ರಾಜ್ಯದಲ್ಲಿ 3176 ಹೊಸ ಕೊರೋನಾ ಕೇಸ್; ಬೆಂಗಳೂರಿನಲ್ಲಿ 1975 ಪ್ರಕರಣ

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ವೈರಸ್ ಸೋಂಕಿನ ಪ್ರಮಾಣ ಮತ್ತಷ್ಟು ಹೆಚ್ಚಳವಾಗಿದೆ. ಸೋಂಕು ಅಷ್ಟೇ ಅಲ್ಲ ಮರಣ ಪ್ರಮಾಣವೂ ಹೆಚ್ಚಾಗಿದೆ. ಈ ಕುರಿತಂತೆ ರಾಜ್ಯ ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ಹೆಲ್ತ್ ಬುಲೆಟಿನ್ ಆತಂಕಕಾರಿ ಸಂಗತಿಯನ್ನು ಬಹಿರಂಗಪಡಿಸಿದೆ. ಬುಧವಾರ ಒಂದೇ ದಿನ ಬರೋಬ್ಬರಿ 87 ಮಂದಿ ಮಹಾಮಾರಿಗೆ ಬಲಿಯಾಗಿದ್ದರೆ, ರಾಜ್ಯದಲ್ಲಿ  3176 ಮಂದಿಗೆ ಪಾಸಿಟಿವ್ ದೃಢಪಟ್ಟಿದೆ. ಇದರೊಂದಿಗೆ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 47,253ಕ್ಕೆ ಏರಿಕೆಯಾಗಿದೆ. ಬೆಂಗಳೂರು ನಗರವೊಂದರಲ್ಲೆ ಅತಿ ಹೆಚ್ಚು ಅಂದರೆ 1975 ಪ್ರಕರಣಗಳು ವರದಿಯಾಗಿದ್ದು, ಧಾರವಾಡ ಜಿಲ್ಲೆಯಲ್ಲಿ 139, ಬಳ್ಳಾರಿ 136, ಮೈಸೂರು ಜಿಲ್ಲೆಯಲ್ಲಿ 99, ವಿಜಯಪುರದಲ್ಲಿ 80, ದಕ್ಷಿಣಕನ್ನಡದಲ್ಲಿ 86, ಕಲಬುರಗಿಯಲ್ಲಿ 67, ಉಡುಪಿ ಜಿಲ್ಲೆಯಲ್ಲಿ 52 ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ ಎಂದು ಹೆಲ್ತ್ ಬುಲೆಟಿನ್ ಹೇಳಿದೆ. ಇದೇ ವೇಳೆ, ರಾಜ್ಯದಲ್ಲಿ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 929ಕ್ಕೆ ಏರಿಕೆಯಾಗಿದೆ. ಇಂದಿನ ಪತ್ರಿಕಾ ಪ್ರಕಟಣೆ 15/07/2020.ಸಂಪೂರ್ಣ ಪತ್ರಿಕಾ…

ನಟ ಧ್ರುವ ಸರ್ಜಾ ಹಾಗೂ ಪತ್ನಿಗೆ ಕೊರೋನಾ ಸೋಂಕು

ಬೆಂಗಳೂರು: ನಟ ನಟ ಧ್ರುವ ಸರ್ಜಾ ಹಾಗೂ ಪತ್ನಿಗೆ ಕೊರೋನಾ ಸೋಂಕಿಗೊಳಗಾಗಿದ್ದಾರೆ. ಸೋಂಕಿತ ಈ ತಾರಾ ಕುಟುಂಬ ಇದೀಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಕುರಿತಂತೆ ಸ್ವತಃ ನಟ ಧ್ರುವ ಸರ್ಜಾ ತಮ್ಮ ಟ್ವಿಟ್ಟರ್’ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ನಮ್ಮೊಡನೆ ಸಂಪರ್ಕಕ್ಕೆ ಬಂದವರೂ ಸಹ ಕೊರೋನಾ ಟೆಸ್ಟ್ ಮಾಡಿಸಿಕೊಳ್ಳಿ ಎಂದು ಅವರು ಮನವಿ ಮಾಡಿದ್ದಾರೆ. My wife and I have both been tested positive for COVID-19 with mild symptoms and hence chosen to get ourselves hospitalised. I’m sure we’ll be back all fine! All those who were in close proximity with us please get yourselves tested and remain safe.ಜೈ ಆಂಜನೇಯ 💪🏼 — Dhruva Sarja (@DhruvaSarja) July 15,…

