ಣಿಸಿದ್ದಾರೆ. ಬೆಂಗಳೂರಿನ ವಿಕ್ಟೋರಿಯ ಹಾಗೂ ವಾಣಿವಿಲಾಸ ಆಸ್ಪತ್ರೆಗಳ ವೈದ್ಯರು 100 ನೇ ಕೋವಿಡ್ ಸೋಂಕಿತ ಗರ್ಭಿಣಿ‌ ಮಹಿಳೆಗೆ ಯಶಸ್ವಿಯಾಗಿ ಹೆರಿಗೆ ಮಾಡಿಸಿದ್ದಾರೆ.…

ನಾಡೋಜ ಡಾ.ಸುಭದ್ರಮ್ಮ ಮನ್ಸೂರು ನಿಧನಕ್ಕೆ ಮಹಿಳಾ ಆಯೋಗದ ಅಧ್ಯಕ್ಷೆ ಪ್ರಮೀಳಾ ನಾಯ್ಡು ಸಂತಾಪ

ಕನ್ನಡ ರಂಗಭೂಮಿಯ ಹಿರಿಯ ಕಲಾವಿದೆ ಹಾಗೂ ಸಂಗೀತ ಲೋಕದ ಅನರ್ಘ್ಯ ರತ್ನ, ನಾಡೋಜ ಪ್ರಶಸ್ತಿ ಪುರಸ್ಕೃತ, ಡಾ|| ಸುಭದ್ರಮ್ಮ ಮನ್ಸೂರು ನಿಧನಕ್ಕೆ ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಆರ್. ಪ್ರಮೀಳಾ ನಾಯ್ಡು ಸಂತಾಪ ವ್ಯಕ್ತಪಡಿಸಿದ್ದಾರೆ. ಡಾ. ಸುಭದ್ರಮ್ಮ ಮನ್ಸೂರು ಅವರ ಆತ್ಮಸ್ಥೈರ್ಯ ಮತ್ತು ಆತ್ಮಭಿಮಾನ‌ ಇಡೀ ಸ್ತ್ರೀ ಸಮಾಜವೇ ಅಭಿಮಾನ ಪಡುವಂತದ್ದು. ಇಡೀ ಸ್ತ್ರೀ ಸಮುದಾಯಕ್ಕೆ ಅವರು ಆದರ್ಶಪ್ರಾಯರಾಗಿದ್ದು ಅವರ ಕಲಾ ಸೇವೆ ಅಪಾರ ಎಂದು ಪ್ರಮೀಳಾ ನಾಯ್ಡು ಸ್ಮರಿಸಿದ್ದಾರೆ. ಡಾ.ಸುಭದ್ರಮ್ಮ ಮನ್ಸೂರು ಇವರ ಅಭಿನಯಕ್ಕೆ ಅನೇಕ ಪ್ರತಿಷ್ಟಿತ ಪ್ರಶಸ್ತಿಗಳು ಇವರಿಗೆ ಸಂದಿದ್ದು, ರಂಗಭೂಮಿಯ ‘ಅಭಿನಯ ಶಾರದೆ’ ಎಂದೇ ಖ್ಯಾತರಾಗಿದ್ದರು. ಅವರ ಆತ್ಮಕ್ಕೆ ಶಾಂತಿ ಸಿಗಲಿ ಮತ್ತು ಭಗವಂತ ಅವರ ಕುಟುಂಬ ವರ್ಗಕ್ಕೆ ದುಃಖವನ್ನು ಭರಿಸುವ ಶಕ್ತಿ ನೀಡಲಿ ಎಂದು ಆರ್. ಪ್ರಮೀಳಾ ನಾಯ್ಡು ಪ್ರಾರ್ಥಿಸಿದ್ದಾರೆ.

ಚೀನಾ ತಕರಾರಿಗೆ ಆಕ್ಷೇಪ; ಗಡಿ ಪ್ರದೇಶದಲ್ಲಿ ರಾಜನಾಥ್ ಸಿಂಗ್ ಪರಿಶೀಲನೆ

ಲೇಹ್: ಭಾರತ ವಿರುದ್ಧ ರಹಸ್ಯ ಸಮರ ಸಾರಿರುವ ಚೀನಾ ಲಡಾಕ್ ಗಡಿ ಭಾಗ, ಲೇಹ್ ಸುತ್ತಮುತ್ತ ಅತಿಕ್ರಮಣ ಯತ್ನ ನಡೆಸಿ ಭಾರತೀಯ ಯೋಧರ ಕೆಂಗಣ್ಣಿಗೆ ಗುರಿಯಾಗಿದೆ. ಗುಲ್ವಾನ್ ಕಣಿವೆಯಲ್ಲಿ ಇತ್ತೀಚಿಗೆ ನಡೆದ ಸಂಘರ್ಷದಲ್ಲಿ 20 ಕ್ಕೂ ಹೆಚ್ಚು ಮಂದಿ ಭಾರತೀಯ ಯೋಧರು ಹುತಾತರಾಗಿದ್ದು ಆ ಘಟನೆ ನಂತರ ಭಾರತ ಸೇನೆ ಗಡಿ ಭಾಗದಲ್ಲಿ ಸರ್ವ ಸನ್ನದ್ಧವಾಗಿದೆ. ಈ ನಡುವೆ ಭಾರತ-ಚೀನಾ ಗಡಿ ಭಾಗದ ಪ್ರದೇಶಗಳಿಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಇಂದು ಭೇಟಿ ನೀಡಿದ್ದಾರೆ. ಲಡಾಕ್ ಮತ್ತು ಜಮ್ಮು-ಕಾಶ್ಮೀರಕ್ಕೆ ಎರಡು ದಿನಗಳ ಭೇಟಿ ಕೈಗೊಂಡಿರುವ ಅವರು ಸೇನಾ ಶಿಬಿರಗಳಿಗೆ ತೆರಳಿ ಪರಿಸ್ಥಿತಿ ಅವಲೋಕಿಸಿದರು. ದೇಶ ರಕ್ಷಣೆಯ ಕಾರ್ಯದಲ್ಲಿ ತೊಡಗಿರುವ ಯೋಧರಿಗೆ ರಕ್ಷಣಾ ಸಚಿವರು ಧೈರ್ಯ ತುಂಬಿದರು. ರಕ್ಷಣಾ ಪಡೆ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಮತ್ತು ಸೇನಾ ಮುಖ್ಯಸ್ಥ ಎಂ ಎಂ ನಾರವಾನೆ ಕೂಡಾ ಈ ಸಂದರ್ಭದಲ್ಲಿ…

ಆ್ಯಪ್ ಬ್ಯಾನ್’ಗೆ ಚೀನಾ ಕಂಪೆನಿಗಳ ಎದಿರೇಟು; ಭಾರತ ಮೂಲದ ಉದ್ಯೋಗಿಗಳ ವಜಾ

ದೆಹಲಿ: ಲಡಾಕ್ ಗಡಿ ಭಾಗ, ಗಲ್ವಾನ್ ಸಂಘರ್ಷದ ನಂತರ ಚೀನಾ ವಿರುದ್ಧ ಡಿಜಿಟಲ್ ಸಮರ ಕೈಗೊಂಡಿರುವ ಭಾರತ ಚೀನಾ ಮೂಲದ ಟಿಕ್ ಟಾಕ್ ಸೇರಿದಂತೆ 59 ಆ್ಯಪ್’ಗಳನ್ನು ನಿಷೇಧಿಸಿದೆ. ಮೋದಿ ಸರ್ಕಾರದ ಈ ಹೊಡೆತದಿಂದಾಗಿ ಚೀನಾ ಮೂಲದ ಕಂಪೆನಿಗಳಲ್ಲಿ ನಡುಕ ಉಂಟಾಗಿದೆಯಾದರೂ ಡ್ರಾಗನ್ ರಾಷ್ಟ್ರ ತನ್ನ ಹಳೆಯ ಚಾಳಿಯನ್ನು ಬಿಟ್ಟಿಲ್ಲ. ಇದೀಗ ಭಾರತ ಮೂಲದ ಉದ್ಯೋಗಿಗಳತ್ತ ಅಸ್ತ್ರ ಪ್ರಯೋಗಿಸಲು ಚೀನಾ ಪಿತೂರಿ ನಡೆಸಿದೆ ಎನ್ನಲಾಗಿದೆ. ಕೋಟ್ಯಂತರ ನಷ್ಟ ಅನುಭವಿಸುತ್ತಿರುವ ಚೀನಾ ಸಂಸ್ಥೆಗಳು ಇದೀಗ ಕಾಸ್ಟ್ ಕಟ್ಟಿಂಗ್ ನೆಪದಲ್ಲಿ ಭಾರತ ಮೂಲದ ಉದ್ಯೋಗಿಗಳನ್ನು ಕೆಲಸದಿಂದ ವಜಾ ಮಾಡಲಾರಂಭಿಸಿದೆ. ಯುಸಿ ವೆಬ್ ಬ್ರೌಸರ್ ನಿಷೇಧದ ಕಾರಣಕ್ಕಾಗಿ ಆಲಿಬಾಬ ಒಡೆತನದ ಕಂಪೆನಿಗಳು ಭಾರತದಲ್ಲಿರುವ ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಿದೆ. ಯುಸಿ ಬ್ರೌಸರ್ ಮತ್ತು ವಿಮೇಟ್ ವಿಡಿಯೋ ಆ್ಯಪ್ ಜುಲೈ 15ರಂದು ಉದ್ಯೋಗಗಳಿಗೆ ಕತ್ತರಿ ಹಾಕುವ ಕುರಿತು ನಿರ್ಧಾರ ಕೈಗೊಂಡಿದೆ ಎಂದು ಸುದ್ದಿ ಸಂಸ್ಥೆಗಳು…