ಕೊರೋನಾ ವೈರಾಣು ಹಾವಳಿ; ಸೋಂಕಿಗೆ ಹುಬ್ಬಳ್ಳಿಯ ಎಎಸ್ಐ ಬಲಿ

ಹುಬ್ಬಳ್ಳಿ: ರಾಜ್ಯದಲ್ಲಿ ಕೊರೋನಾ ವೈರಾಣು ಹಾವಳಿ ಮುಂದುವರಿದಿದ್ದು ಅನೇಕರು ಸೋಂಕಿಗೆ ಬಲಿಯಾಗಿದ್ದಾರೆ. ಈ ಪೈಕಿ ಹಲವರು ಪೊಲೀಸರೂ ಸೋಂಕು ತಗುಲಿ ಸಾವನ್ನಪಿರುವ ಪ್ರಕರಣಗಳೂ ವರದಿಯಾಗುತ್ತಿವೆ. ಈ ನಡುವೆ ಕರ್ತವ್ಯದಲ್ಲಿದ್ದಾಗ ಕೊರೋನಾ ಸೋಂಕು ತಗುಲಿದ್ದ ಧಾರವಾಡ ಜಿಲ್ಲೆಯ ಪೊಲೀಸ್ ಅಧಿಕಾರಿಯೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಹುಬ್ಬಳ್ಳಿಯ ವಿದ್ಯಾನಗರ ಠಾಣೆಯ ಎಎಸ್ಐ ಬುಧವಾರ ಬೆಳಿಗ್ಗೆ ಕೊನೆಯುಸಿರೆಳೆದಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಹಾವೇರಿ ಮೂಲದ ಈ ಅಧಿಕಾರಿಗೆ ಜುಲೈ 7ರಂದು ಅವರಿಗೆ ಸೋಂಕು ಇರುವುದು ದೃಢಪಟ್ಟಿತ್ತು. ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದರೂ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.

‘ಮ್ಯಾಂಗೋ ಫ್ರೂಟಿ’ ಮಾಡೋ ವಿಧಾನ ಬಲು ಸುಲಭ;

ಮಾವಿನ ಹಣ್ಣು ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.. ಸಿಹಿಯಾದ ರುಚಿಯಾದ ಮಾವಿನ ಹಣ್ಣಿನಿಂದ ಜ್ಯುಸ್ ಅಷ್ಟೇ ಅಲ್ಲ, ಹಲವಾರು ಖಾದ್ಯಗಳನ್ನೂ ತಯಾರಿಸಬಹುದು. ಅದರಲ್ಲೂ ‘ಮ್ಯಾಂಗೋ ಫ್ರೂಟಿ’ ಅಂದ್ರೆ ಎಲ್ಲರ ಬಾಯಲ್ಲೂ ನೀರೂರಿಸುತ್ತೆ. ಈ ‘ಮ್ಯಾಂಗೋ ಫ್ರೂಟಿ’ ಮಾಡೋ ವಿಧಾನವೂ ಬಲು ಸುಲಭ. ಒಂದಿಷ್ಟು ಸಮಯ ಹೊಂದಿಸಿಕೊಂಡು ಮನೆಯಲ್ಲೇ ‘ಮ್ಯಾಂಗೋ ಫ್ರೂಟಿ’ ತಯಾರಿಸಿ ರುಚಿ ಸವಿಯಿರಿ.. ಇದನ್ನೂ ಮಾಡಿ ರುಚಿ ನೋಡಿ.. ನೈಸರ್ಗಿಕ ಸೊಪ್ಪಿನ ‘ಪತ್ರೊಡೆ..’ ರುಚಿಯಷ್ಟೇ ಅಲ್ಲ ಆರೋಗ್ಯಪೂರ್ಣ ಖಾದ್ಯ  