‘ದೇವರೇ ಕಾಪಾಡಬೇಕು’ ಹೇಳಿಕೆಗೆ ಸಚಿವ ಶ್ರೀರಾಮುಲು ಸ್ಪಷ್ಟನೆ

ಬೆಂಗಳೂರು: ಕೊರೋನಾ ವಿಚಾರದಲ್ಲಿ ರಾಜ್ಯವನ್ನು ದೇವರೇ ಕಾಪಾಡಬೇಕು ಎಂದು ಆರೋಗ್ಯ ಸಚಿವ ಶ್ರೀರಾಮುಲು ಹೇಳಿಕೆ ನೀಡಿದ್ದಾರೆನ್ನಲಾದ ವಿಚಾರ ಮುಂದಿಟ್ಟು ಕಾಂಗ್ರೆಸ್ ನಾಯಕರು ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಸಚಿವ ಶ್ರೀರಾಮುಲು, ಕೆಪಿಸಿಸಿ ಅಧ್ಯಕ್ಷರಾದ ಡಿ ಕೆ ಶಿವಕುಮಾರ್ ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿದ್ದಾರೆ ಎಂದು ಹೇಳಿದ್ದಾರೆ. ಈ ಕುರಿತಂತೆ ಟ್ವೀಟ್ ಮಾಡಿರುವ ಶ್ರೀರಾಮುಲು, ಸೋಂಕು ಹೆಚ್ಚಾಗಲು, ಸರ್ಕಾರದ ನಿರ್ಲಕ್ಷ್ಯ, ಮಂತ್ರಿಗಳ ಬೇಜವಾಬ್ದಾರಿ, ಸರ್ಕಾರದಲ್ಲಿ ಹೊಂದಾಣಿಕೆ ಇಲ್ಲ ಎಂಬ ಪ್ರತಿಪಕ್ಷಗಳ ಆರೋಪಗಳಿಗೆ ಉತ್ತರಿಸುವ ಸಂದರ್ಭದಲ್ಲಿ, ಆರೋಪಗಳು ‘ಸತ್ಯಕ್ಕೆ ದೂರವಾದದ್ದು’, ‘ಸೋಂಕು ತಡೆಯಲು ಜನರಲ್ಲಿ ಜಾಗೃತಿ ಬರಬೇಕು, ಸೋಂಕು ತಡೆಯುವಲ್ಲಿ ಇದು ಅತ್ಯಂತ ಮಹತ್ವದ ಪಾತ್ರ ವಹಿಸುತ್ತದೆ. ಇಲ್ಲಿ ಎಡವಿದರೆ ಪರಿಸ್ಥಿತಿ ಕ್ಲಿಷ್ಟಕರ’ ಎಂದು ಹೇಳುವ ಸಂರ್ಭದಲ್ಲಿ, ‘ಇನ್ನೂ ಎಡವಿದರೆ ದೇವರೇ ಕಾಪಾಡಬೇಕು’ ಎಂದು ಹೇಳಿದ ಎಚ್ಚರಿಕೆಯ ಮಾತುಗಳು ಅವು ಎಂದು ಸ್ಪಷ್ಟನೆ ನೀಡಿದ್ದಾರೆ. ಸರ್ಕಾರ, ನಮ್ಮ ಮುಖ್ಯಮಂತ್ರಿಗಳಾದ…

ಸರ್ಕಾರ ರಾಜೀನಾಮೆ ನೀಡಲಿ, ರಾಜ್ಯಪಾಲರ ಆಳ್ವಿಕೆ ಜಾರಿಗೆ ಬರಲಿ; ಡಿ.ಕೆ.ಶಿ. ಒತ್ತಾಯ

ಬೆಂಗಳೂರು: ಕೊರೋನಾ ವಿಚಾರದಲ್ಲಿ ರಾಜ್ಯವನ್ನು ದೇವರೇ ಕಾಪಾಡಬೇಕು ಎಂದು ಆರೋಗ್ಯ ಸಚಿವರು ನೀಡಿದ್ದಾರೆನ್ನಲಾದ ವಿಚಾರ ರಾಜ್ಯ ರಾಜಕೀಯದಲ್ಲಿ ಭಾರೀ ಚರ್ಚೆಗೆ ಎಡೆಮಾಡಿಕೊಟ್ಟಿದೆ. ಈ ಹೇಳಿಕೆಯನ್ನು ಮುಂದಿಟ್ಟು ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳುತ್ತಿರುವ ಪ್ರತಿಪಕ್ಷದ ನಾಯಕರು ಸಚಿವರ ರಾಜೀನಾಮೆಗೆ ಪಟ್ಟು ಹಿಡಿದಿದ್ದಾರೆ. ಈ ಕುರಿತಂತೆ ಹೇಳಿಕೆ ಬಿಡುಗಡೆ ಮಾಡಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಕೊರೋನಾ ಸೋಂಕಿನ ಪರಿಸ್ಥಿತಿಯನ್ನು ನಿರ್ವಹಿಸಲು ಸಾಧ್ಯವಿಲ್ಲ, ದೇವರೇ ನಮ್ಮನ್ನು ಕಾಪಾಡಬೇಕು ಎಂದು ಒಪ್ಪಿಕೊಳ್ಳುವವರು ಅಧಿಕಾರದಲ್ಲಿ ಯಾಕಿರಬೇಕು? ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡಲಿ ಎಂದು ವ್ಯಂಗ್ಯವಾಡಿದ್ದಾರೆ. ಅವರು ಒಂದು ಕ್ಷಣವೂ ವೇಸ್ಟ್ ಮಾಡದೆ ರಾಜೀನಾಮೆ ನೀಡಲಿ, ರಾಜ್ಯಪಾಲರ ಆಳ್ವಿಕೆ ಜಾರಿಗೆ ಬರಲಿ ಎಂದು ಡಿ.ಕೆ. ಶಿವಕುಮಾರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. Statements by Ministers @sriramulubjp and @mla_sudhakar is leading to panic among people.@BSYBJP govt has no moral right to remain…

ಆರೋಗ್ಯ ಸಚಿವರ ಮಗನನ್ನು ಬಂಧಿಸಿದ್ದ ಮಹಿಳಾ ಪೊಲೀಸ್ ರಾಜೀನಾಮೆ? ಹಿರಿಯ ಅಧಿಕಾರಿಗಳ ಸ್ಪಷ್ಟನೆ ಏನು ಗೊತ್ತಾ?