ಕೊರೋನಾ ಹಗರಣ ಆರೋಪದ ಸುಳಿಯಲ್ಲಿ ಬಿಎಸ್‌ವೈ ಸರ್ಕಾರ; ಸಮರಕ್ಕೆ ಸಿದ್ದರಾಮಯ್ಯ ಮುನ್ನುಡಿ

ಬೆಂಗಳೂರು: ಕೊರೋನಾ ಸಂಕಟ ಕಾಲದಲ್ಲಿ ರಾಜ್ಯ ಸರ್ಕಾರ ಭ್ರಷ್ಟಾಚಾರದಲ್ಲಿ ತೊಡಗಿದೆಯೇ? ಲಾಕ್’ಡೌನ್ ಸಂದರ್ಭದಲ್ಲಿ ಆಹಾರ ಕಿಟ್ ವಿತರಣೆಯಲ್ಲಿ ಅವ್ಯವಹಾರ ನಡೆದಿದೆಯೇ? ಕೊರೊನಾ ನಿಯಂತ್ರಣಕ್ಕಾಗಿ ಸಾಮಗ್ರಿ ಖರೀದಿಯಲ್ಲಿ ಅಕ್ರಮಗಳಾಗಿವೆಯೇ? ಕೋವಿಡ್ ಚಿಕಿತ್ಸೆ ಹಾಗೂ ಕ್ವಾರಂಟೈನ್ ವಿಚಾರದಲ್ಲಿ ಅವ್ಯವಾರ ನಡೆದಿದೆಯೇ? ಈ ರೀತಿಯ ಕೊರೋನಾ ನಿಯಂತ್ರಣ ಸಂಬಂಧದ ವ್ಯವಹಾರ ಬಗ್ಗೆ ಗಂಭೀರ ಆರೋಪಗಳು ರಾಜ್ಯ ಸರ್ಕಾರದ ವಿರುದ್ಧ ಕೇಳಿಬರುತ್ತಿವೆ. ಈ ಆರೋಪಗಳ ಬಗ್ಗೆ ಕೆಲವು ದಿನಗಳಿಂದ ಹೇಳಿಕೆಗಳ ಮೂಲಕ ತಮ್ಮದೇ ಶಾಲಿಯಲ್ಲಿ ಹೋರಾಟ ನಿರತರಾಗಿರುವ ವಿಧಾಸಭೆಯ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಇದೀಗ ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಮತ್ತಷ್ಟು ಸಿಟ್ಟು ವ್ಯಕ್ತಪಡಿಸಿದ್ದಾರೆ. ಈ ಕುರಿತಂತೆ ಸರಣಿ ಟ್ವೀಟ್ ಮಾಡಿರುವ ಸಿದ್ದರಾಮಯ್ಯ, ಕೊರೋನಾ ಸಂದರ್ಭದಲ್ಲಿ ರಾಜ್ಯ ಸರ್ಕಾರ ಮಾಡಿರುವ ವೆಚ್ಚಗಳ ಲೆಕ್ಕ ಕೇಳಿದ್ದಾರೆ. ಅವರ ಈ ನಡೆ ರಾಜ್ಯ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಅವರು ಕೇಳಿರುವ ಸಾಲು-ಸಾಲು ಪ್ರಶ್ನೆಗಳು ಹೀಗಿವೆ:  ಕೊರೊನಾ…