ಮೋದಿಯ ನಾಡು ಕುತೂಹಲಕಾರಿ ಬೆಳವಣಿಗೆಗೆ ಸಾಕ್ಷಿಯಾಗಿದೆ. ಲಾಕ್’ಡೌನ್ ನಿಯಮ ಉಲ್ಲಂಘಿಸಿದ್ದ ಸಚಿವರ ಮಗನನ್ನು ಬಂಧಿಸಿದ್ದ ಮಹಿಳಾ ಪೊಲೀಸ್ ಕೆಲಸಕ್ಕೇ ರಾಜೀನಾಮೆ ನೀಡಿದ ಅಚ್ಚರಿಯ ಘಟನೆ ಗುಜರಾತ್’ನಲ್ಲಿ ನಡೆದಿದೆ. ಗುಜರಾತ್ ನ ಆರೋಗ್ಯ ಸಚಿವರ ಪುತ್ರ ಪ್ರಕಾಶ್ ಕನಾನಿ ಹಾಗೂ ಇಬ್ಬರು ಸ್ನೇಹಿತರನ್ನು ಲಾಕ್’ಡೌನ್ ನಿಯಮ ಉಲಂಘನೆ ಆರೋಪದಲ್ಲಿ ಮಹಿಳಾ ಪೊಲೀಸ್ ಪೇದೆ ಸುನಿತಾ ಯಾದವ್ ಬಂಧಿಸಿದ್ದರು. ಸೂರತ್ ನಗರದಲ್ಲಿನ ಈ ಪ್ರಕರಣ ದೇಶವ್ಯಾಪಿ ಸುದ್ದಿಯಾಗಿ, ಮಹಿಳಾ ಪೊಲೀಸ್ ಅವರ ದಿಟ್ಟ ನಡೆ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗಿತ್ತು. ಆದರೆ ಇದಾದ ಕೆಲವೇ ದಿನಗಳಲ್ಲಿ ಅವರು ರಾಜೀನಾಮೆ ನೀಡಿರುವುದಾಗಿ ಹೇಳಿಕೊಂಡಿದ್ದಾರೆ. ಈ ಕುರಿತಂತೆ ಮಾಧ್ಯಮಗಳಲ್ಲಿ ಸುದ್ದಿ ಬಿತ್ತರವಾಗಿರುವಂತೆಯೇ ಪ್ರತಿಕ್ರಿಯೆ ನೀಡಿರುವ ಹಿರಿಯ ಅಧಿಕಾರಿಗಳು ಈ ರೀತಿಯ ಬೆಳವಣಿಗೆ ನಡೆದಿಲ್ಲ ಎಂದಿದ್ದಾರೆ. ಇದನ್ನೂ ಓದಿ.. ಭಾರೀ ಮಳೆ; ತಿಂಗಳ ಹಿಂದೆ ಉದ್ಘಾಟನೆಯಾದ  ಸೇತುವೆ ಕುಸಿತ

ಭಾರೀ ಮಳೆ; ಕುಸಿದ ನೂತನ ಸತ್ತರ್​ಘಾಟ್ ಸೇತುವೆ

ದೆಹಲಿ; ಸುಮಾರು 8 ವರ್ಷಗಳಿಂದ 263.47 ಕೋಟಿ ವೆಚ್ಚದಲ್ಲಿ ಕಟ್ಟಲಾಗಿದ್ದ ಸತ್ತರ್​ಘಾಟ್ ಬ್ರಿಡ್ಜ್. ಒಂದೇ ದಿನದ ಮಾಯೆಯಲ್ಲಿ ಛಿದ್ರ. ಬಿಹಾರದಲ್ಲಿ ಗೋಪಾಲ್​ಗಂಜ್ ಮತ್ತು ಈಸ್ಟ್ ಚಂಪರನ್ ಭಾಗಗಳಿಗೆ ಕೊಂಡಿಯಾಗಿದ್ದ 1.4 ಕಿಮೀ ಉದ್ದದ ಸೇತುವೆಯ ಒಂದು ಭಾಗ ಭಾರೀ ಮಳೆಯಿಂದಾಗಿ ಕುಸಿದುಬಿದ್ದಿದೆ. ಗಂಡಕ ನದಿಯ ಮೇಲೆ ಕಟ್ಟಲಾಗಿರುವ ಈ ಸೇತುವೆ ಜೂನ್ 16ರಂದು ಉದ್ಘಾಟನೆಯಾಗಿತ್ತು. ಈ ಸೇತುವೆ ಭಾರೀ ಮಳೆಯಿಂದಾಗಿ ಈ ಸೇತುವೆ ಬುಧವಾರ ಕುಸಿದಿದೆ. ಬಿಹಾರದಲ್ಲಿ ವ್ಯಾಪಕ ಮಳೆಯಿಂದಾಗಿ ಅವಾಂತರವೇ ಸೃಷ್ಟಿಯಾಗಿದೆ. ಗಂಡಕ ನದಿಯ ನೀರಿನ ಮಟ್ಟ ಹೆಚ್ಚಾಗಿದ್ದು ಈ ದುರಂತ ಸಂಭವಿಸಿದೆ ಎಂದು ಹೇಳಲಾಗುತ್ತಿದೆ.