ಕೆಎಸ್‌ಆರ್‌ಟಿಸಿ ನೌಕರರಿಗೆ 1 ವರ್ಷ ವೇತನರಹಿತ ರಜೆ ವಿಚಾರ; ಸರ್ಕಾರಕ್ಕೆ ಪ್ರತಿಪಕ್ಷ ತರಾಟೆ

ಬೆಂಗಳೂರು: ಕೊರೋನಾ ಹಾವಳಿ ಸಂದರ್ಭದಲ್ಲಿ ರಾಜ್ಯ ಸಾರಿಗೆ ಸಂಸ್ಥೆಯಲ್ಲಿನ ನೌಕರರಿಗೆ ಕಡ್ಡಾಯ ರಜೆ ನೀಡುವ ಆರೋಪ ಬಗ್ಗೆ ವಿಧಾಸಭೆಯ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಕೆಎಸ್‌ಆರ್‌ಟಿಸಿ ನೌಕರರಿಗೆ 1 ವರ್ಷ ವೇತನರಹಿತ ರಜೆ ನೀಡುವ ಆಲೋಚನೆ ಕಾರ್ಮಿಕ ವಿರೋಧಿ ಮಾತ್ರವಲ್ಲ ಅಮಾನವೀಯ ಕ್ರಮ ಎಂದು ಸಿದ್ದರಾಮಯ್ಯ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಕುರಿತಂತೆ ಟ್ವೀಟ್ ಮಾಡಿರುವ ಅವರು, ಕೆಎಸ್‌ಆರ್‌ಟಿಸಿಯ ಮೇಲ್ಪಂಕ್ತಿಯನ್ನು ಇತರ ಇಲಾಖೆಗಳು ಮತ್ತು‌ ಖಾಸಗಿ ಕಂಪೆನಿಗಳು ಅನುಸರಿಸಿದರೆ ಲಕ್ಷಾಂತರ ಕಾರ್ಮಿಕರ ಕುಟುಂಬದ ಪಾಡೇನು? ರಾಜ್ಯ ಸರ್ಕಾರ ದಿವಾಳಿಯಾಗಿದೆಯೇ? ಏನು ಪ್ರಶ್ನಿಸಿದ್ದಾರೆ. The proposal in front of @CMofKarnataka to impose compulsory leave without pay for KSRTC employees, is anti-labour & inhuman. Imagine the situation of lakhs of employees if the…

ಅನಗತ್ಯವಾಗಿ ಓಡಾಡಿದರೆ ಜೋಕೆ; ಸಿಲಿಕಾನ್ ಸಿಟಿ ಜನರಿಗೆ ಪೊಲೀಸ್ ಆಯುಕ್ತರ ಎಚ್ಚರಿಕೆ

ಬೆಂಗಳೂರು: ರಾಜ್ಯದಲ್ಲಿ ನಿತ್ಯವೂ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದು, ವೈರಾಣು ಹರಡದಂತೆ ತಡೆಯಲು ರಾಜಧಾನಿ ಬೆಂಗಳೂರು ಹಾಗೂ ಕೆಲವು ಜಿಲ್ಲೆಗಳಲ್ಲಿ ಲಾಕ್’ಡೌನ್ ಜಾರಿಗೊಳಿಸಲಾಗಿದೆ. ಆದರೆ ರಾಜಧಾನಿ ಬೆಂಗಳೂರಿನ ವಿದ್ಯಮಾನಗಳತ್ತ ಗಮನಹರಿಸಿದರೆ ಲಾಕ್’ಡೌ ಸನ್ನಿವೇಶ ಕಂಡುಬರುತ್ತಿಲ್ಲ. ಮಾರುಕಟ್ಟೆ ಪ್ರದೇಶಗಳಲ್ಲಿ ಜನಸಂದಣಿ ಎಂದಿನಂತಿದ್ದರೆ, ಬಸ್ ನಿಲ್ದಾಣ, ರೈಲು ನಿಲ್ದಾಣ ಬಳಿ ಭಾರೀ ಸಂಖ್ಯೆಯಲ್ಲಿ ಜನ ಜಮಾಯಿದ್ದರು. ರಾಜಧಾನಿಯ ರಸ್ತೆಗಳಲ್ಲಿ ವಾಹನ ಸಂಚಾರವೂ ಹೆಚ್ಚಾಗಿತ್ತು. ಈ ನಡುವೆ ಅನಗತ್ಯವಾಗಿ ಓಡಾಡಿದರೆ ಜೋಕೆ ಎಂಬ ಸಂದೇಶವನ್ನು ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ರವಾನಿಸಿದ್ದಾರೆ. ಲಾಕ್’ಡೌನ್ ಜಾರಿಯಾದ ನಂತರ ಮೊದಲ ದಿನವಾದ ಇಂದು ಬೆಳಗ್ಗೆ ಆಯುಕ್ತ ಎನ್. ಭಾಸ್ಕರ್ ರಾವ್ ನಗರ ಸುತ್ತಾಡಿ ಲಾಕ್ ಡೌನ್ ಹೇಗೆ ಜಾರಿಗೆ ಬಂದಿದೆ ಎಂದು ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಉದ್ದಿಗಾರರೊಂದಿಗೆ ಮಾತನಾಡಿದ ಪೊಲೀಸ್ ಆಯುಕ್ತರು, ಪರಿಸ್ಥಿತಿ ಅರ್ಥ ಮಾಡಿಕೊಂಡು ಜನರು ಸಹಕರಿಸಬೇಕಿದೆ ಎಂದರು.…

ಕರಾವಳಿ ಪಾತಕಿಯ ಬದುಕಿಗೆ ಹಾಸ್ಯರೂಪ; ‘ಕೋರಿ ಮಂಜೆ’ ಹೊಸ ಅವತಾರ ಸೃಷ್ಟಿಗೆ ಇಸ್ಮಾಯಿಲ್ ಮುನ್ನುಡಿ

ತುಳು ಸಿನಿ ಲೋಕದಲ್ಲಿ ಹೊಸ ಮನ್ವಂತರಕ್ಕೆ ಮುನ್ನುಡಿ ಬರೆಯಲು ವೇದಿಕೆಯೊಂದು ಸಜ್ಜಾಗುತ್ತಿದೆ. ದಶಕಗಳ ಹಿಂದೆ ‘ಬದ್ಕೆರೆ ಬುಡ್ಲೆ’, ‘ಬಂಗಾರ್ ಪಟ್ಲೆರ್’ ಮುಂತಾದ ಸಾಮಾಜಿಕ ಜೀವನ ಆಧಾರಿತ ಸಿನಿಮಾಗಳು ತುಳು ಸಿನಿ ಲೋಕದಲ್ಲಿ ಹೆಗ್ಗುರುತಾಗಿದೆಯಾದರೂ ಇತ್ತೀಚಿನ ವರ್ಷಗಳಲ್ಲಿ ಸಾಂಸಾರಿಕ ಕಥಾನಕಗಳಿಗಿಂತ ಹಾಸ್ಯ ಸನ್ನಿವೇಶಗಳನ್ನಾಧರಿಸಿದ ಸಿನಿಮಾಗಳಿಗೇ ಜನರ ಒಲವಿರುವುದು. ಹಾಗಾಗಿ ಹಾಸ್ಯ ರಂಜನೆಯತ್ತ ಸಿನಿ ಕರ್ತೃಗಳು ಒತ್ತು ನೀಡುತ್ತಿದ್ದಾರೆ. ಹೀಗಿರುವಾಗ ಪಾತಕ ಲೋಕದ ಕಥೆಯನ್ನು ಕೋಸ್ಟಲ್‌ವುಡ್‌ನ ಬೆಳ್ಳಿತರಯಲ್ಲಿ ಪ್ರತಿಬಿಂಬಿಸುವಂತೆ ಮಾಡಲು ಸಾಧ್ಯವೇ?  ಇಂಥದ್ದೊಂದು ಸಾಹಸಕ್ಕಿಳಿದಿದ್ದಾರೆ ಭರವಸೆಯ ನಿರ್ದೇಶಕ ಇಸ್ಮಾಯಿಲ್ ಮೂಡುಶೆಡ್ಡೆ. ಈಗಾಗಲೇ ‘ಬಣ್ಣ ಬಣ್ಣದ ಬದುಕು’, ‘ಪಮ್ಮಣ್ಣೆ ದಿ ಗ್ರೇಟ್’ ಸೇರಿದಂತೆ ಕನ್ನಡ ಹಾಗೂ ತುಳು ಸಿನಿಮಾ ಕ್ಷೇತ್ರಗಳಿಗೆ ಹಿಟ್ ಚಿತ್ರಗಳನ್ನು ನಿರ್ಮಿಸಿಕೊಟ್ಟಿರುವ ಮೂಡುಶೆಡ್ಡೆ ಇಸ್ಮಾಯಿಲ್, ಈ ಬಾರಿ ಪಾತಕ ಜಗತ್ತನ್ನು ವಿಭಿನ್ನ ರೀತಿಯಲ್ಲಿ ಅನಾವರಣ ಮಾಡುವ ಸಾಹಸಕ್ಕಿಳಿದಿದ್ದಾರೆ. ಕೋಸ್ಟಲ್‌ವುಡ್‌ನಲ್ಲಿ ರೌಡಿಯೊಬ್ಬನ ಕರಾಳ ಬದುಕನ್ನು ಹಾಸ್ಯರೂಪದಲ್ಲಿ ಥಳುಕು ಹಾಕಿಸುವ ಪ್ರಯತ್ನದಲ್ಲಿದ್ದಾರೆ.…