ರಾಜಸ್ತಾನ ರಾಜಕೀಯದ ಕ್ಲೈಮ್ಯಾಕ್ಸ್; ಸ್ಪೀಕರ್ ನಿರ್ಧಾರದ ಕೌತುಕ

ದೆಹಲಿ: ರಾಜಸ್ಥಾನ ರಾಜಕೀಯ ಚಿತ್ರ ವಿಚಿತ್ರ ತಿರುವು ಪಡೆಯುತ್ತಿದೆ. ರಾಜಕೀಯ ಬಿಕ್ಕಟ್ಟಿನ ಮಧ್ಯೆ ಶಾಸಕರ ಅನರ್ಹತೆ ವಿಚಾರದಲ್ಲಿ ಸ್ಪೀಕರ್ ಅಧಿಕಾರ ಬಗ್ಗೆ ಭಾರೀ ಚರ್ಚೆ ಸಾಗಿದೆ. ಬಂಡಾಯ ಕಾಗ್ರೇಸ್ ಶಾಸಕರನ್ನು ಅನರ್ಹಗೊಳಿಸಬೇಕೆಂದು ಕೋರಿ ಪಕ್ಷದ ಶಾಸಕರು ಸ್ಪೀಕರ್’ಗೆ ಮನವಿ ಸಲ್ಲಿಸುವ ಮೂಲಕ ಆಡಳಿತಾರೂಢ ಕಾಂಗ್ರೆಸ್ ರಾಜಸ್ಥಾನ ರಾಜಕೀಯ ಬೆಳವಣಿಗೆಯನ್ನು ರೋಚಕ ಘಟ್ಟಕ್ಕೆ ಕೊಂಡೊಯ್ದಿದೆ. ಬಂಡಾಯ ವಿದ್ಯಮಾನದಿಂದಾಗಿ ಸರ್ಕಾರವನ್ನು ಉಳಿಸಿಕೊಳ್ಳಲು ಕಾಂಗ್ರೆಸ್ ಮುಖಂಡರು ಭಿನ್ನಮತೀಯ ಶಾಸಕರ ವಿರುದ್ಧ ಅನರ್ಹತೆಯ ಅಸ್ತ್ರ ಪ್ರಯೋಗಿಸಲು ಪ್ರಯತ್ನಿಸಿದೆ. ಕರ್ನಾಟಕದಲ್ಲಿ ಕುಮಾರಸ್ವಾಮಿ ಸರ್ಕಾರದ ವಿರುದ್ಧ ಮಿತ್ರ ಪಕ್ಷದ ಶಕರು ಬಂಡಾಯವೆದ್ದಾಗ ಪ್ರಯೋಗಿಸಿದ ರೀತಿಯಲ್ಲೆ ರಾಜಸ್ಥಾನ ಕಾಗ್ರೇಸ್ ಮುಖಂಡರು ಪ್ರಯತ್ನ ಮುಂದುವರಿಸಿದ್ದಾರೆ. ಸಚಿನ್ ಪೈಲಟ್ ಹಾಗೂ ಇತರ 18 ಶಾಸಕರನ್ನು ಅನರ್ಹಗೊಳಿಸಲು ಕಾಂಗ್ರೆಸ್ ಪಕ್ಷ ಸ್ಪೀಕರ್ ಅವರನ್ನು ಕೋರಿದ್ದು, ಈ ಸಂಬಂಧ ನೋಟೀಸ್ ನೀಡಿರುವ ಸ್ಪೀಕರ್ ಬಂಡಾಯ ಶಾಸಕರಿಗೆ ನೋಟಿಸ್ ನೀಡಿ ಮೂರು ದಿನಗೊಳಗೆ ಪ್ರತಿಕ್ರಿಯೆ…