ಪಿಯುಸಿ ಫಲಿತಾಂಶ; ಯಾವ ಜಿಲ್ಲೆಗೆ ಎಷ್ಟನೇ ಸ್ಥಾನ ? ಇಲ್ಲಿದೆ ಮಾಹಿತಿ

ಬೆಂಗಳೂರು: ರಾಜ್ಯದ ಪಿಯುಸಿ ಫಲಿತಾಂಶ ಪ್ರಕಟವಾಗಿದೆ. ಕೊರೋನಾ ಕಾರಣದಿಂದಾಗಿ ವಿಳಂಬವಾದರೂ ಉತ್ತಮ ಫಲಿತಾಂಶ ಬಂದಿದೆ. ಈ ವರ್ಷ ಶೇಕಡಾ 68.73ರಷ್ಟು ಫಲಿತಾಂಶ ಬಂದಿದೆ ಎಂದರು. ಈ ಬಾರಿಯೂ ಹುಡುಗಿಯರೇ ಮೇಲಗೈ ಸಾಧಿಸಿದ್ದಾರೆ. ರಾಜ್ಯದಲ್ಲಿ ಶೇಕಡಾ 54.77 ವಿದ್ಯಾಥಿಗಳು ತೇರ್ಗಡೆ ಹೊಂದಿದ್ದಾರೆ . ಫಲಿತಾಂಶದಲ್ಲಿ ಉಡುಪಿ ಪ್ರಥಮ ಸ್ಥಾನದಲ್ಲಿದ್ದು, ದಕ್ಷಿಣ ಕನ್ನಡ ಎರಡನೇ ಸ್ಥಾನದಲ್ಲಿದೆ. ಮತ್ತು ಮೂರನೇ ಸ್ಥಾನ ಕೊಡಗು ಪಾಲಾಗಿದೆ. ಯಾವ ಜಿಲ್ಲೆಗೆ ಎಷ್ಟನೇ ಸ್ಥಾನ ? ಉಡುಪಿ – ಶೇ. 90.71 ದಕ್ಷಿಣ ಕನ್ನಡ- ಶೇ.90.71 ಕೊಡಗು- ಶೇ.81.53 ಉತ್ತರ ಕನ್ನಡ- ಶೇ.80.97 ಚಿಕ್ಕಮಗಳೂರು- ಶೇ.79.11 ಬೆಂಗಳೂರು ದಕ್ಷಿಣ- ಶೇ. 77.56 ಬೆಂಗಳೂರು ಉತ್ತರ – ಶೇ.75.54 ಬಾಗಲಕೋಟೆ- ಶೇ.74.59 ಚಿಕ್ಕಬಳ್ಳಾಪುರ- ಶೇ.73.74 ಶಿವಮೊಗ್ಗ- ಶೇ.72.19 ಹಾಸನ – ಶೇ.70.18 ಚಾಮರಾಜನಗರ- ಶೇ.69.29 ಬೆಂಗಳೂರು ಗ್ರಾಮಾಂತರ- ಶೇ.69.02 ಹಾವೇರಿ- ಶೇ.68.01 ಮೈಸೂರು- ಶೇ.67.98 ಕೋಲಾರ ಶೇ.67.42…

ಬೀದರ್ ಜಿಲ್ಲಾಸ್ಪತ್ರೆಯಲ್ಲಿ 53 ಮಂದಿಯ ಸಾವಿನ ಪ್ರಕರಣ; ವರದಿ ಕೇಳಿದ ಮುಖ್ಯಮಂತ್ರಿ

ಬೆಂಗಳೂರು : ರಾಜ್ಯದಲ್ಲಿ ಅಗೋಚರ ವೈರಾಣು ಹಾವಳಿ ವ್ಯವಸ್ಥೆಗೆ ಸವಾಲಾಗಿದ್ದು ಪರಿಸ್ಥಿತಿ ನಿಭಾಯಿಸಲು ಸರ್ಕಾರ ಹರಸಾಹಸ ಪಡುತ್ತಿದೆ. ಅದರಲ್ಲೂ ಕೊರೋನಾ ಸೋಂಕಿನಿಂದಾಗಿ ಬೀದರ್ ಜಿಲ್ಲಾಸ್ಪತ್ರೆಯಲ್ಲಿ 53 ಮಂದಿಯ ಸಾವಿನ ಪ್ರಕರಣ ಅನೇಕಾನೇಕ ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಈಗಾಗಲೇ ಕರ್ನಾಟಕ ಅತೀ ವೇಗದಲ್ಲಿ ಸೋಂಕು ಹರಡುವ ಪಟ್ಟಿಯಲ್ಲಿದೆ. ಅದಾಗಲೇ ಬೀದರ್ ಜಿಲ್ಲೆಯಲ್ಲಿನ ಈ ಸಾವಿನ ಪ್ರಕರಣ ಸರ್ಕಾರಕ್ಕೂ ಯಕ್ಷ ಪ್ರಶ್ನೆಯಾಗಿ ಕಾಡಿದೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪರಿಶೀಲನೆಗೆ ಮುಂದಾಗಿದ್ದಾರೆ. ಈ ಸಂಬಂಧ ತಜ್ಞರ ಸಮಿತಿಯಿಂದ ಅವರು ವರದಿ ಕೇಳಿದ್ದಾರೆ. ಜಿಲ್ಲಾಸ್ಪತ್ರೆಯಲ್ಲಿ ಕೆಲವು ಡೀನ್ಗಳಿಂದೀಚೆಗೆ 53 ಮಂದಿ ಸಾವನ್ನಪ್ಪಿದ್ದಾರೆನ್ನಲಾಗಿದ್ದು ಅವರಲ್ಲಿ ಕೋವಿಡ್-19 ಸೋಂಕು ಪತ್ತೆಯಾಗಿತ್ತೆನ್ನಲಾಗಿದೆ. ಈ ಪ್ರಕರಣದಿಂದಾಗಿ ಬೀದರ್ ದೇಶದ ಅಪಾಯಕಾರಿ ಜಿಲ್ಲೆಯ ಪಟ್ಟಿಯಲ್ಲಿ ಸೇರಿಕೊಂಡಿರುವುದರಿಂದಾಗಿ ಮುಖ್ಯಮಂತ್ರಿ ಕೂಡಾ ಅತಿಯಾಗಿ ತಲೆಕೆಡಿಸಿಕೊಂಡಿದ್ದಾರೆ.